)
ಮನುಷ್ಯ ತಾನೆಷ್ಟು ಮುಂದುವರಿದಿದ್ದೇನೆ ಅಂದುಕೊಂಡರೂ ಪ್ರಕೃತಿಯಾ ಮುಂದೆ ಮನುಷ್ಯ ಏನೂ ಅಲ್ಲ ಎನ್ನುವುದನ್ನು ಈ ನಿಸರ್ಗ ತೋರಿಸುತ್ತಲೇ ಇರುತ್ತದೆ. ಪ್ರಕೃತಿ ಕೆಲವೊಮ್ಮೆ ನಂಬಲು ಕಷ್ಟವಾಗುವಷ್ಟು ಪವಾಡಗಳನ್ನು ತೋರಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನವಜಾತ ಹಸುವಿನ ಕರುವಿಗೆ ಕೇವಲ ಎರಡು ಕಾಲುಗಳಿವೆ. ಇಲ್ಲೂ ವಿಶೇಷವೆಂದರೆ ಈ ಕರು ಕೇವಲ ಎರಡು ಕಾಲುಗಳ ಆಧಾರದಲ್ಲಿಯೇ ಸಾಮಾನ್ಯ ಕರುಗಳಂತೆ ಓಡಾಡುತ್ತದೆ, ಚೆಂಗನೆ ಜಿಗಿಯುತ್ತದೆ. ಅನೇಕ ಜನರು ಈ ಕರುವನ್ನು ದೇವರ ಪವಾಡ ಎಂದೇ ಕರೆಯುತ್ತಿದ್ದಾರೆ.
ಈ ಕರು ಎರಡು ಕಾಲುಗಳೊಂದಿಗೆ ಹುಟ್ಟಿರುವ ಕರುವನ್ನು ವೀಡಿಯೊದಲ್ಲಿ ಕಾಣಬಹುದು. ಇದಕ್ಕೆ ಎರಡೂ ಹಿಂಗಾಲುಗಳಿಲ್ಲ, ಎರಡು ಮುಂಭಾಗದ ಕಾಲುಗಳು ಮಾತ್ರ ಇವೆ. ಆಶ್ಚರ್ಯಕರ ಸಂಗತಿಯೆಂದರೆ ಈ ಕರು ಯಾವುದೇ ಬೆಂಬಲವಿಲ್ಲದೆ ಆ ಎರಡು ಕಾಲುಗಳ ಮೇಲೆ ನಿಂತು ನಡೆಯುತ್ತದೆ. ಸಾಮಾನ್ಯ ಕರುಗಳಂತೆ ವೇಗವಾಗಿ ನಡೆಯಲು ಸಾಧ್ಯವಾಗದಿದ್ದರೂ, ಅದರ ದೃಢನಿಶ್ಚಯ ಮತ್ತು ಬದುಕುವ ಹೋರಾಟ ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಕರುವಿಗೆ ಸೇವೆ ಸಲ್ಲಿಸುವ ಅನೇಕ ಜನರಿದ್ದಾರೆ. ಅದಕ್ಕೆ ಹಾಲು, ವಿಶೇಷವಾಗಿ ಮೇಕೆ ಹಾಲು ನೀಡುತ್ತಿದ್ದಾರೆ. ಸರಿಯಾದ ಪೋಷಣೆ ನೀಡುವ ಉದ್ದೇಶದಿಂದ ಈ ಕರುವಿಗೆ ಮೇಕೆ ಹಾಲು ನೀಡಲಾಗುತ್ತಿದೆಯಂತೆ. ಜನರು ಈ ಕರುವನ್ನು ಪವಾಡ ನಡು ನಂಬಿದ್ದು, ಈ ಕರುವನ್ನು ನೋಡಲು ಪ್ರತಿದಿನ 2-3 ಸಾವಿರ ಜನರು ಬರುತ್ತಾರೆ ಎಂದು ಹೇಳಲಾಗಿದೆ.
ಕರುವಿ ವೀಡಿಯೊ ಇಲ್ಲಿದೆ :
ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ :
ಈ ವೈರಲ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾದ Instagram ನಲ್ಲಿ @kushal._giri_ji_maharaj_1008 ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ 17 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. 2 ಲಕ್ಷ 81 ಸಾವಿರಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅನೇಕ ಜನರು "ಗೋ ಮಾತಾ ಕಿ ಜೈ" ಎಂದು ಬರೆಯುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ದೇವರ ರೂಪ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