)
Viral video : ಹಸಿದು ಬೇಟೆಯನ್ನು ತಿನ್ನುತ್ತಿದ್ದ ಸಿಂಹದ ಬಳಿ ಹೋದ ವ್ಯಕ್ತಿಯ ಮೇಲೆ ಸಿಂಹವೊಂದು ದಾಳಿ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಗುಜರಾತ್ನ ಭಾವನಗರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಗಂಡು ಸಿಂಹವೊಂದು ಬೇಟೆಯಾಡಿ ತನ್ನ ಬೇಟೆಯನ್ನು ತಿನ್ನುತ್ತಿದ್ದಾಗ ಅದರ ಬಳಿ ಹೋದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನ್ನಲ್ಲಿ ಅದರ ಚಿತ್ರಗಳನ್ನು ತೆಗೆಯಲು ಮುಂದಾಗಿದ್ದಾನೆ. ಅಲ್ಲಿದ್ದ ಸ್ಥಳೀಯರು ಬೇಡ ಎಂದು ಕೂಗಿ ಹೇಳಿದರೂ ಕೇಳದ ವ್ಯಕ್ತಿ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಮೊದಲಿಗೆ ಶಾಂತವಾಗಿದ್ದ ಸಿಂಹವು ವ್ಯಕ್ತಿಯನ್ನು ನೋಡಿ ಅಟ್ಯಾಕ್ ಮಾಡುತ್ತದೆ.
शेर मजे से अपना शिकार खा रहा है तभी यह युवक शेर के पास फोटे खींचने के लिए पहुंच गया. जिसपर शेर ने थोड़ी नाराज़गी दिखाई. वीडियो गुजरात के भावनगर का है. pic.twitter.com/91vUmKmi4F
— Priya singh (@priyarajputlive) August 4, 2025
ಇಂತಹ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ, ಆ ವ್ಯಕ್ತಿ ಯಾವುದೇ ಹಾನಿಗೊಳಗಾಗದೆ ಪಾರಾಗಿದ್ದಾರೆ. ವೀಡಿಯೊವನ್ನು ನೋಡಿದ ನೆಟಿಜನ್ಗಳು ಅವರ ಧೈರ್ಯವನ್ನು ಹೊಗಳಿದರೆ, ಇನ್ನೂ ಕೆಲವರು ಅವನ ಮೂರ್ಖತನವನ್ನು ಟೀಕಿಸಿದ್ದಾರೆ. ಈ ರೀತಿ ವನ್ಯ ಜೀವಿಗಳಿಗೆ ಹಾನಿಮಾಡುವುದು ಸರಿಯಲ್ಲ ಅಂತ ಇನ್ನೂ ಕೆಲವರು ಬುದ್ದಿ ಹೇಳಿದ್ದಾರೆ.
ಇಂತಹ ಕ್ರಮಗಳನ್ನು ವನ್ಯಜೀವಿಗಳಿಗೆ ತೊಂದರೆ ಎಂದು ಪರಿಗಣಿಸಲಾಗಿದ್ದರೂ, ಇದು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ದೊಡ್ಡ ಅಪರಾಧವಾಗಿದೆ. ಪ್ರಸ್ತುತ, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿಡಿಯೋ ವೈರಲ್ ಆಗಿರುವುದರಿಂದ, ಅದರ ಆಧಾರದ ಮೇಲೆ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.