suicide plant: ಭೂಮಿಯ ಮೇಲೆ ಅನೇಕ ರೀತಿಯ ಮರಗಳು ಮತ್ತು ಸಸ್ಯಗಳು ಕಂಡುಬರುತ್ತವೆ. ಪರಿಸರಕ್ಕೆ ಮರಗಳು ಬಹಳ ಮುಖ್ಯ. ಇವುಗಳಿಂದಾಗಿಯೇ ಮಾನವ ಜೀವನ ಅಸ್ತಿತ್ವದಲ್ಲಿದೆ. ಮರಗಳಿಂದ ಬರುವ ಆಮ್ಲಜನಕದಿಂದಲೇ ಮಾನವರು ಉಸಿರಾಡುವುದು. ನಾವು ಜೀವಂತವಾಗಿರಲು ಮರಗಳು ಅವಶ್ಯಕವಾಗಿವೆ. ಆದರೆ ಈ ಜಗತ್ತಿನಲ್ಲಿ ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ಸಸ್ಯಗಳು ಇವೆ. ಅವು ಯಾರನ್ನಾದರೂ ಕ್ಷಣಮಾತ್ರದಲ್ಲಿ ಕೊಲ್ಲಬಲ್ಲವು. ಈ ಸುದ್ದಿಯಲ್ಲಿ ಅಂತಹ ಒಂದು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಸಸ್ಯದ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
ಭೂಮಿಯಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಸಸ್ಯದ ಹೆಸರು ಸೂಸೈಡ್ ಪ್ಲಾಂಟ್. ಇದನ್ನು ಸ್ಟಿಂಗಿಂಗ್ ಬುಷ್, ಜಿಂಪೈ ಸ್ಟಿಂಗರ್, ಜಿಂಪಿ ಜಿಂಪಿ ಮತ್ತು ಮೂನ್ ಲೈಟರ್ ಎಂದು ಸಹ ಕರೆಯುತ್ತಾರೆ..ಈ ವಿಷಕಾರಿ ಸಸ್ಯವು ತುಂಬಾ ಸುಂದರವಾಗಿ ಕಾಣುತ್ತದೆ. ಇದನ್ನು ನೋಡಿದರೆ ಸಾಮಾನ್ಯ ಸಸ್ಯಗಳಂತೆಯೇ ಕಾಣುವುದು. ಆದರೆ ಈ ಗಿಡದ ಎಲೆ ಮುಟ್ಟಿದಾಗ ಕರೆಂಟ್ ಶಾಕ್ ಹೊಡೆದ ಅನುಭವ ಉಂಟಾಗುತ್ತದೆ. ಇದರ ಕುಟುಕು ಎಷ್ಟು ಅಪಾಯಕಾರಿ ನೋವನ್ನು ಉಂಟುಮಾಡುತ್ತದೆ ಎಂದರೆ ವ್ಯಕ್ತಿಯು ಸಂಕಟದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಹಿಂಜರಿಯುವುದಿಲ್ಲ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಈ ಸಸ್ಯವನ್ನು ಸೂಸೈಡ್ ಪ್ಲಾಂಟ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Explainer: ಕಚ್ಚತಿವು ದ್ವೀಪ ವಿವಾದ ಮತ್ತು ಪ್ರಧಾನಿ ಮೋದಿಯ ಶ್ರೀಲಂಕಾ ಭೇಟಿ
ವಿಜ್ಞಾನಿ ಮರೀನಾ ಹರ್ಲಿ ಈ ಸಸ್ಯದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಒಮ್ಮೆ ಆಸ್ಟ್ರೇಲಿಯಾದ ಮಳೆಕಾಡುಗಳ ಬಗ್ಗೆ ಮರೀನಾ ಹರ್ಲಿ ಸಂಶೋಧನೆ ಮಾಡುತ್ತಿದ್ದರು. ಕಾಡಿನಲ್ಲಿ ಅನೇಕ ಅಪಾಯಕಾರಿ ಮರಗಳು ಮತ್ತು ಸಸ್ಯಗಳು ಇರಬಹುದೆಂದು ಅವರಿಗೆ ತಿಳಿದಿತ್ತು. ಇವುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕೈಗಳಿಗೆ ವೆಲ್ಡಿಂಗ್ ಗ್ಲೌಸ್ ಮತ್ತು ಬಾಡಿ ಸೂಟ್ ಧರಿಸಿದ್ದರು. ತನ್ನ ಸಂಶೋಧನೆಯ ಸಮಯದಲ್ಲಿ ಹೊಸ ಸಸ್ಯವನ್ನು ಕಂಡು ಹಿಡಿದರು. ವೆಲ್ಡಿಂಗ್ ಕೈಗವಸುಗಳಿದ್ದರೂ ಸಹ, ಈ ಸಸ್ಯವನ್ನು ಅಧ್ಯಯನ ಮಾಡುವುದು ಕಷ್ಟಕರವಾದ ಕೆಲಸವೆಂದು ಅನಿಸಿತ್ತಂತೆ.
