Operation Sindoor: ಅಯ್ಯೋ ದೇವರೇ.. ಲೈವ್‌ ಟಿವಿಯಲ್ಲಿ ಕ್ಯಾಮರಾದ ಮುಂದೆ ಕೂತು ಆಂಕರ್‌ ಹಿಂಗೆ ಗೊಳೋ ಅಂತಾ ಕಣ್ಣೀರು ಹಾಕೋದಾ...

Operation Sindoor: ಪಹಲ್ಗಾಮ್ ನಡೆದ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ, ಪಾಕಿಸ್ತಾನಿ 9 ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಮುಗಿಸಿದೆ. ಇದರ ಬೆನ್ನಲ್ಲೆ ಪಾಕಿಸ್ತಾನಿ ಸುದ್ದಿ ವಾಹಿನಿ ನಿರೂಪಕಿಯೊಬ್ಬರ ವಿಡಿಯೋ ಒಂದು ಇದೀಗ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಫುಲ್‌ ಟ್ರೋಲ್‌ ಮಾಡುತ್ತಿದ್ದಾರೆ.  

Written by - Zee Kannada News Desk | Last Updated : May 8, 2025, 02:27 PM IST
  • ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಯೋತ್ಪಾದಕ ಗುಂಪನ್ನು ನಿರ್ಮೂಲನೆ ಮಾಡಿದೆ.
  • ಪಾಕಿಸ್ತಾನದ ಸುದ್ದಿ ನಿರೂಪಕಿಯೊಬ್ಬರು, ಈ ಹಿನ್ನೆಲೆಯಲ್ಲಿ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
  • ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದ್ದು, ನೆಟ್ಟಿಗರು ಇದನ್ನು ಟ್ರೋಲ್ ಮಾಡುತ್ತಿದ್ದಾರೆ.
Operation Sindoor: ಅಯ್ಯೋ ದೇವರೇ.. ಲೈವ್‌ ಟಿವಿಯಲ್ಲಿ ಕ್ಯಾಮರಾದ ಮುಂದೆ ಕೂತು ಆಂಕರ್‌ ಹಿಂಗೆ ಗೊಳೋ ಅಂತಾ ಕಣ್ಣೀರು ಹಾಕೋದಾ...

Operation Sindoor: ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಯೋತ್ಪಾದಕ ಗುಂಪನ್ನು ನಿರ್ಮೂಲನೆ ಮಾಡಿದೆ. ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ ಸುಮಾರು 100 ಭಯೋತ್ಪಾದಕರು ಸಾವನ್ನಪ್ಪಿದ್ದು, ಈ ಕಾರಣಕ್ಕಾಗಿ ಪಾಕಿಸ್ತಾನದ ಸುದ್ದಿ ನಿರೂಪಕಯೊಬ್ಬರು ಲೈ ಟಿವಿಯಲ್ಲಿ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

