Watch: ಮೈದಾನದಲ್ಲೇ ರಿಂಕು ಸಿಂಗ್‌ಗೆ ಕಪಾಳಮೋಕ್ಷ ಮಾಡಿದ ಕುಲದೀಪ್ ಯಾದವ್!! ವಿಡಿಯೋ ವೈರಲ್ ‌

DC vs KKR: ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ತವರು ನೆಲದಲ್ಲಿ KKR ವಿರುದ್ಧದ ಪಂದ್ಯದಲ್ಲಿ 14 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಆದರೆ ಈ ಪಂದ್ಯದ ನಂತರ ಯಾರೂ ನಿರೀಕ್ಷಿಸದ ಘಟನೆಯೊಂದು ನಡೆದಿದೆ. ಮೈದಾನದಲ್ಲಿಯೇ ರಿಂಕು ಸಿಂಗ್‌ಗೆ ಕುಲದೀಪ್ ಯಾದವ್ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Written by - Puttaraj K Alur | Last Updated : Apr 30, 2025, 04:54 PM IST
  • ಮೈದಾನದಲ್ಲೇ ರಿಂಕು ಸಿಂಗ್‌ಗೆ ಕಪಾಳಮೋಕ್ಷ ಮಾಡಿದ ಕುಲದೀಪ್ ಯಾದವ್!
  • ಎರಡು ಬಾರಿ ಕಪಾಳ ಮೋಕ್ಷ ಮಾಡಿದ ಕುಲದೀಪ್‌ ಮೇಲೆ ರಿಂಕು ಸಿಂಗ್‌ ಕೋಪ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
Watch: ಮೈದಾನದಲ್ಲೇ ರಿಂಕು ಸಿಂಗ್‌ಗೆ ಕಪಾಳಮೋಕ್ಷ ಮಾಡಿದ ಕುಲದೀಪ್ ಯಾದವ್!! ವಿಡಿಯೋ ವೈರಲ್ ‌

DC vs KKR: ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ 14 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 204 ರನ್ ಗಳಿಸಿತು, ಬೃಹತ್‌ ಮೊತ್ತದ ಗುರಿಯನ್ನು ಬೆನ್ನಟ್ಟಿದ ದೆಹಲಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯ ಮುಗಿದ ನಂತರ ಕುಲದೀಪ್ ಯಾದವ್ ಮತ್ತು ರಿಂಕು ಸಿಂಗ್ ನಡುವಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದರಲ್ಲಿ ಕುಲದೀಪ್ ಮಾತನಾಡುತ್ತಾ ರಿಂಕುಗೆ ಕಪಾಳಮೋಕ್ಷ ಮಾಡಿದ್ದಾರೆ.

Add Zee News as a Preferred Source

ಇದನ್ನೂ ಓದಿ: ರಿತಿಕಾ ನೋಟಕ್ಕೆ ಹಿಟ್‌ಮ್ಯಾನ್ ಕ್ಲೀನ್ ಬೌಲ್ಡ್.. 6 ವರ್ಷ ಡೇಟಿಂಗ್‌.! ರೋಹಿತ್ ರೊಮ್ಯಾಂಟಿಕ್‌ ಲವ್‌ ಸ್ಟೋರಿ.. ಯಾವ ಸಿನಿಮಾಗೂ ಕಡಿಮೆಯಿಲ್ಲ.. 

ಕೋಪಗೊಂಡ ರಿಂಕು ಸಿಂಗ್!!

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯ ಮುಗಿದ ನಂತರ ಎರಡೂ ತಂಡಗಳ ಆಟಗಾರರು ಮೈದಾನದಲ್ಲಿ ಪರಸ್ಪರ ಮಾತನಾಡುತ್ತಿದ್ದರು. ಈ ವೇಳೆ ಕುಲದೀಪ್ ಯಾದವ್ ಮತ್ತು ರಿಂಕು ಸಿಂಗ್ ನಡುವೆ ತಮಾಷೆ ನಡೆಯುತ್ತಿತ್ತು. ಈ ಸಮಯದಲ್ಲಿ ಕುಲದೀಪ್ ಇದ್ದಕ್ಕಿದ್ದಂತೆ ರಿಂಕುಗೆ ಕಪಾಳಮೋಕ್ಷ ಮಾಡಿದರು. ಇದರಿಂದ ಅವರು ಸ್ವಲ್ಪ ಆಶ್ಚರ್ಯಚಕಿತರಾದರು. ಸಹ ಆಟಗಾರರು ಸಹ ಈ ವೇಳೆ ಶಾಕ್‌ನಿಂದ ಇವರಿಬ್ಬರನ್ನೂ ನೋಡುತ್ತಿದ್ದರು. ಮೊದಲ ಕಪಾಳಮೋಕ್ಷದ ನಂತರ, ರಿಂಕು ಸಿಂಗ್ ತಕ್ಷಣ ಕುಲದೀಪ್‌ಗೆ ಏನೋ ಹೇಳುತ್ತಿರುವುದು ಕಂಡುಬಂದಿತು. ನಂತರ ಕುಲದೀಪ್ ಮತ್ತೆ ರಿಂಕುಗೆ ಕಪಾಳಮೋಕ್ಷ ಮಾಡಿದರು. ಇದರಿಂದ ರಿಂಕು ಸ್ವಲ್ಪ ಕೋಪಗೊಂಡಂತೆ ಕಂಡುಬಂದರು. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.   

ಇದನ್ನೂ ಓದಿ: Vaibhav Suryavanshi : ಯುವ ಬ್ಯಾಟ್ಸ್‌ಮನ್ ವೈಭವ್ ಎಷ್ಟನೇ ತರಗತಿ, ಅವರು ಓದುತ್ತಿರುವ ಶಾಲೆ ಯಾವುದು ಗೊತ್ತೆ..?

12 ವಿಕೆಟ್‌ ಕಬಳಿಸಿರುವ ಕುಲದೀಪ್‌

ಐಪಿಎಲ್ 2025ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕುಲದೀಪ್ ಯಾದವ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು 10 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರ ಸರಾಸರಿ 19.50 ಆಗಿದೆ. ಈ ಋತುವಿನಲ್ಲಿ ಕುಲದೀಪ್ ಯಾದವ್ ಅವರ economy rate 6.74 ಆಗಿದೆ. ಮತ್ತೊಂದೆಡೆ ರಿಂಕು ಸಿಂಗ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಅವರು ನಿರೀಕ್ಷೆಗಳನ್ನು ಪೂರೈಸಿಲ್ಲ. ಒಟ್ಟು 10 ಪಂದ್ಯಗಳಲ್ಲಿ ಆಡಿರುವ ರಿಂಕು 33.80 ಸರಾಸರಿಯಲ್ಲಿ ಕೇವಲ 169 ರನ್ ಗಳಿಸಿದ್ದಾರೆ ಅವರ ಬ್ಯಾಟ್‌ನಿಂದ ಒಂದೇ ಒಂದು ಅರ್ಧಶತಕದ ಇನ್ನಿಂಗ್ಸ್ ಕೂಡ ದಾಖಲಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News