viral video: ಅಯ್ಯೋ ದೇವರೇ..! ವಿಷಕಾರಿ ಕಿಂಗ್‌ ಕೋಬ್ರಾವನ್ನ ಆಟಿಕೆ ಮಾಡಿಕೊಂಡ ಪುಟ್ಟ ಮಗು..!

Little Boy Playing With King Cobra: ಪ್ರಸ್ತುತ ಇಂಟರ್ನೆಟ್‌ನಲ್ಲಿ ಆಟಿಕೆಗಳಂತೆ ವಿಷಕಾರಿ ಕಾಳಿಂಗ ಸರ್ಪದ ಜೊತೆಗೆ ಆಟವಾಡುವ ಮಗುವಿನ ದೃಶ್ಯಗಳು ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಹೌಹಾರಿದ್ದಾರೆ.  

Written by - Puttaraj K Alur | Last Updated : Jun 29, 2025, 05:48 PM IST
  • ವಿಷಕಾರಿ ಕಿಂಗ್‌ ಕೋಬ್ರಾ ಜೊತೆಗೆ ಪುಟ್ಟ ಮಗುವಿನ ಆಟ
  • ಅಪಾಯಕಾರಿ ವಿಷ ಸರ್ಪವನ್ನೇ ಆಟಿಕೆ ಮಾಡಿಕೊಂಡ ಮಗು
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್
viral video: ಅಯ್ಯೋ ದೇವರೇ..! ವಿಷಕಾರಿ ಕಿಂಗ್‌ ಕೋಬ್ರಾವನ್ನ ಆಟಿಕೆ ಮಾಡಿಕೊಂಡ ಪುಟ್ಟ ಮಗು..!

Snake viral video: ಹಾವು ಹಿಡಿಯುವ ನಿಪುಣರನ್ನ ಹೊರತುಪಡಿಸಿ ಬಹುತೇಕ ಜನರು ಹಾವುಗಳನ್ನು ಕಂಡರೆ ಜೀವಭಯದಿಂದ ಓಡಿಹೋಗುತ್ತಾರೆ. ಏಕೆಂದರೆ ಹಾವುಗಳು ತುಂಬಾ ಅಪಾಯಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಕೆಲವು ಜನರು ಹಾವುಗಳು ತಮ್ಮ ಕಡೆಗೆ ಬರುತ್ತಿವೆ ಎಂದು ತಿಳಿದರೆ ಸಾಕು ಓಡಿಹೋಗುತ್ತಾರೆ. ಹಾವು ಕಚ್ಚಿದರೆ ವಿಷವು ದೇಹದಾದ್ಯಂತ ಹರಡಿ ಕ್ಷಣಮಾತ್ರದಲ್ಲಿ ಸಾವನ್ನಪ್ಪಬಹುದು. ಅದಕ್ಕಾಗಿಯೇ ಅನೇಕ ಜನರು ಅವುಗಳ ಹತ್ತಿರ ಹೋಗಲು ಹಿಂಜರಿಯುತ್ತಾರೆ. ಅನೇಕರಿಗೆ ರಸ್ತೆಯಲ್ಲಿ ಏನಾದರೂ ಕಂಡರೆ ಅಥವಾ ಸಪ್ಪಳ ಮಾಡಿದ್ರೆ ಹಾವು ಅನ್ನೋ ಭಯ ಇರುತ್ತದೆ. ಆದರೆ ಇತ್ತೀಚೆಗೆ ಪುಟ್ಟ ಮಗುವೊಂದು ಅತ್ಯಂತ ಅಪಾಯಕಾರಿ ಕಿಂಗ್ ಕೋಬ್ರಾವನ್ನ ಆಟಕೆಯಂತೆ ಹಿಡಿದಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.

