)
man feeds alcohol to tiger, shocking video got viral : ಮಧ್ಯಪ್ರದೇಶದ ಪೆಂಚ್ನಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 52 ವರ್ಷದ ದಿನಗೂಲಿ ಕಾರ್ಮಿಕ ರಾಜು ಪಟೇಲ್ ಕುಡಿದ ಮತ್ತಿನಲ್ಲಿ ಹುಲಿಯ ತಲೆಯನ್ನೇ ಸವರಿ, ಕೈಯಲ್ಲಿದ್ದ ಮದ್ಯವನ್ನು ಕೊಡಲು ಹೋಗಿದ್ದಾನೆ! ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೊ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ಅಕ್ಟೋಬರ್ 4, 2025ರ ರಾತ್ರಿ ಈ ಘಟನೆ ನಡೆದಿದೆ. ಆ ರಾತ್ರಿ ರಾಜು ಪಟೇಲ್ ಸಾಕಷ್ಟು ಮದ್ಯ ಸೇವಿಸಿದ್ದ. ಮನೆಗೆ ಹಿಂತಿರುಗುವ ವೇಳೆ ರಸ್ತೆಯಲ್ಲಿ ದೊಡ್ಡ ಹುಲಿಯೊಂದು ಎದುರಾದರೂ, ಆತ ಹೆದರದೇ ಮುಂದೆ ಹೋದ. ವಿಡಿಯೋದಲ್ಲಿ ಕಾಣುವಂತೆ, ರಾಜು ಹುಲಿಯ ತಲೆಯ ಮೇಲೆ ಕೈಯಿಟ್ಟು ಮುದ್ದಿಸುತ್ತಾನೆ. ಅಷ್ಟೇ ಅಲ್ಲ, ಕೈಯಲ್ಲಿ ಹಿಡಿದಿದ್ದ ಮದ್ಯದ ಬಾಟಲಿಯನ್ನು ಹುಲಿಗೆ ಕೊಡಲು ಪ್ರಯತ್ನಿಸುತ್ತಾನೆ. ಹುಲಿಯೂ ಅದನ್ನು ಕುಡಿಯುತ್ತಿರುವಂತೆ ದೃಶ್ಯದಲ್ಲಿ ಕಾಣುತ್ತದೆ.
ಈ ದೃಶ್ಯಗಳನ್ನು ಪೆಂಚ್ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆಯ ಸಿಸಿಟಿವಿ ಕ್ಯಾಮೆರಾ ದಾಖಲಿಸಿದ್ದು, ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ವೈರಲ್ ಆದ ನಂತರ ಜನರು ರಾಜು ಪಟೇಲ್ನ ಧೈರ್ಯವನ್ನು ಪ್ರಶಂಸಿಸುತ್ತಿದ್ದಾರೆ. "ಇಂಥ ಧೈರ್ಯ ಯಾರಿಗಿದೆ?" "ಈತನಿಗೆ ಹುಲಿಯೇ ಗೆಳೆಯನೋ?" ಎಂಬ ಕಾಮೆಂಟ್ಗಳು ಹಬ್ಬಿಕೊಂಡಿವೆ.
ಆದರೆ ತಜ್ಞರು ಈ ವೀಡಿಯೊ ನಿಜವಾಗಿಲ್ಲ ಎಂದು ಹೇಳುತ್ತಿದ್ದಾರೆ. ಕೆಲವು ವನ್ಯಜೀವಿ ಅಧಿಕಾರಿಗಳು ಮತ್ತು ತಂತ್ರಜ್ಞಾನ ತಜ್ಞರು ಇದು AI ಮೂಲಕ ಸೃಷ್ಟಿಸಲಾದ ನಕಲಿ ವೀಡಿಯೊ ಎಂದು ಅಭಿಪ್ರಾಯಪಟ್ಟಿದ್ದಾರೆ. "ಈ ಯುಗದಲ್ಲಿ ನಿಜ-ಸುಳ್ಳು ಹೇಳುವುದು ಕಷ್ಟ," ಎಂದು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.
On October 4, 2025, in Pench, India, a surreal moment was captured on CCTV. The photo shows Raju Patel, a 52-year-old laborer, patting a tiger he mistook for a "big cat" after a late-night card game. Tipsy from homemade liquor, Raju stumbled onto a street where a sub-adult Bengal… pic.twitter.com/FXbZsGeawy
— Constituent 🇺🇸🌺🐦🕊️ 🕉️ (@808constituent) October 23, 2025