1972ರಲ್ಲಿ ಮೂಸಾ ಮೊದಲ ವಿವಾಹವಾದಾಗ ಆತನಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ನಂತರ ಆತನ ಕುಟುಂಬಸ್ಥರು ಮತ್ತು ಸಂಬಂಧಿಕರು ಹೆಚ್ಚಿನ ಮಹಿಳೆಯರನ್ನು ಮದುವೆಯಾಗಿ ಹೆಚ್ಚಿನ ಮಕ್ಕಳನ್ನ ಹೊಂದಲು ಸಲಹೆ ನೀಡಿದ್ದರಂತೆ.

Man has 12 wives: ಉಗಾಂಡಾದ ಲುಸಾಕಾದ 68 ವರ್ಷದ ಈ ವ್ಯಕ್ತಿಗೆ 12 ಹೆಂಡತಿಯರಿದ್ದಾರೆ. ಆತನಿಗೆ 102 ಮಕ್ಕಳು ಮತ್ತು 578 ಮೊಮ್ಮಕ್ಕಳಿದ್ದಾರೆ. ಹೌದು, ಇದು ನಿಜವಾದ ಸುದ್ದಿ. ಈತನ ಹೆಸರು ಮೂಸಾ ಹಸಾಹ್ಯಾ ಕಸೇರಾ (Musa Hasahya). ತಾನು ಎಂದಿಗೂ ಗರ್ಭನಿರೋಧಕಗಳನ್ನು ಬಳಸಿಲ್ಲವೆಂದು ಆತ ಒಪ್ಪಿಕೊಂಡಿದ್ದಾನೆ. ಹಲವು ಮಕ್ಕಳ ತಂದೆಯಾದ ನಂತರ ಮೂಸಾ ಅಂತಿಮವಾಗಿ ತನ್ನ ಮನಸ್ಸನ್ನು ಬದಲಾಯಿಸಿಕೊಂಡಿದ್ದಾನಂತೆ.
ಆತ ಗರ್ಭನಿರೋಧಕ ಬಳಸಲು ನಿರಾಕರಿಸಿದರೂ ಸಹ ತಮ್ಮ ಹೆಂಡತಿಯರಿಗೆ ಜನನ ನಿಯಂತ್ರಣ ಮಾತ್ರೆಗಳನ್ನ ನೀಡುತ್ತಿದ್ದಾರಂತೆ. ತಮ್ಮ 68ನೇ ವಯಸ್ಸಿನಲ್ಲಿ ಮೂಸಾ ನೂರಾರು ಮಕ್ಕಳ ತಂದೆಯಾಗಿ ಸಾಧನೆ ಮಾಡಿದ್ದಾನೆ. ಮೂಸಾ ಹೇಳಿರುವ ಪ್ರಕಾರ, ʼನನಗೆ ಎದುರಾಗಿರುವ ಸವಾಲು ಏನೆಂದರೆ ನನ್ನ ಮೊದಲ ಮಗು ಮತ್ತು ಕೊನೆಯ ಮಗುವಿನ ಹೆಸರನ್ನ ಮಾತ್ರ ನಾನು ನೆನಪಿಸಿಕೊಳ್ಳಬಲ್ಲೆ, ಆದರೆ ನಾನು ಕೆಲವು ಮಕ್ಕಳ ಹೆಸರುಗಳನ್ನೇ ಮರೆತಿದ್ದೇನೆ. ನಿಜವಾಗಿಯೂ ನನಗೆ ಅವರ ಹೆಸರುಗಳು ನನಗೆ ನೆನಪಿಲ್ಲʼ ಅಂತಾ ಹೇಳಿದ್ದಾರೆ.
Musa Hasahya, a 68-year-old man in Uganda has 12 wives and has fathered 102 kids. Hasahya says he often forgets his children's names.
