Viral Video: ಮದ್ಯಪಾನವು ಜನರನ್ನು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತದೆ. ಅದಕ್ಕಾಗಿಯೇ ಕುಡಿದ ಜನರು ಹೆಚ್ಚಾಗಿ ಅಸಂಬದ್ಧವಾಗಿ ಮಾತನಾಡುತ್ತಾರೆ. ಅಂತದರಲ್ಲಿ ಪ್ರಾಣಿಗಳು ಕುಡಿದಾಗ ಏನೆಲ್ಲಾ ಆಗಬಹುದು ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.. ಇತ್ತೀಚೆಗೆ ಸೋಷಿಯಲ್ ಮಿಡಿಯಾಲ್ಲಿ ಮದ್ಯ ಸೇವಿಸಿದ ನಂತರ ಸಾಕುಪ್ರಾಣಿಗಳು ವಿಚಿತ್ರವಾಗಿ ವರ್ತಿಸುವುದನ್ನು ತೋರಿಸುವ ಅನೇಕ ವೀಡಿಯೊಗಳು ವೈರಲ್ ಆಗಿವೆ. ಈಗ ಸಾಕು ನಾಯಿ ಮಾಲೀಕ ಹಾಕಿಟ್ಟ ಎಣ್ಣೆ ಕುಡಿದಿದೆ.. ಮುಂದೆ ಏನಾಯಿತು ಎಂಬುದನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ.
ಕುಡಿದ ಮತ್ತಿನಲ್ಲಿ ನಾಯಿಯೊಂದು ಕಾಣಿಸಿಕೊಂಡಿರುವ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಎಲ್ಲರ ಗಮನ ಸೆಳೆಯುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಹಸ್ಕಿ ನಾಯಿಯೊಂದು ತನ್ನ ಮಾಲೀಕನ ಗ್ಲಾಸ್‌ನಿಂದ ಮದ್ಯ ಕುಡಿಯುತ್ತಿರುವುದು ಕಂಡುಬರುತ್ತದೆ. ನಂತರ, ಅದು ಪ್ರಜ್ಞೆ ತಪ್ಪಿ ಬಿದ್ದಿದೆ.. ಬಳಿಕ ಮಾಲೀಕ ಶಾಕ್ ಆಗಿ, ಅದನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾನೆ..
ಇದನ್ನೂ ಓದಿ-ಒಂದಾಗಿ ನೂರು ಕಾಲ ಚನ್ನಾಗಿರ್ತಾರೆ ಎಂದುಕೊಂಡಿದ್ದ ನಿರೂಪಕಿ ಬಾಳಲ್ಲಿ ಬಿರುಕು! ಶೀಘ್ರದಲ್ಲೇ ಡಿವೋರ್ಸ್?
ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟಿಜನ್‌ಗಳು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಕೆಲವು ಬಳಕೆದಾರರು ಇದನ್ನು ತುಂಬಾ ಮನರಂಜನೆ ಎಂದು ಬಣ್ಣಿಸಿದರೆ, ಇನ್ನು ಕೆಲವರು ಇದನ್ನು ಸಾಕುಪ್ರಾಣಿಗಳ ಮೇಲಿನ ಕ್ರೌರ್ಯ ಎಂದು ಕರೆದರು. ಇನ್ನೂ ಕೆಲವರು ಇದರ ಹಿಂದಿನ ಜವಾಬ್ದಾರಿಯ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ ಮತ್ತು ಸಾಕುಪ್ರಾಣಿಗಳ ಮೇಲಿನ ಇಂತಹ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ. ವೀಡಿಯೊದಲ್ಲಿರುವ ನಾಯಿಯ ವಿಚಿತ್ರ ವರ್ತನೆ ಎಲ್ಲರನ್ನೂ ನಗಿಸುತ್ತದೆ. ಕುಡುಕ ನಾಯಿಯ ಕಿಡಿಗೇಡಿತನದ ಬಗ್ಗೆ ಹಾಸ್ಯ ಮಾಡುತ್ತಾ ಅವರನ್ನು ಬಹಳಷ್ಟು ಟ್ರೋಲ್ ಮಾಡಲಾಗಿದೆ. ಅದನ್ನು ಮೀರಿ ಈ ಘಟನೆಯು ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ಮತ್ತು ಅಪಾಯಕಾರಿ ವಸ್ತುಗಳಿಂದ ಅವುಗಳನ್ನು ದೂರವಿಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದೆ.
ಇದಲ್ಲದೇ ಸಾಕುಪ್ರಾಣಿಗಳನ್ನು ರಕ್ಷಿಸುವುದು ಬಹಳ ಮುಖ್ಯ ಎಂಬುದನ್ನು ಈ ವೀಡಿಯೊ ಜನರಿಗೆ ಕಲಿಸಿದೆ. ಅವು ವ್ಯಸನಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಮತ್ತು ಅಂತಹ ಅಪಾಯಗಳನ್ನು ಎದುರಿಸದಂತೆ ಸರಿಯಾಗಿ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ..
ಇದನ್ನೂ ಓದಿ-ಒಂದಾಗಿ ನೂರು ಕಾಲ ಚನ್ನಾಗಿರ್ತಾರೆ ಎಂದುಕೊಂಡಿದ್ದ ನಿರೂಪಕಿ ಬಾಳಲ್ಲಿ ಬಿರುಕು! ಶೀಘ್ರದಲ್ಲೇ ಡಿವೋರ್ಸ್?









