)
Leopard Viral Video News: ಚಿರತೆಯೊಂದು ರಸ್ತೆಬದಿಯೇ ಮಲಗಿ ಹೊರಳಾಡಿದ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಬಳಿ ನಿನ್ನೆ (ಅ.30) ತಡರಾತ್ರಿ ನಡೆದಿದೆ.
ಕರ್ನಾಟಕ ತಮಿಳುನಾಡು ಹೆದ್ದಾರಿಯಯಲ್ಲಿ ಅಸನೂರು ಮಾರ್ಗವಾಗಿ ದಿಂಬಂಗೆ ಸಾಗುವ ದಾರಿ ಮಧ್ಯೆ ರಸ್ತೆ ಬದಿಯಲ್ಲೇ ಹುಲ್ಲಿನ ಹಾಸಿನ ಮೇಲೆ ಮಲಗಿದ್ದ ಚಿರತೆಯೊಂದು ಹೊರಳಾಡುತ್ತಿದ್ದದ್ದು ಕಂಡು ಬಂದಿದೆ.
ಇನ್ನು ಹೆದ್ದಾರಿಗೆ ಹೊಂದುಕೊಂಡಂತೆ ಇರುವ ರಸ್ತೆ ಬದಿಯಲ್ಲಿ ವ್ಯಾಘ್ರ್ಯನ ಹೊರಳಾಟದ ವಿಡಿಯೋವನ್ನು ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ.
ಚಿರತೆಯ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
ಕಳೆದ ಕೆಲವು ದಿನಗಳಿಂದ ಚಿರತೆ ಈ ದಾರಿಯಲ್ಲಿ ಚಿರತೆ ಓಡಾಟ ಹೆಚ್ಚಾಗಿರುವುದರಿಂದ ಈ ಮಾರ್ಗವಾಗಿ ಸಂಚರಿಸುವವರು ಯಾರೂ ಸಹ ವಾಹನಗಳಿಂದ ಕೆಳಗಿಳಿದು ಹುಚ್ಚಾಟ ನಡೆಸಬಾರದು ಎಂದು ತಮಿಳುನಾಡು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.