ಟೀ ಕುಡಿದು ರೀಲ್ಸ್ ಮಾಡಿದ ವ್ಯಕ್ತಿ ಜೈಲು ಪಾಲು: ವಿಡಿಯೋ ವೈರಲ್

Viral Video: ನೀತಿ ನಿಯಮಗಳನ್ನು ಗಾಳಿಗೆ ತೋರಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಭೂಪ ಈಗ ಪೊಲೀಸರ ಅತಿಥಿಯಾಗಿದ್ದಾನೆ. 

Written by - Yashaswini V | Last Updated : Apr 18, 2025, 09:16 AM IST
  • ರೀಲ್ಸ್ ಮಾಡಿದವನಿಗೆ ಬಿಸಿ ಮುಟ್ಟಿಸಿದ ಪೊಲೀಸರು.
  • ಸದ್ಯ ಪುಂಡನ ರೀಲ್ಸ್ ಗಮನಿಸಿದ್ದ ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್.
  • ಎಸ್.ಜೆ.ಪಾರ್ಕ್ ಪೊಲೀಸರಿಂದ ಆರೋಪಿಯ ಬಂಧನ
ಟೀ ಕುಡಿದು ರೀಲ್ಸ್ ಮಾಡಿದ  ವ್ಯಕ್ತಿ ಜೈಲು ಪಾಲು: ವಿಡಿಯೋ ವೈರಲ್

Today Viral Video: ಟ್ರಾಫಿಕ್ ರೂಲ್ಸ್ ವೈಲೆಷನ್ ಮಾಡಿ ಟೀ ಕುಡಿಯುತ್ತಾ ರೀಲ್ಸ್ ಮಾಡಿದ್ದ ವ್ಯಕ್ತಿ ಇದೀಗ ಜೈಲು ಪಾಲಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. 

ಹೌದು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ತಿಳಿದಿದ್ದರೂ, ಎಸ್.ಜೆ.ಪಾರ್ಕ್ ಬಳಿ ನಡುರಸ್ತೆಯಲ್ಲಿ ಚೇರ್ ಹಾಕಿ ಕುಳಿತು ಟೀ ಕುಡಿದು ರೀಲ್ಸ್ ಮಾಡಿದ್ದ ಪುಂಡ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಕೂಡ ಮಾಡಿದ್ದ. 

ಇದನ್ನೂ ಓದಿ- ಸರಸರನೆ ತೆಂಗಿನ ಮರ ಹತ್ತಿ ಅಷ್ಟೇ ವೇಗವಾಗಿ ಏಣಿ ಇಳಿದಂತೆ ಇಳಿದು ಬರುತ್ತಿರುವ ಮೇಕೆ ! ವಿಸ್ಮಯಕಾರಿ ವಿಡಿಯೋ ಇಲ್ಲಿದೆ ನೋಡಿ

ರೀಲ್ಸ್ ಮಾಡೋ ಹುಚ್ಚಿಗೆ ಜೈಲು ಸೇರಿದ ಪುಂಡ: 
ಟ್ರಾಫಿಕ್ ನಿಯಮ ಉಲ್ಲಂಘಿಸಿ ರಸ್ತೆ ಮಧ್ಯೆದಲ್ಲಿ ಟೀ ಕುಡಿದು ರೀಲ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಪುಂಡಾಟ ಮೆರೆದಿದ್ದವನ ವಿಡಿಯೋ ಗಮಾಂಸಿಸಿದ್ದ ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಆತನ ವಿರುದ್ಧ ಕ್ರಮ ಕೈಗೊಂಡಿದೆ. 

ಇದನ್ನೂ ಓದಿ- ಮರದ ಕೊಂಬೆಯ ಮೇಲೆ ಕುಳಿತು ಬಾಯಿಂದ ಹೊಗೆ ಊದುತ್ತಿದೆ ಈ ಪುಟ್ಟ ಹಕ್ಕಿ.. ಅಚ್ಚರಿ ಎನಿಸುವ ವಿಡಿಯೋ ವೈರಲ್‌

ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರೋ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಪುಂಡಾಟವಾಡಿದ್ದ ವ್ಯಕ್ತಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ವಿಡಿಯೋ ಹಂಚಿಕೊಳ್ಳುವ ಮೂಲಕ  ಯುವಕರಿಗೆ ತಪ್ಪು ಸಂದೇಶ ನೀಡಿದ ಅಡಿ ಪ್ರಕರಣ ದಾಖಲಿಸಿ  ಬೆಂಗಳೂರಿನ ಎಸ್‌ಜೆ ಪಾರ್ಕ್ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News