viral video: ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ದಿಯಾಗಲು ಅನೇಕರು ನಾನಾ ರೀತಿಯ ವಿಡಿಯೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಕೆಲವು ವಿಡಿಯೋಗಳು ನೋಡಲು ತುಂಬಾ ಅಸಹ್ಯವಾಗಿರುತ್ತವೆ . ಮತ್ತೆ ಕೆಲವು ಜನರಿಗೆ ಇಷ್ಟವಾಗುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ವಿವಾಹದ ನಂತರದ ಫಸ್ಟ್‌ನೈಟ್ ಅನುಭವವನ್ನ ತೋರಿಸುವ ಕುಶಾಲ್ ಮತ್ತು ಖುಷಿಯ ಕ್ಯೂಟ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬರೋಬ್ಬರಿ 1.14 ಕೋಟಿ ವೀಕ್ಷಣೆ ಪಡೆದ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ವೈರಲ್ ವಿಡಿಯೋದಲ್ಲಿ ಮದುವೆಯ ರಾತ್ರಿಯ ನಂತರ ಮರುದಿನ ಬೆಳಗ್ಗೆ ದಂಪತಿ ಹಾಸಿಗೆಯ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಇದ್ದಕ್ಕಿದ್ದಂತೆ ವಧು ಎಚ್ಚರಗೊಂಡು ಗಡಿಯಾರ ನೋಡಿ ಗಾಬರಿ ಪಡುತ್ತಾಳೆ. ʼಕುಶಾಲ್.. ಎದ್ದೇಳು.. ಈಗ 8 ಗಂಟೆ" ಅಂತಾ ಜೋರಾಗಿ ತನ್ನ ಗಂಡನನ್ನ ಎಬ್ಬಿಸಲು ಶುರು ಮಾಡುತ್ತಾಳೆ. ಗಂಡ ಆಕೆಗೆ ಸುಮ್ಮನೆ ಮಲಗು ಅಂತಾ ಹೇಳಿದಾಗ ವಧು, "ಹೊರಗಿನವರೆಲ್ಲಾ ಏನು ಯೋಚಿಸುತ್ತಾರೆ?" ಅಂತಾ ಮುದ್ದು ಮುದ್ದಾಗಿ ಕೇಳುತ್ತಾಳೆ.. ಈ ವಿಡಿಯೋಗೆ "ಪ್ರೇಮ ವಿವಾಹದ ನಂತರದ ಮೊದಲ ದಿನ" ಅಂತಾ ಕ್ಯಾಪ್ಶನ್‌ನೀಡಲಾಗಿದೆ.
ಇದನ್ನೂ ಓದಿ: ಮದುವೆಯಾಗಿ ಮಗನಿದ್ದರೂ ಫೇಮಸ್ ರಾಜಕಾರಣಿಯೊಂದಿಗೆ 50 ವರ್ಷದ ಕನ್ನಡದ ನಟಿ ಡೇಟಿಂಗ್!? ಯಾರದು?
ನಂತರ ವಧು ಸ್ನಾನ ಮಾಡಲು ಹೋಗುತ್ತಾಳೆ. ಹೊರಬಂದ ಮೇಲೆ ಸೀರೆ ಉಡಲು ಪ್ರಯತ್ನಿಸುತ್ತಾಳೆ. ಆದರೆ ಅವಳಿಂದ ಸೀರೆ ಉಡಲು ಸಾಧ್ಯವಾಗಲ್ಲ. ಆಗ ಗಂಡ ಸ್ನಾನಗೃಹದಿಂದ ಹೊರಬಂದು, ʼಏನು ಮಾಡ್ತಿದ್ದೀಯಾ?ʼ ಅಂತಾ ಕೇಳುತ್ತಾನೆ. ಹೆಂಡತಿ ʼನಾನು ಸೀರೆ ಉಟ್ಟುಕೊಳ್ಳಲು ಟ್ರೈ ಮಾಡ್ತಿದ್ದೀನಿ, ಆದರೆ ಆಗುತ್ತಿಲ್ಲʼ ಅಂತಾ ಹೇಳುತ್ತಾಳೆ. ಇದಕ್ಕೆ ಗಂಡ ಪ್ರತಿಕ್ರಿಯಿಸಿ, ʼಸೀರೆ ಬದಲು ಬೇರೆ ಏನದರೂ ಹಾಕಿಕೋʼ ಅಂತಾ ಹೇಳುತ್ತಾನೆ. ಆದರೆ ವಧು ಇದಕ್ಕೆ ನಿರಾಕರಿಸುತ್ತಾಳೆ. ಆಗ ಗಂಡ ತಾನೇ ತನ್ನ ಹೆಂಡತಿಗೆ ಸೀರೆ ಉಡಲು ಸಹಾಯ ಮಾಡುತ್ತಾನೆ. ಈ ದೃಶ್ಯವನ್ನು ನೋಡಿದವರು ಫಿದಾ ಆಗಿದ್ದಾರೆ.
ಈ ವಿಡಿಯೋದ ಕೊನೆಯಲ್ಲಿ ಕೆಲವು ಅತಿಥಿಗಳು ಮನೆಗೆ ಬಂದಿರುತ್ತಾರೆ. ಪ್ರೇಮ ವಿವಾಹವಾದ ದಂಪತಿ ಅಲ್ಲಿಗೆ ತಲುಪಿದಾಗ ವಧುವಿನ ಅತ್ತೆ (ಕುಶಾಲ್ ತಾಯಿ) ಅವಳೊಂದಿಗೆ ಮಾತನಾಡುತ್ತಾರೆ. ಅತಿಥಿಗಳು ಕೂಡ ಸೀರೆಯಲ್ಲಿರುವ ವಧುವನ್ನ ನೋಡಿ ಸಂತೋಷಪಡುತ್ತಾರೆ. ʼನಿಮ್ಮ ಸೊಸೆ ಸೀರೆ ಉಟ್ಟಿದ್ದಾಳೆ, ಅವಳು ತುಂಬಾ ಸುಂದರವಾಗಿದ್ದಾಳೆ" ಅಂತಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಇದ್ದಕ್ಕಿದ್ದಂತೆ ಅತ್ತೆ ʼಅವಳು ನನ್ನ ಸೊಸೆ ಅಲ್ಲ, ನನ್ನ ಮಗಳು" ಅಂತಾ ಹೆಮ್ಮೆಯಿಂದ ಹೇಳುತ್ತಾರೆ. ಅತ್ತೆಯ ಈ ಮಾತು ನೆಟ್ಟಿಗರ ಮನಸ್ಸು ಗೆದ್ದಿದೆ. ಬಹುತೇಕ ಮಹಿಳೆಯರು ಮದುವೆ ನಂತರ ವರನ ಊರಿನಲ್ಲಿರಬೇಕು ಮತ್ತು ತಮ್ಮ ನಿಯಮಗಳು, ನಿಬಂಧನೆಗಳನ್ನ ಪಾಲಿಸಬೇಕೆಂದು ಬಯಸುತ್ತಾರೆ. ಆದರೆ ಇಲ್ಲಿ ಅತ್ತೆಯೇ ಸೊಸೆಯನ್ನ ತಮ್ಮ ಮಗಳನ್ನಾಗಿ ಪ್ರೀತಿಯಿಂದ ನೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕಾಲೇಜಿಗೆ ಚಕ್ಕರ್ ಹಾಕಿ ನಡು ರಸ್ತೆಯಲ್ಲಿಯೇ ಜೋಡಿಗಳ ರೋಮ್ಯಾನ್ಸ್..! ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









