)
Tiger Viral Video: ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಂಭಾಗದ ನಿಸರ್ಗ ಲೇಔಟ್ ನಲ್ಲಿ ಸೋಮವಾರ (ಆ.25) ರಾತ್ರಿ 10 ಗಂಟೆ ಸುಮಾರಿಗೆ ಹುಲಿ ಓಡಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಹುಲಿ ಓಡಾಡುತ್ತಿರುವ ದೃಶ್ಯ ಸ್ಥಳೀಯರ ಮನೆಯೊಂದರ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಮಾಹಿತಿ ಅರಿತ ಬಳಿಕ ಸ್ಥಳೀಯ ನಿವಾಸಿಗರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ.
ರಾತ್ರಿ ಶ್ವಾನ ಬೊಗಳುತ್ತಿದ್ದನ್ನು ಕಂಡು ಸಿಸಿ ಕ್ಯಾಮರ ಪರಿಶೀಲಿಸಿದಾಗ ಅಲ್ಲೇ ಮನೆ ಮುಂದೆಯೇ ಹುಲಿ ಓಡಾಡಿರುವುದು ಗೊತ್ತಾಗಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಮನೆ ಮುಂದೆ ಹುಲಿ ಓಡಾಡುತ್ತಿರುವ ದೃಶ್ಯವನ್ನು ಇಲ್ಲಿ ವೀಕ್ಷಿಸಿ:
ವ್ಯಾಘ್ರನ ಓಡಾಟ ಕಂಡು ಮನೆಯಿಂದ ಆಚೆ ಬರಲು ಸ್ಥಳೀಯರು ಭಯ ಪಡುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು ಪಟ್ಟಣದಲ್ಲಿ ಓಡಾಡುಟ್ಟಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರಾದ ಸಾಹುಲ್
ಹಮೀದ್ ಹಾಗೂ ನಿವಾಸಿಗರು ಒತ್ತಾಯಿಸಿದ್ದಾರೆ.