Snake Bite: ಹಾವುಗಳು ಹೆಚ್ಚಾಗಿ ದೇಹದ ಯಾವ ಭಾಗಕ್ಕೆ ಕಚ್ಚುತ್ತವೆ ಗೊತ್ತಾ? ಮೊದಲು ಟಾರ್ಗೆಟ್‌ ಮಾಡುವುದು ಇದೇ ಭಾಗವನ್ನು

Snake Bite: ಹಾವು ಎಂದರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ, ಈ ವಿಷಜಂತುಗಳನ್ನು ಕಂಡ ಕ್ಷಣ ಎದೆ ನಡುಗಲು ಆರಂಭಿಸುತ್ತೆ, ನಿಂತಲ್ಲಿಯೇ ಬಟ್ಟೆ ಒದ್ದೆಯಾಗುತ್ತೆ.  

Written by - Zee Kannada News Desk | Last Updated : Mar 26, 2025, 05:31 PM IST
  • ನಾವು ಸಾಮಾನ್ಯವಾಗಿ ಪ್ರತಿನಿತ್ಯ ಹಾವಿನ ಕಡಿತದಿಂದ ಸಾವನಪ್ಪಿದ ಹಲವು ಘಟನೆಗಳ ಬಗ್ಗೆ ಕೇಳುತ್ತಿರುತ್ತೇವೆ.
  • ಈ ಸಿಂಪಲ್‌ ವಿಚಾರ ತಿಳಿದರೆ ಸಾಕು, ನಾವು ಇಂತಹ ಸಂದರ್ಭದಲ್ಲಿ ಹಾವಿನ ಕಡತದಿಂದ ಪಾರಾಗಬಹುದು.
  • ಭಯ ಅದಕ್ಕೆ ಶುರುವಾದಾಗ ಮಾತ್ರ ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಅದು ನಿಮ್ಮ ಮೇಲೆ ದಾಳಿ ಮಾಡುತ್ತದೆ.
Snake Bite: ಹಾವುಗಳು ಹೆಚ್ಚಾಗಿ ದೇಹದ ಯಾವ ಭಾಗಕ್ಕೆ ಕಚ್ಚುತ್ತವೆ ಗೊತ್ತಾ? ಮೊದಲು ಟಾರ್ಗೆಟ್‌ ಮಾಡುವುದು ಇದೇ ಭಾಗವನ್ನು

Snake Bite: ಹಾವುಗಳನ್ನು ನೇಋವಾಗಿ ಅಷ್ಟೆ ಅಲ್ಲ ಅದರ ಚಿತ್ರವನ್ನು ನೋಡಿದರೂ ಸಹ ನಮ್ಮ ಎದೆಯಲ್ಲಿ ನಡುಕ ಹುಟ್ಟುತ್ತದೆ. ಇನ್ನೂ ಅವುಗಳು ನಿಜವಾಗಿ ಕಣ್ಣಿಗೆ ಕಾಣಿಸಿಕೊಂಡರೆ ಜೀವವೇ ಬಾಯಿಗೆ ಬರುತ್ತೆ. ನಾವು ಸಾಮಾನ್ಯವಾಗಿ ಪ್ರತಿನಿತ್ಯ ಹಾವಿನ ಕಡಿತದಿಂದ ಸಾವನಪ್ಪಿದ ಹಲವು ಘಟನೆಗಳ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಹಾವು ಯಾಕೆ ಕಚ್ಚುತ್ತದೆ? ಯಾವ ಭಾಗವನ್ನು ಟಾರ್ಗೆಟ್‌ ಮಾಡುತ್ತದೆ? ಎಂಬುದನ್ನು ನಾವು ಯೋಚನೆ ಮಾಡುವುದಿಲ್ಲ.

Add Zee News as a Preferred Source

ಈ ಸಿಂಪಲ್‌ ವಿಚಾರ ತಿಳಿದರೆ ಸಾಕು, ನಾವು ಇಂತಹ ಸಂದರ್ಭದಲ್ಲಿ ಹಾವಿನ ಕಡತದಿಂದ ಪಾರಾಗಬಹುದು. ನಗರಗಳಲ್ಲಿ ಹೆಚ್ಚಾಗಿ ಹಾವುಗಳು ಕಾಣಿಸಿಕೊಳ್ಳದೆ ಇರಬಹುದು. ಆದರೆ ಹಳ್ಳಿಗಳಲ್ಲಿ ಇಂದಿಗೂ ಕೂಡ ಹಾವುಗಳು ಸರ್ವೇ ಸಾಮಾನ್ಯವಾಗಿ ಸುತ್ತಾಡುತ್ತವೆ. ಹಾವುಗಳು ಸುಖಾ ಸುಮ್ಮನೆ ನಿಮ್ಮನ್ನು ಕಚ್ಚುವುದಿಲ್ಲ, ಎದುರಾಳೆಗಳಿ ಅವುಗಳಿಗೆ ತೊಂದರೆ ಮಾಡುತ್ತಾರೆ ಎನ್ನುವ ಭಯ ಅದಕ್ಕೆ ಶುರುವಾದಾಗ ಮಾತ್ರ ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಅದು ನಿಮ್ಮ ಮೇಲೆ ದಾಳಿ ಮಾಡುತ್ತದೆ.

