ಶಬರಿಮಲೆ ಪಂಪಾನದಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ..! ಮಣಿಕಂಠನ ಸನ್ನಿಧಿಯಲ್ಲಿ ಅಚ್ಚರಿ ಸಂಗತಿ.. ವಿಡಿಯೋ ವೈರಲ್‌

ಶಬರಿಮಲೆಯ ಪಂಬಾ ನದಿಯಲ್ಲಿ ಮತ್ಸ್ಯಕನ್ಯೆ ಈಜುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇದನ್ನು ನೋಡಿದ ನೆಟಿಜನ್‌ಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಇದು ಪವಾಡ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Apr 16, 2025, 07:50 PM IST
    • ಶಬರಿಮಲೆಯ ಪಂಬಾ ನದಿಯಲ್ಲಿ ಮತ್ಸ್ಯಕನ್ಯೆ
    • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್
    • ವಿಡಿಯೋ ನೋಡಿದ ನೆಟಿಜನ್‌ಗಳು ಶಾಕ್‌
ಶಬರಿಮಲೆ ಪಂಪಾನದಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ..! ಮಣಿಕಂಠನ ಸನ್ನಿಧಿಯಲ್ಲಿ ಅಚ್ಚರಿ ಸಂಗತಿ.. ವಿಡಿಯೋ ವೈರಲ್‌

Viral Video : ಶಬರಿಮಲೆ ತೀರ್ಥಯಾತ್ರೆಯಲ್ಲಿ ಪಂಪಾ ನದಿಗೆ ವಿಶೇಷ ಸ್ಥಾನವಿದೆ. ಮಣಿಕಂಠನ ಸನ್ನಿಧಿಗೆ ಬರುವ ಭಕ್ತರು ಮೊದಲು ಈ ನದಿಯಲ್ಲಿ ಸ್ನಾನ ಮಾಡಿ ನಂತರ ದೇವರ ದರ್ಶನ ಮಾಡುತ್ತಾರೆ. ಅಯ್ಯಪ್ಪ ಸ್ವಾಮಿಯ ಭಕ್ತರು ಈ ನದಿಯನ್ನು ಕೇವಲ ನೀರಿನ ತೊರೆಯಾಗಿ ಪರಿಗಣಿಸದೆ ಪವಿತ್ರ ಯಾತ್ರಾ ಸ್ಥಳವೆಂದು ಪರಿಗಣಿಸುತ್ತಾರೆ. 

Add Zee News as a Preferred Source

ಇದಲ್ಲದೆ, ಈ ಪಂಪಾ ನದಿಯನ್ನು ದಕ್ಷಿಣ ಭಾಗೀರಥಿ ಎಂದೂ ಕರೆಯುತ್ತಾರೆ. ಈ ನದಿಯನ್ನು ಪೆರಿಯಾರ್ ನದಿಯ ನಂತರ ಕೇರಳ ರಾಜ್ಯದ ಎರಡನೇ ಅತಿದೊಡ್ಡ ನದಿ ಎಂದು ಪರಿಗಣಿಸಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪತ್ತನಂತಿಟ್ಟ, ಚೆಂಗನ್ನೂರು, ಕುಟ್ಟನಾಡ್, ಅಂಬಲಪುಳ ಮತ್ತು ಅಯ್ಯೂರು ಪ್ರದೇಶಗಳಲ್ಲಿ ಕೆಲವು ನೂರು ಕಿಲೋಮೀಟರ್‌ಗಳವರೆಗೆ ಈ ನದಿ ಹರಿಯುತ್ತದೆ.

ಇದನ್ನೂ ಓದಿ:ಅದು ಮೆಟ್ರೋ.. ಬೆಡ್‌ ರೂಮ್‌ ಅಲ್ಲ.. ಥೂ..! ಮತ್ತೊಂದು ಜೋಡಿಯ ಭಯಾನಕ ರೋಮ್ಯಾನ್ಸ್.. ವಿಡಿಯೋ ವೈರಲ್

ಅಯ್ಯಪ್ಪ ಭಕ್ತರು ಭಗವಂತನ ದರ್ಶನಕ್ಕೂ ಮುನ್ನ ಈ ನದಿಯಲ್ಲಿ ಸ್ನಾನ ಮಾಡುವುದು ಸಂಪ್ರದಾಯ. ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಶಿಸುತ್ತವೆ ಎಂಬ ನಂಬಿಕೆ ಇದೆ. ಇದಲ್ಲದೆ, ಪಂಪಾ ನದಿಯು ರಾಮಾಯಣದಲ್ಲಿಯೂ ವಿಶೇಷ ಉಲ್ಲೇಖವನ್ನು ಹೊಂದಿದೆ. ರಾಮನು ತನ್ನ ವನವಾಸದ ಸಮಯದಲ್ಲಿ ಪಂಬಾ ನದಿಯ ದಡದಲ್ಲಿರುವ ಶಬರಿ ಆಶ್ರಮಕ್ಕೆ ಭೇಟಿ ನೀಡಿದ್ದ ಎಂದು ಹೇಳಲಾಗುತ್ತದೆ. ಇಲ್ಲಿ ಪೂರ್ವಜರ ವಿಧಿವಿಧಾನಗಳನ್ನು ಮಾಡುವವರಿಗೆ ಏಳು ತಲೆಮಾರುಗಳವರೆಗೆ ಮೋಕ್ಷ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ.

 

ಇಂತಹ ಹಲವಾರು ಮಹತ್ವ ಹೊಂದಿರುವ ಈ ನದಿಯಲ್ಲಿ ಇದೀಗ ಅಪರೂಪದ ದೃಶ್ಯಗಳು ಕಂಡುಬಂದಿವೆ. ಪಂಪೆಯಲ್ಲಿ ಅಪರೂಪದ ಮತ್ಸ್ಯಕನ್ಯೆಯೊಂದು ಕಾಣಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ:ಹಾವು ಕಡಿತಕ್ಕೆ ಇನ್ನು ಮನೆಯಲ್ಲೇ ಚಿಕಿತ್ಸೆ ನೀಡಬಹುದು, ಭಯಾನಕ ವಿಷಕ್ಕೂ ಈ ಔಷಧಿ "ರಾಮಬಾಣ"

ಈ ವಿಡಿಯೋದಲ್ಲಿ, ಹರಿಯುವ ನೀರಿನಲ್ಲಿ ಮತ್ಸ್ಯಕನ್ಯೆ ಈಜುವುದನ್ನು ನೀವು ನೋಡಬಹುದು. ಇದಕ್ಕೆ ಸಂಬಂಧಿಸಿದ ಒಂದು ರೀಲ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಇದನ್ನು @arjun_astrolgy ಎಂಬ ಯೂಟ್ಯೂಬ್ ಚಾನೆಲ್‌ನಿಂದ ಪೋಸ್ಟ್ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ ನೋಡಿದ ಅನೇಕ ಜನರು ಇದು ನಿಜವೆಂದು ಭಾವಿಸಿದ್ದಾರೆ. ಆದರೆ ಕೆಲವರು ಇದು AI-ರಚಿತ ವೀಡಿಯೊ ಎಂದು ಹೇಳಲಾಗುತ್ತದೆ.. ಆದರೆ ಇದರ ಸತ್ಯಾಸತ್ಯತೆ ತಿಳಿದು ಬಂದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News