ಇದು ಸರ್ಕಾರಿ ನೌಕರಿ, ಶ್ರೀಮಂತಿಕೆ ಎಫೆಕ್ಟ್! ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಜೊಡಿ

Viral Wedding troll : ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ಕಪ್ಪು ಬಣ್ಣದ ವ್ಯಕ್ತಿ ತುಂಬಾ ಸುಂದರಿ ಬಿಳಿ ಯುವತಿಯನ್ನು ಮದುವೆಯಾಗುತ್ತಿರುವುದನ್ನು ಕಾಣಬಹುದು. ಇದನ್ನು ನೋಡಿದ ನೆಟಿಜನ್‌ಗಳು ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ.. ಇದೀಗ ಈ ಕುರಿತು ಜೋಡಿ ಪ್ರತಿಕ್ರಿಯೆ ನೀಡಿದ್ದಾರೆ.

Written by - Krishna N K | Last Updated : Dec 11, 2025, 07:57 PM IST
    • ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
    • ಪ್ಪು ಬಣ್ಣದ ವ್ಯಕ್ತಿ ತುಂಬಾ ಸುಂದರಿ ಬಿಳಿ ಯುವತಿಯನ್ನು ಮದುವೆಯಾಗುತ್ತಿರುವುದನ್ನು ಕಾಣಬಹುದು.
    • ಇದನ್ನು ನೋಡಿದ ನೆಟಿಜನ್‌ಗಳು ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ..
ಇದು ಸರ್ಕಾರಿ ನೌಕರಿ, ಶ್ರೀಮಂತಿಕೆ ಎಫೆಕ್ಟ್! ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಜೊಡಿ

Viral Marriage : ಸೋಷಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಪ್ರಸ್ತುತ ಸಂಚಲನ ಮೂಡಿಸುತ್ತಿದೆ. ಕಪ್ಪು ಬಣ್ಣದ ಯುವಕ ಮತ್ತು ಸುಂದರ ಯುವತಿ ಮದುವೆಯಾಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಜೋಡಿಯನ್ನು ನೋಡಿದ ನೆಟ್ಟಿಗರು ಅವರ ಹಿನ್ನೆಲೆ ತಿಳಿಯದೇ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. 

Add Zee News as a Preferred Source

ಹೌದು.. ಮಧ್ಯಪ್ರದೇಶದ ರಿಷಭ್ ರಜಪೂತ್ ಮತ್ತು ಸೋನಾಲಿ ಚೌಕ್ಸೆ ದಂಪತಿಗಳ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಟ್ರೋಲ್‌ಗಳಿಗೆ ಒಳಗಾದ ನಂತರ ಈ ಜೋಡಿ ಧೈರ್ಯದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಸೋನಾಲಿಯವರನ್ನು 'ಗೋಲ್ಡ್‌ ಡಿಗ್ಗರ್‌' ಅಂತ ಕರೆದರೆ ಇನ್ನೂ ಕೆಲವರು ಶ್ರೀಮಂತಿಕೆ ನೋಡಿ ಮದುವೆಯಾಗಿದ್ದಾಳೆ ಅಂತ ಟೀಕೆ ಮಾಡಿದ್ದರು.

ಇದನ್ನೂ ಓದಿ:ನಿಮ್ಗೆ ಗೊತ್ತೆ ಮನೆಯಲ್ಲಿಯೇ 24K ಚಿನ್ನವನ್ನು ತಯಾರಿಸಬಹುದು..! 99% ಜನರಿಗೆ ಈ ರಹಸ್ಯವೇ ತಿಳಿದಿಲ್ಲ

ಇತ್ತೀಚಿಗೆ ಈ ಜೋಡಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.. ಅಲ್ಲದೆ, ತಮ್ಮ ಮದುವೆಯ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ.. ಟ್ರೋಲ್‌ಗಳ ಬಗ್ಗೆ ನೆರೆಹೊರೆಯ ಮಹಿಳೆಯರು ರಿಷಭ್‌ನ ತಾಯಿಗೆ ತಿಳಿಸಿದ ನಂತರವೇ ಈ ವಿಚಾರ ಅವರಿಗೆ ಗೊತ್ತಾಗಿದೆಯಂತೆ.  

