)
King cobra viral video : ಪ್ರಸ್ತುತ, ಹಾವುಗಳಿಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿವೆ. ವಿಶೇಷವಾಗಿ ಕೆಲವು ವನ್ಯಜೀವಿ ಸಂರಕ್ಷಣಾಕಾರರು ಹಂಚಿಕೊಂಡ ವೀಡಿಯೊಗಳು ನೆಟಿಜನ್ಗಳನ್ನು ಆಕರ್ಷಿಸುತ್ತಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿವೆ.. ಇತ್ತೀಚೆಗೆ, ವನ್ಯಜೀವಿ ಸಂರಕ್ಷಣಾಕಾರರು ಹಂಚಿಕೊಂಡ ದೃಶ್ಯವೊಂದ ನೆಟ್ಟಿಗರ ಗಮನ ಸೆಳೆಯುತ್ತಿದೆ..
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಂದು ಸಣ್ಣ ದೇವಸ್ಥಾನದ ಮೇಲೆ ಮಲಗಿದ್ದ ನಾಗರವೊಂದು ಬುಸುಗುಡುವ ಅತ್ಯಂತ ಅಪಾಯಕಾರಿ ದೃಶ್ಯವನ್ನು ಕಾಣಬಹುದು. ಕಲ್ಲಿನ ದೇವಸ್ಥಾನದ ಮೇಲೆ ಹೆಡೆ ಎತ್ತಿ ಕುಳಿತು, ಬುಸುಗುಡುತ್ತಿರುವುದನ್ನು ನೀವು ನೋಡಬಹುದು. ಸಾಮಾನ್ಯವಾಗಿ, ದೇವಸ್ಥಾನಗಳಲ್ಲಿ ಇಂತಹ ಹಾವುಗಳನ್ನು ನೋಡುವುದು ಬಹಳ ಅಪರೂಪ.
ಈ ವೀಡಿಯೊವನ್ನು ನೋಡಿದ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ದೇವಾಲಯದ ಮೇಲಿರುವ ಈ ಹಾವು ತುಂಬಾ ಶಕ್ತಿಶಾಲಿ ಮತ್ತು ಕೆಲವು ವಿಶೇಷ ಶಕ್ತಿಯನ್ನು ಹೊಂದಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಹಾವು ಅಪಾಯವನ್ನು ಗ್ರಹಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬುಸುಗುಡುತ್ತಿದೆ ಅಂತ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಈ ವೈರಲ್ ವೀಡಿಯೊವನ್ನು ಸರ್ಪೆಂಟ್ ಶಾರ್ಟ್ಸ್ ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ. ಇಲ್ಲಿಯವರೆಗೆ, 62,000 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಒಟ್ಟಾರೆಯಾಗಿ.. ವಿಡಿಯೋ ನೋಡುಗರಿಗೆ ಎದೆ ಢವಢವ ಎನಿಸುವಂತಿದೆ..