ಇದನ್ನೂ ಓದಿ: Viral Video: ಮಾಡಿದ ಪಾಪ ಕಳೆದುಕೊಳ್ಳಲು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಪ್ರೇತಾತ್ಮಗಳು! ವೈರಲ್‌ ಆಯ್ತು ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ವಿಡಿಯೋ

ಹಿಂದಿನ ಕಾಲದಲ್ಲಿ ಹಾವು ಕಚ್ಚಿದರೆ, ಗಿಡ ಮೂಲಿಕೆಗಳನ್ನು ಬಳಸಿ ಹಾವು ಕಚ್ಚಿದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಇದರಿಂದ ಪ್ರಾಣ ಉಳಿಯುವ ಗ್ಯಾರಂಟಿ ಇರಲಿಲ್ಲ. ಆದರೆ, ಇದೀಗ ಹಾವು ಕಡಿತಕ್ಕೆ ಔಷಧಿಯನ್ನು ಕಂಡು ಹಿಡಿಯಲಾಗಿದೆ, ವೈದ್ಯರ ಬಳಿ ಸರಿಯಾದ ಸಮಯಕ್ಕೆ ಹೋಗುವ ಮೂಲಕ ನಾವು ವ್ಯಕ್ತಿಯ ಪ್ರಾಣವನ್ನು ಉಳಿಸಬಹುದು. 

ಹಾವುಗಳು ನಿಮ್ಮ ಮೇಲೆ ಎಲ್ಲಾ ಸಂದರ್ಭದಲ್ಲಿಯೂ ದಾಳಿ ಮಾಡುವುದಿಲ್ಲ, ಅವುಗಳನ್ನು ಕಂಡ ತಕ್ಷಣ ಗಾಬರಿಯಾಗದೆ, ಕೋಲನ್ನು ತೆಗೆದುಕೊಂಡು ಅದನ್ನು ಹೊಡೆಯಲು ಪ್ರಯತ್ನಿಸದೆ, ಶಾಂತವಾಗಿದ್ದರೆ ಹಾವು ತನಗೆ ಪ್ರಣಾಪಾಯವಿಲ್ಲ ಎಂದು ತಿಳಿಯುತ್ತಿದ್ದಂತೆ ಜಾಗ ಕಾಲಿ ಮಾಡುತ್ತದೆ. ಮನೆಯಲ್ಲಿ ಹಾವುಗಳು ಒಂದು ವೇಳೆ ಅಡಗಿಕೊಂಡರೆ, ನೀವು ಉರಗ ತಜ್ಞರಿಗೆ ಕರೆ ಮಾಡಿ, ವಿಷಯ ಮುಟ್ಟಿಸಿ ಅವರು ಬಂದು ಹಾವುಗಳನ್ನು ಹಿಡಿದು ಸುರಕ್ತಿರವಾಗಿ ಕಾಡಿಗೆ ಬಿಡುತ್ತಾರೆ.

ಇದನ್ನೂ ಓದಿ: Viral Video: ಬಿಸಿಲಿನ ಬೇಗೆ ತಾಳಲಾರದೇ ಬೋರ್‌ ಕೆಳಗೆ ತಲೆಇಟ್ಟು ನಿಂತ ದೈತ್ಯ ಹಾವು! ಮೈ ಜುಮ್ಮೆನಿಸುವ ವಿಡಿಯೋ ವೈರಲ್..‌

ಇನ್ನೂ, ಹಾವುಗಳು ದೇಹದ ಯಾವ ಭಾಗವನ್ನು ಹೆಚ್ಚಾಗಿ ಕಚ್ಚುತ್ತವೆ ಎನ್ನುವ ವಿಚಾರಕ್ಕೆ ಬಂದರೆ, ಪಾದವನ್ನು ಹಾವುಗಳು ಹೆಚ್ಚಾಗಿ ಟಾರ್ಗೆಟ್‌ ಮಾಡುತ್ತವೆ, ತಮಗೆ ಅಪಾಯವಿದೆ ಎಂದು ತಿಳಿದ ತಕ್ಷಣ ಅವು ತಕ್ಷಣ ಪಾದಕ್ಕೆ ಬಾಯಿ ಹಾಕುತ್ತವೆ. ಇನ್ನೂ ತನಗೆ ತೊಂದರೆ ಇದೆ ಎಂದು ಅರಿಯುವ ಹಾವು, ತಕ್ಷಣ ತಪ್ಪಿಸಿಕೊಳ್ಳಲು ತನಗೆ ಸುಲಭವಾಗಿ ಎಟಕುವ ದೇಹದ ಭಾಗವನ್ನು ಟಾರ್ಗೆಟ್‌ ಮಾಡುತ್ತದೆ. ಅಂದರೆ, ಹಾವುಗಳು ಅವು ಆಪತ್ತಿನಲ್ಲಿದೆ ಎಂದು ತಿಳಿದ ತಕ್ಷಣ ಕಾಲಿಗೆ ಕಚ್ಚುತ್ತವೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News