)
Snake gaurding Nagamani Viral Video: ಹಾವು ಒಂದು ವಿಷ ಜಂತು. ಹಾವಿನ ಬಗ್ಗೆ ಅನೇಕ ವಿಚಾರಗಳು ಈಗಲೂ ನಿಗೂಢವಾಗಿಯೇ ಉಳಿದಿವೆ. ಹಾವುಗಳ ಲೋಕವನ್ನು ನಾಗಲೋಕ ಎನ್ನುತ್ತಾರೆ. ಈ ನಾಗಲೋಕದ ಕುರಿತ ಅನೇಕ ಸಂಗತಿಗಳ ಬಗ್ಗೆ ಈಗಲೂ ಮಾನವರಿಗೆ ತಿಳಿಯದ ಕೆಲವು ರಹಸ್ಯಗಳಿವೆ. ಅಂತಹ ರಹಸ್ಯಗಳಲ್ಲಿ ಒಂದು ಈ ನಾಗಮಣಿ.
ನಾಗಮಣಿ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖವಿದೆ. ಆದರೆ ಇದನ್ನ ಕಣ್ಣಾರೆ ಕಂಡವರು ಕೆಲವೇ ಕೆಲವು ಜನರಿರಬಹುದು. ಸಾಮಾನ್ಯವಾಗಿ ಈ ನಾಗಮಣಿ ಯಾರ ಕಣ್ಣಿಗೂ ಬೀಳುವುದಿಲ್ಲ. ನಾಗಮಣಿ ಒಂದು ವಿಶೇಷ ಅಪರೂಪದ ರತ್ನವಾಗಿದೆ. ನಾಗ ಮಾಣಿಕ್ಯ, ನಾಗ ರತ್ನಂ ಎಂದು ಸಹ ನಾಗಮಣಿಯನ್ನು ಕರೆಯುತ್ತಾರೆ. ನಾಗ ಲೋಕದಿಂದ ಭೂಮಿಗೆ ಬರುವ ಶ್ರೇಷ್ಠ ರತ್ನ ಈ ನಾಗಮಣಿ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.
ನಾಗರ ಹಾವಿನ ತಲೆ ಮೇಲೆ ಅಂದರೆ ಹೆಡೆಯ ಮೇಲ್ಭಾಗದಲ್ಲಿ ನಾಗಮಣಿ ಇರುತ್ತದೆ ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ, ನಾಗಮಣಿ ಪಾತಾಳದಲ್ಲಿರುವ ನಾಗಲೋಕದಲ್ಲಿ 9 ವಿಧದ ಸರ್ಪಗಳ ತಲೆಯ ಮೇಲೆ ಮಾತ್ರ ಕಂಡುಬರುವ ಪವಿತ್ರ ಮತ್ತು ಶಕ್ತಿಯುತ ರತ್ನವಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಾಗಮಣಿ ಕಾಯುವ ಕಾಳಿಂಗ ಸರ್ಪದ ವಿಡಿಯೋವೊಂದು ವೈರಲ್ ಆಗಿದೆ.
ನಾಗಮಣಿ ವಿಶೇಷವಾದ ಹೊಳಪನ್ನು ಹೊಂದಿರುತ್ತದೆ. ಇದು ತನ್ನಿಂದ ಪ್ರಕಾಶಮಾನವಾಗ ಬೆಳಕನ್ನು ಹೊರಸೂಸುತ್ತದೆ. ಈ ಬೆಳಕಿನಿಂದಲೇ ಕತ್ತಲೆಯಲ್ಲಿ ನಾಗರ ಹಾವುಗಳು ಚಲಿಸುವುದು ಎಂದು ಹೇಳಲಾಗುತ್ತದೆ. ನಾಗಮಣಿಗೆ ಅಪಾಯ ಎದುರಾದಲ್ಲಿ ಹಾವುಗಳು ಅದನ್ನು ನುಂಗುತ್ತವಂತೆ. ಹಾವಿನ ಜೊತೆಗೆ ನಾಗಮಣಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಪ್ಪು ಬಣ್ಣದ ಕಾಳಿಂಗವೊಂದು ನಾಗಮಣಿಯನ್ನು ಕಾಯುತ್ತ ಕುಳಿತಿರುವ ಅಪರೂಪದ ಇದೀಗ ವೈರಲ್ ಆಗಿದೆ. ಇಂತಹ ದೃಶ್ಯ ಕೆಲವು ಸಿನಿಮಾಗಳಲ್ಲಿ ನೋಡಿರಬಹುದು. ಅಂತಹದ್ದೇ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ಕಂಡ ಜನರು ಅಚ್ಚರಿ ಪಡುತ್ತಿದ್ದಾರೆ. ನಾಗರಹಾವು ನಾಗಮಣಿಗೆ ಕಾವಲು ಕಾಯುವ ವಿಡಿಯೋ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಕಪ್ಪು ಕಾಳಿಂಗ ಸರ್ಪವೊಂದು ನಾಗಮಣಿಗೆ ಕಾವಲು ಕುಳಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಾತ್ರಿಯ ಹೊತ್ತಿನಲ್ಲಿ ಕತ್ತಲೆಯಲ್ಲಿ ನಾಗಮಣಿ ಕಾವಲು ಕಾಯುತ್ತಿರುವ ಕಾಳಿಂಗನ ವಿಡಿಯೋ ಇದಾಗಿದೆ. ಇದನ್ನು ನೋಡಿದವರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಎಲ್ಲಿ ಯಾವಾಗ ಸೆರೆಯಾಗಿದ್ದು ಎಂಬ ಮಾಹಿತಿ ಇಲ್ಲ.
(ಸೂಚನೆ: ಇದು ಕೇವಲ ವೈರಲ್ ವಿಡಿಯೋ ಆಗಿದೆ. ಇದರ ಸತ್ಯಾಸತ್ಯತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.)
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.