Add Zee News as a Preferred Source

ಪಾಕಿಸ್ತಾನಿ ಟಿವಿ ನಿರೂಪಕರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಪರೇಷನ್ ಸಿಂಧೂರ್‌ನಲ್ಲಿ ಮಡಿದವರಿಗೆ ಅವರು ತಮ್ಮ ಸಂತಾಪ ಸೂಚಿಸಿದರು ಮತ್ತು ತೀವ್ರವಾಗಿ ದುಃಖಿತರಾದ, ಅವರು ನೇರ ಪ್ರಸಾರದಲ್ಲಿ ಸುದ್ದಿ ಓದುತ್ತಾ ಕಣ್ಣೀರು ಹಾಕಿದ್ದಾರೆ. ದೇವರನ್ನು ಪ್ರಾರ್ಥಿಸುತ್ತಾ ಅಳುತ್ತಾ ಮುಗ್ಧ ಜನರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Python snake: ಅಯ್ಯೋ ದುರ್ವಿಧಿಯೇ... 36 ವರ್ಷದ ಜೀವಂತ ಮಹಿಳೆಯನ್ನು ನುಂಗಿ ನೀರು ಕುಡಿದ ದೈತ್ಯ ಹೆಬ್ಬಾವು! ರಾಕ್ಷಸ ಹಾವಿನ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಬಲವಾದ ಪ್ರತ್ಯುತ್ತರ ನೀಡಿತು. ಭಾರತದ ದಾಳಿ ಪಾಕಿಸ್ತಾನದಾದ್ಯಂತ ಭೀತಿಯನ್ನು ಸೃಷ್ಟಿಸಿದೆ. ಮಂಗಳವಾರ ಬೆಳಗಿನ ಜಾವ 1.30 ರ ಸುಮಾರಿಗೆ ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆ ಉಗ್ರರನ್ನು ತಟಸ್ಥಗೊಳಿಸಿತು. ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ ಸುಮಾರು 100 ಭಯೋತ್ಪಾದಕರು ಸಾವನ್ನಪ್ಪಿದರು. ಪಾಕಿಸ್ತಾನದ ಸುದ್ದಿ ನಿರೂಪಕಿಯೊಬ್ಬರು, ಈ ಹಿನ್ನೆಲೆಯಲ್ಲಿ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆಪರೇಷನ್ ಸಿಂಧೂರ ದಾಳಿಯಲ್ಲಿ ಮಡಿದ ಪಾಕಿಸ್ತಾನಿ ಜನರಿಗೆ ಅವರು ತಮ್ಮ ಸಂತಾಪ ಸೂಚಿಸಿದರು. ಕಾರ್ಯಕ್ರಮ ನೇರಪ್ರಸಾರವಾಗುತ್ತಿದ್ದಾಗ, ನಿರೂಪಕ ಅಳುತ್ತಾ ಬೇಡಿಕೊಂಡಳು. "ಮುಗ್ಧ ಜನರನ್ನು ಕೊಲ್ಲಲಾಗುತ್ತಿದೆ. ದೇವರೇ, ದಯವಿಟ್ಟು ಅವರನ್ನು ರಕ್ಷಿಸು" ಎಂದು ಹೇಳುತ್ತಾ ಅವಳು ಕಣ್ಣೀರು ಸುರಿಸಿದಳು. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದ್ದು, ನೆಟ್ಟಿಗರು ಇದನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Snake viral news: ದೇವರ ದರ್ಶನ ಪಡೆದು ಪ್ರಸಾದ ತಿನ್ನಲು ಹೋಗಿದ್ದವರಿಗೆ ಕಾದಿತ್ತು ಶಾಕ್‌! ಆಸೆಯಿಂದ ಅನ್ನ ಬಾಯಿಗಿಟ್ಟುಕೊಂಡವರಿಗೆ ಅದರಲ್ಲಿ ಸಿಕ್ಕಿದ್ದು...

ಈ ವೈರಲ್ ವೀಡಿಯೊವನ್ನು @Incognito_qfs ಎಂಬ X ಪುಟದಿಂದ ಹಂಚಿಕೊಳ್ಳಲಾಗಿದೆ. ಇದುವರೆಗೆ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದವರೆಲ್ಲರೂ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಭಯೋತ್ಪಾದಕರು ಸತ್ತರೆ ಅಳುತ್ತಾರಾ? ಎಂದು ಅವರು ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ  ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ಇವರು ನಿರೂಪಕಿಯಾಗಿ ಅಲ್ಲ ಹೊರತಾಗಿ ಪಾಕಿಸ್ತಾನಿ ಧಾರಾವಾಹಿಗಳಲ್ಲಿ ನಟಿಸಬೇಕು ಎಂದು ಕಾಮೆಂಟ್‌ ಮಾಡಿದ್ದರು. ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿ, "ನಿಲ್ಲಿಸಿ ಸಹೋದರಿ.. ಎಂತಹ ನಾಟಕ ಮಾಡುತ್ತಿದ್ದೀರಿ" ಎಂದು ಬರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಗರು ಫುಲ್‌ ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೇಟೆಯಾಡಲು ಬಂದ ಹಾವನ್ನೇ ನುಂಗಿದ ಕಪ್ಪೆ! ಆದ್ರೆ ಜೀರ್ಣಿಸಿಕೊಳ್ಳಲಾಗದೆ ಪೇಚಿಗೆ ಸಿಲುಕಿದ ಮಂಡೂಕ ಇಡೀ ಸರ್ಪವನ್ನೇ ಹೊರಹಾಕಿದ್ದು ಅಲ್ಲಿಂದ...! ದೃಶ್ಯ ನೋಡಿ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News