ಈ ವಿಡಿಯೋ ನೋಡಿದರೆ ನೀವು ಜನ್ಮದಲ್ಲಿ ಮುಟ್ಟಿಯೂ ನೋಡಲಿಕ್ಕಿಲ್ಲ ಮೊಮೊಸ್ !ತಯಾರಾಗುವ ಜಾಗದಲ್ಲಿ ಪತ್ತೆಯಾಗಿದೆ ನಾಯಿ ತಲೆ! ಬಾಯಿ ಚಪ್ಪರಿಸಿಕೊಂಡು ತಿನ್ನುವವರಿಗೆಲ್ಲಾ ಬಿಗ್ ಶಾಕ್

ಇತ್ತೀಚೆಗೆ ನಡೆದ ಒಂದು ಘಟನೆ ಮೊಮೊ ಪ್ರಿಯರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಆಹಾರ ಇಲಾಖೆ ಇತ್ತೀಚೆಗೆ ನಡೆಸಿದ ರೈಡ್ ನಲ್ಲಿ ಮೊಮೊ ಮತ್ತು ಸ್ಪ್ರಿಂಗ್ ರೋಲ್ ಕಾರ್ಖಾನೆಯಲ್ಲಿ ನಾಯಿಯ ತಲೆ ಪತ್ತೆಯಾಗಿದೆ. 

Written by - Ranjitha R K | Last Updated : Mar 19, 2025, 11:09 AM IST
  • ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಫಾಸ್ಟ್ ಫುಡ್ ಮೊಮೊಸ್
  • ಸಸ್ಯಾಹಾರಿ ಮತ್ತು ಮಾಂಸಹಾರಿ ಎರಡೂ ರೂಪಗಳಲ್ಲಿ ತಯಾರಿಸಲಾಗುತ್ತದೆ.
  • ಮಾರುಕಟ್ಟೆಯಲ್ಲಿ ಹಲವು ಬಗೆಯ ಮೊಮೊಗಳು ಲಭ್ಯವಿದೆ.
ಈ ವಿಡಿಯೋ ನೋಡಿದರೆ ನೀವು ಜನ್ಮದಲ್ಲಿ ಮುಟ್ಟಿಯೂ ನೋಡಲಿಕ್ಕಿಲ್ಲ ಮೊಮೊಸ್ !ತಯಾರಾಗುವ ಜಾಗದಲ್ಲಿ ಪತ್ತೆಯಾಗಿದೆ ನಾಯಿ ತಲೆ! ಬಾಯಿ ಚಪ್ಪರಿಸಿಕೊಂಡು ತಿನ್ನುವವರಿಗೆಲ್ಲಾ ಬಿಗ್ ಶಾಕ್

ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಫಾಸ್ಟ್ ಫುಡ್ ಮೊಮೊಸ್. ಈ ಖಾದ್ಯವನ್ನು ಸಸ್ಯಾಹಾರಿ ಮತ್ತು ಮಾಂಸಹಾರಿ ಎರಡೂ ರೂಪಗಳಲ್ಲಿ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಮೊಮೊಗಳು ಲಭ್ಯವಿದೆ. ಆದರೆ ಇತ್ತೀಚೆಗೆ ನಡೆದ ಒಂದು ಘಟನೆ ಮೊಮೊ ಪ್ರಿಯರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಆಹಾರ ಇಲಾಖೆ ಇತ್ತೀಚೆಗೆ ನಡೆಸಿದ ರೈಡ್ ನಲ್ಲಿ ಮೊಮೊ ಮತ್ತು ಸ್ಪ್ರಿಂಗ್ ರೋಲ್ ಕಾರ್ಖಾನೆಯಲ್ಲಿ ನಾಯಿಯ ತಲೆ ಪತ್ತೆಯಾಗಿದೆ.  

