ಹಾವುಗಳ 'ಮಧುಚಂದ್ರದ ತಾಣ' ಎಲ್ಲಿದೆ ಗೊತ್ತಾ? ಸಂಗಾತಿಗಳ ಜೊತೆ ಪ್ರಣಯದ ಆನಂದ ಪಡೆಯಲು ಇಲ್ಲಿ ಸೇರುತ್ತವೆ ಲಕ್ಷ ಲಕ್ಷ ಹಾವುಗಳು

Snake Honeymoon Spot: ಒಂದೇ ಒಂದು ಹಾವನ್ನು ನೋಡಿದರೆ ನಮ್ಮ ಎದೆ ನಡುಗುತ್ತೆ, ಹೀಗಿರುವಾಗ ನೂರು ಹಾವುಗಳನ್ನು ಒಂದೇ ಜಾಗದಲ್ಲಿ ನೋಡಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ?  

Written by - Zee Kannada News Desk | Last Updated : Apr 12, 2025, 10:33 AM IST
  • ಹಾವುಗಳನ್ನು ಕಂಡರೆ ಎಲ್ಲರೂ ಭಯ ಪಡುತ್ತಾರೆ, ಏಕೆಂದರೆ ಹಾವು ಕಚ್ಚಿದರೆ ವ್ಯಕ್ತಿ ಸೆಕೆಂಡುಗಳಲ್ಲಿ ಸಾವನ್ನಪ್ಪುತ್ತಾರೆ.
  • ಪ್ರಪಂಚದಾದ್ಯಂತದ ವಿಜ್ಞಾನಿಗಳು, ಪ್ರವಾಸಿಗರು ಮತ್ತು ಪ್ರಕೃತಿ ಪ್ರಿಯರನ್ನು ಇದು ಆಕರ್ಷಿಸುತ್ತದೆ.
  • ಒಂದು ಲಕ್ಷಕ್ಕೂ ಹೆಚ್ಚು ಹಾವುಗಳು ಇದೀಗ ಈ ತಾಣಕ್ಕೆ ವಲಸೆ ಹೋಗುತ್ತಿವೆ.
ಹಾವುಗಳ 'ಮಧುಚಂದ್ರದ ತಾಣ' ಎಲ್ಲಿದೆ ಗೊತ್ತಾ? ಸಂಗಾತಿಗಳ ಜೊತೆ ಪ್ರಣಯದ ಆನಂದ ಪಡೆಯಲು ಇಲ್ಲಿ ಸೇರುತ್ತವೆ ಲಕ್ಷ ಲಕ್ಷ ಹಾವುಗಳು

Snake Honeymoon Spot: ಹಾವುಗಳನ್ನು ಕಂಡರೆ ಎಲ್ಲರೂ ಭಯ ಪಡುತ್ತಾರೆ, ಏಕೆಂದರೆ ಹಾವು ಕಚ್ಚಿದರೆ ವ್ಯಕ್ತಿ ಸೆಕೆಂಡುಗಳಲ್ಲಿ ಸಾವನ್ನಪ್ಪುತ್ತಾರೆ. ಆದರೆ, ಈ ಹಾವುಗಳನ್ನು ನೋಡಲೆಂದೆ ಜನರು ಒಂದು ಸ್ಥಳಕ್ಕೆ ದಂಡು ದಂಡಾಗಿ ಆಗಮಿಸುತ್ತಾರೆ, ಅಷ್ಟಕ್ಕೂ ಆ ಸ್ಥಳ ಯಾವುದು? ಅಲ್ಲಿ ಜನ ಗುಂಪು ಗುಂಪಾಗಿ ಸೇರುವುದಾದರೂ ಏಕೆ? ತಿಳಿಯಲು ಮುಂದೆ ಓದಿ...

Add Zee News as a Preferred Source

ಕೆಲವೇ ಕೆಲವು ಹಾವುಗಳಲ್ಲ, ಹತ್ತಾರು ಸಾವಿರ ಹಾವುಗಳನ್ನು ಒಂದೇ ಸ್ಥಳದಲ್ಲಿ ನೋಡುವುದನ್ನು ಊಹಿಸಿಕೊಳ್ಳಿ. ಭಯಾನಕವೆನಿಸುತ್ತದೆ, ಅಲ್ವಾ? ಆದರೆ ಒಂದು ಸಣ್ಣ ಕೆನಡಾದ ಪಟ್ಟಣದಲ್ಲಿ, ಈ ದೃಶ್ಯವು ಪ್ರತಿ ವಸಂತಕಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು, ಪ್ರವಾಸಿಗರು ಮತ್ತು ಪ್ರಕೃತಿ ಪ್ರಿಯರನ್ನು ಇದು ಆಕರ್ಷಿಸುತ್ತದೆ. 

ಇದನ್ನೂ ಓದಿ:ದಟ್ಟ ಕಾನನದಲ್ಲಿ ದೈತ್ಯರ ಘೋರ ಯುದ್ಧ..! ಗಜರಾಜನನ್ನೇ ಸುತ್ತಿಕೊಂಡ ಅನಕೊಂಡ.. ಭಯಾನಕ ವಿಡಿಯೋ ವೈರಲ್‌

ಪ್ರತಿ ವರ್ಷ, ಮಾರ್ಚ್ ಮತ್ತು ಜೂನ್ ನಡುವೆ, 75,000 ಕ್ಕೂ ಹೆಚ್ಚು ಹಾವುಗಳು ತಮ್ಮ  ಗುಹೆಗಳಿಂದ ಹೊರಬಂದು ನಾರ್ಸಿಸ್ ಹಾವಿನ ಗುಹೆಗಳಿಗೆ ವಲಸೆ ಹೋಗುತ್ತವೆ. ಕೆಲವು ವರ್ಷಗಳಿಂದ 75000 ಅಲ್ಲ, ಒಂದು ಲಕ್ಷಕ್ಕೂ ಹೆಚ್ಚು ಹಾವುಗಳು ಇದೀಗ ಈ ತಾಣಕ್ಕೆ ವಲಸೆ ಹೋಗುತ್ತಿವೆ. ಇದು ಕೇವಲ ನೈಸರ್ಗಿಕ ಅದ್ಭುತವಲ್ಲ, ಹಾವುಗಳ ಸಂಯೋಗದ ಋತುವಿನ ಪ್ರಮುಖ ಭಾಗ. 