ಜಿಂಪಿ ಜಿಂಪಿ ಯನ್ನು ವಿಶ್ವದ ಅತ್ಯಂತ ವಿಷಕಾರಿ ಸಸ್ಯವೆಂದು ಪರಿಗಣಿಸಲಾಗಿದೆ. ಒಂದು ವರದಿಯ ಪ್ರಕಾರ, ಎರಡನೇ ಮಹಾಯುದ್ಧದ ಸಮಯದಲ್ಲಿ ಅನೇಕ ಸೇನಾ ಅಧಿಕಾರಿಗಳು ಈ ಮರಕ್ಕೆ ಬಲಿಯಾದರು. ಇದನ್ನು ಮುಟ್ಟಿದಾಗ ಆಗುವ ನೋವಿನಿಂದ ಬಳಲುತ್ತಿದ್ದ ಅನೇಕ ಜನರು ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಬದುಕುಳಿದವರು ಹಲವು ವರ್ಷಗಳ ಕಾಲ ನೋವಿನಿಂದ ಬಳಲುತ್ತಿದ್ದರು. ಇದಾದ ನಂತರ ಜನರು ಅದರತ್ತ ಗಮನ ಹರಿಸಿದರು. ಅದನ್ನು ಸೂಸೈಡ್ ಪ್ಲಾಂಟ್ ಎಂದು ಹೆಸರಿಸಲಾಯಿತು.
ಈ ಸಸ್ಯವು 3 ರಿಂದ 15 ಅಡಿ ಎತ್ತರವಿದ್ದು, ವಿಷವನ್ನು ಒಳಗೊಂಡಿರುವ ಮುಳ್ಳುಗಳಿಂದ ತುಂಬಿದೆ. ವಿಷವು ಅದರ ಮುಳ್ಳುಗಳ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರ ವಿಷವು ನರಮಂಡಲದ ಮೇಲೆ ನೇರ ಪರಿಣಾಮ ಬೀರುವ ನ್ಯೂರೋಟಾಕ್ಸಿನ್‌ನಂತಿದೆ. ಇದರಿಂದಾಗಿ, ಒಬ್ಬ ವ್ಯಕ್ತಿಯು ಸಾಯಬಹುದು. ಮುಳ್ಳು ಚುಚ್ಚಿದ ನಂತರ, ನೋವು 30 ನಿಮಿಷಗಳಲ್ಲಿ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಚಿಕಿತ್ಸೆ ಬೇಗನೆ ದೊರೆತರೆ ನೋವು ಕಡಿಮೆಯಾಗುತ್ತದೆ. ಇಲ್ಲದಿದ್ದರೆ ನೋವು ತಡೆಯಲಾರದೇ ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.
(ಗಮನಿಸಿ: ಈ ಲೇಖನವು ವೈಜ್ಞಾನಿಕ ಸಂಶೋಧನೆ, ವರದಿಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಇದನ್ನೂ ಓದಿ: ಈ ವರ್ಷದಂದೇ ಪ್ರಪಂಚದ ವಿನಾಶ..! 300 ವರ್ಷಗಳ ಹಿಂದಿನ ನ್ಯೂಟನ್ ಪತ್ರ ಪತ್ತೆ, ಶಾಕಿಂಗ್ ವಿಚಾರ ಬಹಿರಂಗ..
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