He said: "My income has become lower and lower over the years due to the rising cost of living and my family has become bigger and bigger. I… pic.twitter.com/TGDUDWqCsz
— Historic Vids (@historyinmemes) June 5, 2023
ಎಎಫ್ಪಿ ವರದಿಯ ಪ್ರಕಾರ, 1972ರಲ್ಲಿ ಮೂಸಾ ಮೊದಲ ವಿವಾಹವಾದಾಗ ಆತನಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ನಂತರ ಆತನ ಕುಟುಂಬಸ್ಥರು ಮತ್ತು ಸಂಬಂಧಿಕರು ಹೆಚ್ಚಿನ ಮಹಿಳೆಯರನ್ನು ಮದುವೆಯಾಗಿ ಹೆಚ್ಚಿನ ಮಕ್ಕಳನ್ನ ಹೊಂದಲು ಸಲಹೆ ನೀಡಿದ್ದರು. ಇದರಿಂದ ನಮ್ಮ ಕುಟುಂಬದ ಪರಂಪರೆ ವಿಸ್ತರಿಸುತ್ತದೆ ಅಂತಾ ಆತನಿಗೆ ಹೇಳಿದ್ದರಂತೆ. ಇದನ್ನ ಸಿಯಯಸ್ ಆಗಿ ತೆಗೆದುಕೊಂಡ ಮೂಸಾ ಮದುವೆಯ ಮೇಲೆ ಮದುವೆ ಮಾಡಿಕೊಂಡ. ಇದಲ್ಲದೆ ಆತ ಮಕ್ಕಳ ಮೇಲೆ ಮಕ್ಕಳನ್ನೂ ಮಕ್ಕಳನ್ನೂ ಹುಟ್ಟಿಸಿದ.
ಕುಟುಂಬಸ್ಥರು ಮತ್ತು ಸಂಬಂಧಿಕರ ಆಜ್ಞೆಯ ಮೇರೆಗೆ, ಮೂಸಾ 12 ಮಹಿಳೆಯರನ್ನು ವಿವಾಹವಾಗಿದ್ದು, 102 ಮಕ್ಕಳ ತಂದೆಯಾಗಿದ್ದಾನೆ. ಆದರೆ ತನ್ನ ಹೆಂಡತಿ-ಮಕ್ಕಳು ಮತ್ತು ಮೊಮ್ಮಕ್ಕಿಳಿಗೆ ಸರಿಯಾದ ಆಹಾರ, ಶಿಕ್ಷಣ ಮತ್ತು ಬಟ್ಟೆ ಕೊಡಿಸಲು ಸಾಧ್ಯವಾಗದ ಕಾರಣ ಆತ ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಮೂಸಾನ ಇಬ್ಬರು ಹೆಂಡತಿಯರು ಈಗಾಗಲೇ ಆತನನ್ನ ತೊರೆದು ಓಡಿಹೋಗಿದ್ದಾರೆ. ʼನಾನು ಇನ್ನೂ ಹೆಚ್ಚಿನ ಮಕ್ಕಳನ್ನ ಹೊಂದುವ ಭರವಸೆ ಹೊಂದಿಲ್ಲ. ಏಕೆಂದರೆ ನಾನು ಅವರನ್ನ ನೋಡಿಕೊಳ್ಳಲು ಸಾಧ್ಯವಾಗದಷ್ಟು ಬೇಜವಾಬ್ದಾರಿಯುತ ಕೃತ್ಯಗಳಿಂದ ಕಲಿತಿದ್ದೇನೆʼ ಅಂತಾ ಹೇಳಿದ್ದಾರೆ. ನನ್ನ ಆರೋಗ್ಯವು ದಿನೇ ದಿನೇ ಕ್ಷೀಣಿಸುತ್ತಿದೆ. ಇಷ್ಟು ದೊಡ್ಡ ಕುಟುಂಬಕ್ಕೆ ಕೇವಲ ಎರಡು ಎಕರೆ ಭೂಮಿ ಇದೆ. ನಾನು ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ ಅಂತಾ ಮೂಸಾ ಹೇಳಿಕೊಂಡಿದ್ದಾನೆ.
ವರದಿಯ ಪ್ರಕಾರ, ಮೂಸಾ ತನ್ನ ಗ್ರಾಮದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದಾನೆ. ಉಗಾಂಡಾದಲ್ಲಿ ಬಹುಪತ್ನಿತ್ವವು ಕಾನೂನುಬದ್ಧವಾಗಿದೆ. ಹೀಗಾಗಿ ಪುರುಷರು ಅನೇಕ ಹೆಂಡತಿಯರನ್ನು ಮದುವೆಯಾಗಲು ಅನುಮತಿಸುವ ಸಾಂಪ್ರದಾಯಿಕ ಪದ್ಧತಿಯಾಗಿದೆ. ಇಲ್ಲಿನ ಜನರು ಕನಿಷ್ಠ ಎರಡು ಮದುವೆಯನ್ನಾದರೂ ಮಾಡಿಕೊಳ್ಳುತ್ತಾರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