)
Snake gaurding Nagamani Viral Video: ಹಾವು ಒಂದು ವಿಷ ಜೀವಿ. ಹೀಗಾಗಿ ಹಾವಿನ ಜೀವನದ ಅನೇಕ ಸಂಗತಿಗಳು ಎಲ್ಲರಿಗೂ ತಿಳಿದಿಲ್ಲ. ನಾಗಮಣಿ ಬಗ್ಗೆ ಪ್ರಾಚೀನ ಭಾರತದ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖವಿದೆ. ನಾಗಮಣಿ ಒಂದು ವಿಶೇಷ ರತ್ನವಾಗಿದೆ ಇದು ಅಪರೂಪವೂ ಹೌದು. ನಾಗ ಮಾಣಿಕ್ಯ, ನಾಗ ರತ್ನಂ ಎಂದು ಸಹ ನಾಗಮಣಿಯನ್ನು ಕರೆಯುತ್ತಾರೆ. ನಾಗ ಲೋಕದಿಂದ ಭೂಮಿಗೆ ಬರುವ ಶ್ರೇಷ್ಠ ರತ್ನ ಎಂಬದು ಅನೇಕರ ನಂಬಿಕೆಯಾಗಿದೆ.
ನಾಗರ ಹಾವಿನ ತಲೆ ಮೇಲೆ ಅಂದರೆ ಹೆಡೆಯ ಮೇಲ್ಭಾಗದಲ್ಲಿ ನಾಗಮಣಿ ಇರುತ್ತದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ನಾಗಮಣಿ ಪಾತಾಳದಲ್ಲಿರುವ ನಾಗಲೋಕದಲ್ಲಿ 9 ವಿಧದ ನಾಗಗಳ ತಲೆಯ ಮೇಲೆ ಮಾತ್ರ ಕಂಡುಬರುತ್ತದೆ. ಇದೀಗ ನಾಗಮಣಿ ಕಾಯುವ ಹಾವಿನ ವಿಡಿಯೋವೊಂದು ವೈರಲ್ ಆಗಿದೆ.
ಈ ನಾಗಮಣಿ ವಿಶೇಷವಾದ ಬೆಳಕನ್ನು ಹೊರಸೂಸುತ್ತದೆ ಎಂಬುದ ಆದಿಕಾಲದಿಂದಲೂ ಬಂದ ನಂಬಿಕೆ. ಈ ಬೆಳಕಿನಿಂದಲೇ ಕತ್ತಲೆಯಲ್ಲಿ ನಾಗಗಳು ಚಲಿಸುವುದು ಎಂದು ಹೇಳಲಾಗುತ್ತದೆ. ನಾಗಮಣಿಗೆ ಅಪಾಯ ಎದುರಾದಲ್ಲಿ ಹಾವುಗಳು ಅದನ್ನು ನುಂಗುತ್ತವಂತೆ. ಹಾವಿನ ಜೊತೆಗೆ ನಾಗಮಣಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವು ನಾಗಮಣಿ ಕಾಯುವ ದೃಶ್ಯ ಕೆಲವು ಸಿನಿಮಾಗಳಲ್ಲಿ ನೋಡಿರಬಹುದು. ಅಂತಹದ್ದೇ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ಕಂಡ ಜನರು ಅಚ್ಚರಿ ಪಡುತ್ತಿದ್ದಾರೆ. ನಾಗರಹಾವು ನಾಗಮಣಿಗೆ ಕಾವಲು ಕಾಯುವ ದೃಶ್ಯ ವೈರಲ್ ಆಗಿದೆ.
ಕಪ್ಪು ಕಾಳಿಂಗ ಸರ್ಪವೊಂದು ನಾಗಮಣಿಗೆ ಕಾವಲು ಕುಳಿತ ವಿಡಿಯೋ ವೈರಲ್ ಆಗುತ್ತಿದೆ. ರಾತ್ರಿಯ ಹೊತ್ತಿನಲ್ಲಿ ಕತ್ತಲೆಯಲ್ಲಿ ಕಾಳಿಂಗ ನಾಗಮಣಿ ಕಾವಲು ಕಾಯುತ್ತಿರುವ ವಿಡಿಯೋ ಇದಾಗಿದೆ. ಇದನ್ನು ನೋಡಿದವರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಎಲ್ಲಿ ಯಾವಾಗ ಸೆರೆಯಾಗಿದ್ದು ಎಂಬ ಮಾಹಿತಿ ಇಲ್ಲ.
(ಸೂಚನೆ: ಇದು ಕೇವಲ ವೈರಲ್ ವಿಡಿಯೋ ಆಗಿದೆ. ಇದರ ಸತ್ಯಾಸತ್ಯತೆಯನ್ನು Zee Kannada News ಖಚಿತಪಡಿಸುವುದಿಲ್ಲ.)