ಕೆನಡಾದಲ್ಲಿ, ಹಾವುಗಳಲ್ಲಿ ಚಳಿಗಾಲದಲ್ಲಿ ಸುಣ್ಣದ ಕಲ್ಲಿನ ಬಿರುಕುಗಳಲ್ಲಿ ಆಳವಾದ ಭೂಮಿಯೊಳಗೆ ಹೈಬರ್ನೇಟ್ ಆಗುತ್ತವೆ. ಹಿಮ ಕರಗಿ ತಾಪಮಾನ ಹೆಚ್ಚಾದಂತೆ, ಗಂಡು ಹಾವುಗಳು ಮೊದಲು ಎಚ್ಚರಗೊಳ್ಳುತ್ತವೆ. ದೊಡ್ಡ ಸಂಖ್ಯೆಯಲ್ಲಿ ಹೊರ ಬರಲು ಆರಂಭಿಸುತ್ತವೆ. ಸಂಯೋಗಕ್ಕಾಗಿ ಹೆಣ್ಣು ಹಾವುಗಳನ್ನು ಹುಡುಕುತ್ತವೆ. ಹೆಣ್ಣು ಹಾವು ಕಾಣಿಸಿಕೊಂಡ ತಕ್ಷಣ,ಗುಂಪು ಗುಂಪಾಗಿ ಗಂಡು ಹಾವುಗಳು, ಹೆಣ್ಣು ಹಾವುಗಳನ್ನು ಮುತ್ತಿಕೊಳ್ಳಲು ಆರಂಭಿಸುತ್ತವೆ.  ಇದರ ಪರಿಣಾಮವಾಗಿ ವಿಜ್ಞಾನಿಗಳು ಇದನ್ನು "ಸಂಯೋಗದ ಚೆಂಡು" ಎಂದು ಕರೆಯುತ್ತಾರೆ.

ಇದನ್ನೂ ಓದಿ:ಅದೃಷ್ಟ ಅಂದ್ರೆ ಇದಪ್ಪಾ..!ಹೊಲದ ಬದಿ ಇದ್ದ ಒಂದೇ ಒಂದು ಮರದಿಂದ ಕೋಟ್ಯಾಧಿಪತಿಯಾದ ಬಡ ರೈತ.. ಹೇಗೆ ಗೊತ್ತೆ..?

ಇದು ಭಯಾನಕ ದೃಶ್ಯದಂತೆ ತೋರುತ್ತಿದ್ದರೂ, ಇದು ಪರಿಸರ ವ್ಯವಸ್ಥೆಯಲ್ಲಿನ ಒಂದು ನಿರ್ಣಾಯಕ ವಿದ್ಯಮಾನವಾಗಿದೆ. ಈ ಘಟನೆಯು ಸಂಶೋಧಕರಿಗೆ ಹಾವಿನ ನಡವಳಿಕೆ, ಶಿಶಿರ ನಿದ್ರೆಯ ಮಾದರಿಗಳು ಮತ್ತು ಸಂಯೋಗದ ರೀತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮುಂಚೆ ಇದು ಸವಾಲುಗಳಿಲ್ಲದೆ ಇರಲಿಲ್ಲ, ಒಂದು ಕಾಲದಲ್ಲಿ ಹಾವುಗಳು ಗುಂಪು ಗುಂಪುಗಳಾಗಿ ರಸ್ತೆ ಮEಲೆ ತೆವಳಿ ಹೋಗಲು ಆರಂಭಿಸಿದ್ದವು, ಆದರೆ ವಾಹನಗಳು ಈ ಹಾವುಗಳ ಮೇಲೆ ಹರಿದು ಪ್ರಾಣ ಕಳೆದುಕೊಳ್ಳುತ್ತಿದ್ದವು. ಅವುಗಳನ್ನು ರಕ್ಷಿಸಲು, ಸಂರಕ್ಷಣಾಕಾರರು ಭೂಗತ ಸುರಂಗಗಳು ಮತ್ತು ಬೇಲಿ ವ್ಯವಸ್ಥೆಗಳನ್ನು ನಿರ್ಮಿಸಲಾಯಿತು, ಇದು ಸಹಾಯದಿಂದ ವಾಹನಗಳಿಗೆ ಸಿಕ್ಕದೆ ಸುರಂಗ ಮಾರ್ಗಗಳಲ್ಲಿ ಹೋಗುವ ಮೂಲಕ ಹಾವುಗಳು ಆ ಸ್ಥಳವನ್ನು ಸೇರುತ್ತದೆ.

ಇದನ್ನೂ ಓದಿ:Viral Video: ಪುಟ್ಟ ಬಾಲಕಿಯ ಮೇಲೆ ಹದ್ದುವಿನ ಡೆಡ್ಲಿ ಅಟ್ಯಾಕ್‌! ಆಹಾರ ಸಿಕ್ತು ಅಂತ ಬಾಲಕಿಯನ್ನು ಕಾಲಿನಲ್ಲಿ ಹಿಡಿದ ರಣ ಬೇಟೆಗಾರ..ಮುಂದೆ ಆಗಿದ್ದೇನು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News