Add Zee News as a Preferred Source

ಆಹಾರ ಕಾರ್ಖಾನೆಯಲ್ಲಿ ನಾಯಿಯ ತಲೆ ಪತ್ತೆ  : 
ವರದಿಯ ಪ್ರಕಾರ, ಪಂಜಾಬ್‌ನ ಮೊಹಾಲಿಯಲ್ಲಿ ಆಹಾರ ಇಲಾಖೆಯು ದಾಳಿ ನಡೆಸಿದಾಗ,  ಮೊಮೊ ಮತ್ತು ಸ್ಪ್ರಿಂಗ್ ರೋಲ್ ಕಾರ್ಖಾನೆಯ ಫ್ರಿಡ್ಜ್‌ನಲ್ಲಿ ನಾಯಿಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಈ ಬಗ್ಗೆ ಒಂದು ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಇದರಲ್ಲಿ ಆಹಾರ ಕಾರ್ಖಾನೆ ಅಸಹ್ಯಕರ ಮತ್ತು ಕೊಳಕು ಸ್ಥಿತಿಯಲ್ಲಿ ಕಾಣುತ್ತಿದೆ. ಈ ಕಾರ್ಖಾನೆ ಮೊಹಾಲಿಯ ಮಾತೌರ್ ಪ್ರದೇಶದಲ್ಲಿದ್ದು, ಇಲ್ಲಿಂದ 2 ವರ್ಷಗಳಿಂದ ಬೇರೆ ಬೇರೆ ಕಡೆಗಳಿಗೆ ಮೊಮೊಗಳನ್ನು ಪೂರೈಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : Viral Video: ʼನೋಡ್ಕೋಳಿʼ ಅಂತ ಫಸ್ಟ್‌ ನೈಟ್‌ ವಿಡಿಯೋ ಹಂಚಿಕೊಂಡ ನವಜೋಡಿ! ಇದೊಂದು ಬಾಕಿ ಇತ್ತು ಎಂದ ನೆಟ್ಟಿಗರು..

ಕೊಳೆತ ತರಕಾರಿಗಳು ಮತ್ತು ಕೊಳಕು ನೀರು : 
ಇಲ್ಲಿ ನೌಕರರು ಅಡುಗೆ ಮಾಡಲು ಕೊಳಕು ನೀರು ಮತ್ತು ಕೊಳೆತ ತರಕಾರಿಗಳನ್ನು ಬಳಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ದಾಳಿ ನಡೆದಿದೆ. ವರದಿಯ ಪ್ರಕಾರ, ದಾಳಿಯ ಸಮಯದಲ್ಲಿ, ಪಂಜಾಬ್ ಆರೋಗ್ಯ ಇಲಾಖೆಯು ಕೊಳೆತ ಮಾಂಸ, ಕ್ರಷರ್ ಯಂತ್ರ ಮತ್ತು ಮರುಬಳಕೆ ಮಾಡಿದ ಕೊಳಕು ಎಣ್ಣೆಯನ್ನು ಕಂಡುಹಿಡಿದಿದೆ. ಕಾರ್ಖಾನೆಯಲ್ಲಿ ಪತ್ತೆಯಾದ ನಾಯಿಯ ತಲೆ ಪಗ್ ತಳಿಯದ್ದಾಗಿತ್ತು ಎಂದು ಹೇಳಲಾಗುತ್ತಿದೆ.  

 

ಮಾಲೀಕರಿಗೆ ದಂಡ  : 
ಕಾರ್ಖಾನೆಯಲ್ಲಿ ಪತ್ತೆಯಾದ ನಾಯಿಯ ತಲೆಗೆ ಸಂಬಂಧಿಸಿದಂತೆ, ಅಧಿಕಾರಿಗಳು ಅದನ್ನು ಆಹಾರಕ್ಕಾಗಿ ಬಳಸುತ್ತಿರಲಿಲ್ಲ ಎಂದು ಹೇಳುತ್ತಾರೆ. ನೇಪಾಳಿ ಮೂಲದವರು ಎಂದು ಹೇಳಲಾಗುವ ಕಾರ್ಖಾನೆಯ ಕಾರ್ಮಿಕರು ನಾಯಿ ಮಾಂಸವನ್ನು ಸೇವಿಸುತ್ತಿದ್ದಾರೆ ಎಂದು ಅವರು ಹೇಳಿದರು. ಆಹಾರದಲ್ಲಿ ನಾಯಿ ಮಾಂಸವನ್ನು ಬಳಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಪ್ರಸ್ತುತ ನಾಯಿಯ ತಲೆಯನ್ನು ಪಶುವೈದ್ಯಕೀಯ ಇಲಾಖೆಗೆ ಕಳುಹಿಸಲಾಗಿದೆ. ಈ ಮಧ್ಯೆ, ಮೊಹಾಲಿ ಮುನ್ಸಿಪಲ್ ಕಾರ್ಪೊರೇಷನ್ ಮೊಮೊ ಕಾರ್ಖಾನೆಯ ಮಾಲೀಕರಿಗೆ 12,000 ದಂಡ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಬಳಸಿದ್ದಕ್ಕಾಗಿ 10,000 ಪ್ರತ್ಯೇಕ ದಂಡವನ್ನು ವಿಧಿಸಿದೆ. 

ಇದನ್ನೂ ಓದಿ : ಮನುಷ್ಯರಂತೆಯೇ ಭೂಮಿಯೂ ಉಸಿರಾಡುತ್ತದೆ !ಸುಳ್ಳು ಅಂದುಕೊಂಡರೆ ಇಲ್ಲಿದೆ ನೋಡಿ ಈ ಅದ್ಭುತದ ವಿಡಿಯೋ !

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News