Monkey and cat viral video: ಇನ್‌ಟರ್‌ನೆಟ್‌ಗಳು, ಪ್ರಾಣಿಗಳಿಗೆ ಸಂಬಂಧ ಪಟ್ಟ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಕೋತಿಗೆ ಸಂಬಂಧ ಪಟ್ಟ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ನಂತರ ನೆಟ್ಟಿಗರು ಪ್ರಾಣಿಗಳಿಗೆ ಎಷ್ಟು ನಿಯತ್ತಿದೆ ಅಲ್ವಾ? ಅಂತಾ ಕಾಮೆಂಟ್ ಮಾಡೋಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ವೈರಲ್ ಆಗುತ್ತಿರುವ ಆ ವಿಡಿಯೋದಲ್ಲಿ ಇರುವುದಾದರೂ ಏನು? ತಿಳಿಯಲು ಮುಂದೆ ಓದಿ...
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಕ್ಕೊಂದು ಆಯಾ ತಪ್ಪಿ ಬಾವಿಗೆ ಬಿದ್ದಿರುವುದನ್ನು ನಾವು ನೋಡಬಹುದು. ಬಾವಿಗೆ ಬಿದ್ದು ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಬೆಕ್ಕನ್ನು ನೋಡಿದ ತಕ್ಷಣ ಕೋತಿ ಸಮಯ ವ್ಯರ್ಥ ಮಾಡದೆ, ತನ್ನ ಪ್ರಾಣದ ಬಗ್ಗೆ ಚಿಂತಿಸದೆ. ಬೆಕ್ಕಿನ ಪ್ರಾಣ ಉಳಿಸಲು ಬಾವಿಗೆ ಹಾರಿದೆ. ಬಾವಿಗೆ ಜಿಗಿದ ನಂತರ ಕೋತಿ ಬೆಕ್ಕನ್ನು ತೆಗೆದುಕೊಂಡು ಮೇಲೆ ಬರಲು ಬಾರಿ ಬಾರಿ ಪ್ರಯತ್ನಿಸುತ್ತದೆ. ಆದರೂ ಕೂಡ ವಿಫಲವಾಗುತ್ತದೆ. ನಾನಾ ರೀತಿಯಲ್ಲಿ ಪ್ರಯತ್ನಿಸಿದ ನಂತರ, ಸಾಕಷ್ಟು ಬಾರಿ ವಿಫಲವಾದ ನಂತರವೂ ಕೋತಿ ಬೆಕ್ಕನ್ನು ಉಳಿಸಲೇಬೇಕು ಅಂತಾ ನಿರ್ಧರಕ್ಕೆ ಬರುತ್ತದೆ.
ಇದನ್ನೂ ಓದಿ: Viral News: ಪ್ರೇಯಸಿ ಬಿಟ್ಟು ಹೋದಳು ಎಂಬ ಕಾರಣಕ್ಕೆ ಮೇಕೆಯನ್ನು ಮದುವೆಯಾದ ಯುವಕ! ಜನ ಹಿಂಗೂ ಇರ್ತಾರಾ?
ಆದರೆ, ಎಷ್ಟೇ ಕಷ್ಟ ಪಟ್ಟರೂ ಸಹ ಆ ಕೋತಿಯಿಂದ ಬೆಕ್ಕಿನ ಮರಿಯನ್ನು ಮೇಲಕ್ಕೆ ತೆಗೆಯಲು ಸಾಧ್ಯವಾಗುವುದಿಲ್ಲ, ಇದನೆಲ್ಲಾ ನೋಡಿತ್ತಿದ್ದ ಮತ್ತೊಂದು ಕೋತಿ ಕೂಡ ಸ್ಥಳಕ್ಕೆ ಬಂದು ಬೆಕ್ಕಿನ ಮರಿಯನ್ನು ಕಾಪಾಡಲು ಪ್ರಯತ್ನಿಸುತ್ತದೆ. ಬಾರಿ ಬಾರಿ ಪ್ರಯತ್ನಿಸಿದ ನಂತರೂ ಕೂಡ ಆ ಎರಡು ಕೋತಿಗಳು ಬೆಕ್ಕನ್ನು ಕಾಪಾಡುವಲ್ಲಿ ವಿಫಲವಾಗುತ್ತದೆ. ನಂತರ ಸ್ಥಳಕ್ಕೆ ಬರುವ ಯುವತಿ ಒಬ್ಬಳು ಇದನ್ನೆಲ್ಲಾ ನೋಡಿ ಆ ಬೆಕ್ಕನ್ನು ತೆಗೆದು ಮೇಲಕ್ಕೆ ಬಿಡಲು ಸಹಾಯ ಮಾಡುತ್ತದೆ.
ಈ ವೀಡಿಯೊವನ್ನು @TansuYegen ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ, ಜನರು ಕೋತಿಯ ಧೈರ್ಯ ಮತ್ತು ಸಹಾಯ ಮಾಡುವಲ್ಲಿ ಅದರ ಪ್ರಯತ್ನವನ್ನು ನೆಟ್ಟಿಗರು ಶ್ನಾಘಿಸುತ್ತಿದ್ದಾರೆ. ಪ್ರಾಣಿಗಳು ಸಹ ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಬಹುದು ಎಂಬುದನ್ನು ಇಂತಹ ವೀಡಿಯೊಗಳು ಸಾಬೀತುಪಡಿಸುತ್ತವೆ, ಇದು ಮಾನವೀಯತೆಯ ಹೊಸ ವ್ಯಾಖ್ಯಾನವನ್ನು ನಮಗೆ ಕಲಿಸುತ್ತದೆ.
Witness the most heartwarming monkey rescue ever! ?❤️ pic.twitter.com/IaRgWUzwUz
— Tansu Yegen (@TansuYegen) April 16, 2023
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









