ಇದಲ್ವಾ ಮನುಷ್ಯತ್ವ ಅಂದ್ರೆ... ಜೀವದ ಹಂಗು ತೊರೆದು ನೀರಿನಲ್ಲಿ ಮುಳುಗುತ್ತಿದ್ದ ನಾಯಿ ಪ್ರಾಣ ಉಳಿಸಿದ ವ್ಯಕ್ತಿ..! ವಿಡಿಯೋ ವೈರಲ್‌ 

Dog rescue in flood : ಪ್ರತಿದಿನ, ಹಲವಾರು ರೀತಿಯ ವೀಡಿಯೊಗಳು ನಾವು ಸೋಷಿಯಲ್‌ ಮೀಡಿಯಾದಲ್ಲಿ ನೋಡುತ್ತೇವೆ.. ಕೆಲವು ವೈರಲ್ ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ಅಂತಹುದರಲ್ಲಿ ಮುಳುಗುತ್ತಿರುವ ನಾಯಿಯನ್ನು ಉಳಿಸಲು ಒಬ್ಬ ವ್ಯಕ್ತಿಯು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವೀಡಿಯೊ ಸಂಚಲನ ಸೃಷ್ಟಿಸುತ್ತಿದೆ.

Written by - Krishna N K | Last Updated : Jun 11, 2025, 10:35 PM IST
    • ಪ್ರತಿದಿನ, ಹಲವಾರು ರೀತಿಯ ವೀಡಿಯೊಗಳು ನಾವು ಸೋಷಿಯಲ್‌ ಮೀಡಿಯಾದಲ್ಲಿ ನೋಡುತ್ತೇವೆ..
    • ನಾಯಿಯನ್ನು ಉಳಿಸಲು ಒಬ್ಬ ವ್ಯಕ್ತಿಯು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವೀಡಿಯೊ ಸಂಚಲನ ಸೃಷ್ಟಿಸುತ್ತಿದೆ.
    • ನಾಯಿಯನ್ನು ಉಳಿಸಲು ಒಬ್ಬ ವ್ಯಕ್ತಿಯು ತನ್ನ ಪ್ರಾಣವನ್ನೇ ಪಣಕ್ಕಿಡುವ ವೀಡಿಯೊ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇದಲ್ವಾ ಮನುಷ್ಯತ್ವ ಅಂದ್ರೆ... ಜೀವದ ಹಂಗು ತೊರೆದು ನೀರಿನಲ್ಲಿ ಮುಳುಗುತ್ತಿದ್ದ ನಾಯಿ ಪ್ರಾಣ ಉಳಿಸಿದ ವ್ಯಕ್ತಿ..! ವಿಡಿಯೋ ವೈರಲ್‌ 

Dog rescue viral video : ಪ್ರಸ್ತುತ ಯುಗದಲ್ಲಿ, ಜನರು ಪರಸ್ಪರ ಸಹಾಯ ಮಾಡುವ ಪದ್ದತಿಯನ್ನು ಮರೆತಿದ್ದಾರೆ. ಅಲ್ಲದೆ, ವಸ್ತುಗಳು ಮತ್ತು ಹಣದ ಮೇಲೆ ಇರುವ ವ್ಯಾಮೋಹ ಹೆಚ್ಚಾಗುತ್ತಿದೆ. ಮೂಕ ಪ್ರಾಣಿಗಳನ್ನ ಸಾಕುವುದಿರಲಿ ಹತ್ತಿರ ಬಂದರೂ ದೂರ ಓಡಿಸುವ ಜನರು ನಮ್ಮ ಮಧ್ಯ ಇದ್ದಾರೆ. ಅಂತಹುದರಲ್ಲಿ ಈ ವ್ಯಕ್ತಿಯ ನಿಸ್ವಾರ್ಥ ತ್ಯಾಗವನ್ನು ನೆಟ್ಟಿಗರು ಹೊಗಳುತ್ತಿದ್ದಾರೆ.

Add Zee News as a Preferred Source

ಹೌದು.. ಸಾಮಾಜಿಕ ಮಾಧ್ಯಮದಿಂದ, ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಯಾವುದೇ ವಿಚಿತ್ರ ಮತ್ತು ಅದ್ಭುತ ವಿಷಯದ ಬಗ್ಗೆ ಜಗತ್ತು ಬೇಗನೆ ತಿಳಿದುಕೊಳ್ಳಬಹುದು. ಹೀಗೆ ಪ್ರತಿದಿನ, ಅಂತರ್ಜಾಲದಲ್ಲಿ ಹಲವು ರೀತಿಯ ವೀಡಿಯೊಗಳು ಬಿಡುಗಡೆಯಾಗುತ್ತವೆ ಮತ್ತು ವೈರಲ್ ಆಗುತ್ತವೆ. ಇದೀಗ ಮುಳುಗುತ್ತಿರುವ ನಾಯಿಯನ್ನು ಉಳಿಸಲು ಒಬ್ಬ ವ್ಯಕ್ತಿಯು ತನ್ನ ಪ್ರಾಣವನ್ನೇ ಪಣಕ್ಕಿಡುವ ವೀಡಿಯೊ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:ಬಿಸಿಲ ಧಗೆ ತಾಳದೆ ನಲ್ಲಿ ನೀರು ಬಿಟ್ಟು ಸ್ನಾನ ಮಾಡುತ್ತಿರುವ ಹಾವು !ಈ ರೋಮಾಂಚನಕಾರಿ ವಿಡಿಯೋ ಇಲ್ಲಿದೆ ನೋಡಿ!

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಮಳೆಯಲ್ಲಿ ಸಿಲುಕಿಕೊಂಡ ನಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಾಣಬಹುದು. ಪ್ರವಾಹದಲ್ಲಿ ನಾಯಿ ತನ್ನ ಪ್ರಾಣ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬ ತಕ್ಷಣ ನೀರಿಗೆ ಹಾರಿ ನಾಯಿಯನ್ನು ಉಳಿಸಲು ಪ್ರಯತ್ನಿಸಿದ. ಕುತ್ತಿಗೆಯವರೆಗೆ ನೀರಿನಲ್ಲಿ ಈಜುತ್ತಿದ್ದ ಕಷ್ಟಪಟ್ಟು ನಾಯಿಯನ್ನು ರಕ್ಷಿಸಿದರು. 

ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದಾಗ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಅನಿಸುತ್ತದೆ ಎಂದು ಒಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. ಅನೇಕರು ಆಶ್ಚರ್ಯಚಕಿತರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದು ಗಮನಾರ್ಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News