Add Zee News as a Preferred Source

ಏನೂ ತಿಳಿಯದ ಸಣ್ಣ ಮಗು ವಿಷಕಾರಿ ಕಾಳಿಂಗ ಸರ್ಪವನ್ನ ಹಿಡಿದಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಇದಲ್ಲದೆ ಮಗು ಹಾವನ್ನು ಹಿಡಿದ ರೀತಿ ಇಬ್ಬರ ನಡುವಿನ ಸ್ನೇಹವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಲ್ಲಿದ್ದ ಕೆಲವರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. @srk9484 ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ೩೦ ಸೆಕೆಂಡುಗಳ ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ. 

ಇದನ್ನೂ ಓದಿ: ರಸ್ತೆ ಬಿಟ್ಟು, ರೈಲ್ವೇ ಹಳಿಗಳ ಮೇಲೆ ಕಾರು ಚಲಾಯಿಸಿದ ಯುವತಿ.. 15 ರೈಲುಗಳ ಮಾರ್ಗ ಬದಲಾವಣೆ..! ಆಘಾತಕಾರಿ ವಿಡಿಯೋ ವೈರಲ್‌

ವೈರಲ್‌ ಆಗಿರೋ ಈ ವಿಡಿಯೋದಲ್ಲಿ ಕೆಲವೇ ತಿಂಗಳ ಪುಟ್ಟ ಮಗುವೊಂದು ಆಟಿಕೆ ಎಂದು ಭಾವಿಸಿ ಕೆಳಗೆ ಬಿದ್ದಿದ್ದ ಬೃಹತ್‌ ಕಾಳಿಂಗ ಸರ್ಪವನ್ನ ಒಂದು ಕೈಯಿಂದ ಹಿಡಿದಿದೆ. ಹಾವು ಆತನ ಅಕ್ಕಪಕ್ಕವೇ ಸುಳಿದಾಡಿದೆ. ಪುಟ್ಟ ಮಗು ಅದಕ್ಕೆ ಕೈಬಡಿಯುತ್ತಾ ಆಟವಾಡಿದೆ. ಮಗು ಎಷ್ಟೇ ರೀತಿ ಕೈಬಡಿಸಿದರೂ ಹಾವು ಮಗುವಿಗೆ ಕಚ್ಚಿಲ್ಲ. ಅದು ಮಗುವಿನ ಸುತ್ತಮುತ್ತವೇ ಸುಳಿದಾಡಿದೆ.

ಈ ವಿಡಿಯೋವನ್ನ ನೂರಾರು ಜನರು ವೀಕ್ಷಿಸಿದ್ದು, ಆಘಾತದ ಜೊತೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಾಳಿಂಗ ಸರ್ಪದ ಜೊತೆಗೆ ಮಗು ಆಡುತ್ತಿರುವ ದೃಶ್ಯಕ್ಕೆ ಅನೇಕರು ಶಾಕ್‌ ಆಗಿದ್ದಾರೆ. ಇನ್ನೂ ಕೆಲವರು ಅದು ಸಾಕಿರುವವ ಹಾವು. ಹೀಗಾಗಿ ಹುಡುಗನ ಮೇಲೆ ಯಾವುದೇ ರೀತಿ ದಾಳಿ ಮಾಡಿಲ್ಲ ಅಂತಾ ಹೇಳಿದ್ದಾರೆ. ಇನ್ನು ಕೆಲವರು ಅದು ಹಾವಿನ ರೂಪದಲ್ಲಿದ್ದ ದೇವರು, ಅದಕ್ಕಾಗಿಯೇ ಅದು ಹುಡುಗನ ಮೇಲೆ ದಾಳಿ ಮಾಡಲಿಲ್ಲʼವೆಂದು ಹೇಳಿದ್ದಾರೆ.  

ಇದನ್ನೂ ಓದಿ: ಳಿ ವಯಸ್ಸಿನಲ್ಲೂ ಸ್ವಾಭಿಮಾನದ ಜೀವನ: ಇಡ್ಲಿ-ಸಾಂಬಾರ್ ಮಾರಾಟದ ಮೂಲಕ ಎಲ್ಲರ ಮನಗೆದ್ದ ಅಜ್ಜಿ..! ವಿಡಿಯೋ ವೈರಲ್ 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News