"ನಮ್ಮ ಮದುವೆಯನ್ನು ತಮಾಷೆಯಾಗಿ ಮಾಡಿ ಮೀಮ್ಸ್ ಮಾಡಿರುವುದನ್ನು ನೋಡಿ ನನಗೆ ಆಘಾತವಾಯಿತು. ಇದು ನಮ್ಮ ಕ್ಷಣ. ನಾವು ವರ್ಷಗಳಿಂದ ಕಾಯುತ್ತಿದ್ದ ಸುಂದರ ಗಳಿಗೆ. ನಮ್ಮ ಕುಟುಂಬದಲ್ಲಿ ಯಾರೂ ಬಣ್ಣದ ಆಧಾರದ ಮೇಲೆ ಇದುವರೆಗೆ ಒಂದೂ ಹೇಳಿಕೆ ನೀಡಿಲ್ಲ, ಆದರೆ ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳನ್ನು ನೋಡಿ ನನಗೆ ಆಘಾತವಾಯಿತು." ಎಂದು ಅಸಮಾಧಾನ ವ್ಯಕ್ತಪಡಿಸಿದ ರಿಷಭ್, "ಇತರರ ಕುಟುಂಬಗಳನ್ನು ಟ್ರೋಲ್ ಮಾಡುವ ಹಕ್ಕು ಯಾರಿಗೂ ಇಲ್ಲ" ಎಂದರು.

ಇದನ್ನೂ ಓದಿ:ಅಲರ್ಟ್‌ ಕಪಲ್ಸ್‌ಗಳಿಗೆ "ಓಯೋ" ಗುಡ್‌ ನ್ಯೂಸ್‌...ರೂಮ್‌ ಬುಕ್ಕಿಂಗ್‌ಗೆ ಬೇಡ ಆಧಾರ್‌ ಕಾರ್ಡ್‌

ಜೋಡಿಯ ಪ್ರೇಮ ಪಯಣ : ಇಬ್ಬರೂ ಮೊದಲು 2014 ರಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ತರಗತಿಯಲ್ಲಿ ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಅರಳಿತು, ಡೇಟಿಂಗ್ ಮಾಡಲು ಪ್ರಾರಂಭಿಸಿದರು. "30 ಸೆಕೆಂಡುಗಳ ವೀಡಿಯೊವನ್ನು ನೋಡಿ ಕಾಮೆಂಟ್ ಮಾಡುವ ಜನರಿಗೆ ನಮ್ಮ 11 ವರ್ಷಗಳ ಪ್ರಯಾಣ ಗೊತ್ತಿಲ್ಲ" ಎಂದು ರಿಷಬ್‌ ನೋವು ತೋಡಿಕೊಂಡರು.

ಒಟ್ಟಾರೆಯಾಗಿ ಕೇವಲ ಚರ್ಮದ ಬಣ್ಣ ಬಿಳಿಯಾಗಿದ್ದರೆ ಮಾತ್ರ ಉತ್ತಮರೇ..? ಎನ್ನುವ ಕಲ್ಪನೆ ಒಬ್ಬರ ಜೀವನದ ಅತ್ಯಂತ ಸಂತೋಷದ ಕ್ಷಣಗಳನ್ನು ಹೇಗೆ ಹಾಳುಮಾಡುತ್ತದೆ ಎಂಬುದನ್ನು ಈ ಜೊಡಿಯ ಕಥೆ ತೋರಿಸುತ್ತದೆ. ವಿಶೇಷ ಅಂದ್ರೆ, ದಂಪತಿಗಳು ಟ್ರೋಲಿಂಗ್ ಅನ್ನು ಧೈರ್ಯದಿಂದ ಎದುರಿಸುತ್ತಿರುವುದಲ್ಲದೇ, ಜೀವನದ ಪ್ರಯಾಣವನ್ನು ಬಲವಾಗಿ ಮುಂದುವರಿಸುತ್ತಿದ್ದಾರೆ...

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News