)
Snake Viral Video: ನೆಲದ ಮೇಲೆ ಹಾವು ಹರಿದಾಡುವುದನ್ನು ನೀವು ಆಗಾಗ ನೋಡಿರ ಬೇಕು, ಆದರೆ ಗಾಳಿಯಲ್ಲಿ ಹಾವು ಹಾರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿ ಹಾವೊಂದು ಸ್ಟಂಟ್ ಮಾಡಿದ್ದು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಹಾವುಗಳು ನೀರಿನಲ್ಲಿ ತೆವಳುವುದನ್ನು ಅಥವಾ ಈಜುವುದನ್ನು ಜನರು ಯಾವಾಗಲೂ ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಹಾವು ಗಾಳಿಯಲ್ಲಿ ಹಾರುತ್ತಿದೆ ಎಂದು ತೋರುತ್ತದೆ. ವಾಸ್ತವವಾಗಿ, ಕೆಲವು ಹಾವುಗಳು ಗಾಳಿಯಲ್ಲಿ ಜಿಗಿಯುವುದರಲ್ಲಿ ಪರಿಣಿತವಾಗಿವೆ. ಈ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಇತ್ತೀಚೆಗೆ ಹಾವುಗಳು ಮತ್ತು ಹೆಬ್ಬಾವುಗಳನ್ನು ಒಳಗೊಂಡ ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ. ನೆಟಿಜನ್ಗಳು ಸಹ ಈ ಕ್ಲಿಪ್ಗಳನ್ನು ಹೆಚ್ಚಿನ ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಒಂದು ಕಾಲದಲ್ಲಿ ಜನರು ಹಾವನ್ನು ಕಂಡ ತಕ್ಷಣ ಭಯಭೀತರಾಗಿ ಓಡಿಹೋಗುತ್ತಿದ್ದರು, ಆದರೆ ಈಗ ಅವುಗಳ ಜೊತೆ ಸ್ಟಂಟ್ ಮಾಡುತ್ತಿದ್ದಾರೆ.
ಹಾವುಗಳು ಮತ್ತು ಹೆಬ್ಬಾವುಗಳನ್ನು ಒಳಗೊಂಡ ವಿವಿಧ ರೀತಿಯ ವಿಡಿಯೋಗಳು ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಈ ಹಿನ್ನೆಲೆಯಲ್ಲಿ ಬೃಹತ್ ಹೆಬ್ಬಾವಿನ ಈ ವೀಡಿಯೊ ಇಂಟರ್ನೆಟ್ನಲ್ಲಿ ಹೊಸ ಟ್ರೆಂಡಿಂಗ್ ವಿಷಯವಾಗಿದೆ. ಹೆಬ್ಬಾವುಗಳು ಅಪಾಯಕಾರಿ ಜೀವಿಗಳು. ಇವು ಜೀವಿಗಳನ್ನು ನುಂಗುತ್ತವೆ. ಹೆಬ್ಬಾವು ಸಾಮಾನ್ಯವಾಗಿ ದಟ್ಟವಾದ ಕಾಡುಗಳು ಮತ್ತು ಕಲ್ಲಿನ ಭೂಪ್ರದೇಶಗಳಲ್ಲಿ ವಾಸಿಸುತ್ತವೆ. ಹೆಬ್ಬಾವು ಮಾನವ ಅಥವಾ ಪ್ರಾಣಿಗಳನ್ನು ನುಂಗುತ್ತದೆ. ಇದು ಮೈಗೆ ಸುತ್ತಿಕೊಂಡು ತನ್ನ ಬೇಟೆ ಆಡುತ್ತದೆ. ಅವುಗಳ ಸುತ್ತಲೂ ಸುರುಳಿಯಾಗಿ ಮತ್ತು ಉಸಿರುಗಟ್ಟಿಸುವವರೆಗೆ ಸುತ್ತಿಕೊಂಡು ಬೆಟೆಯನ್ನು ಕೊಲ್ಲುತ್ತದೆ.
ಬಳಿಕ ತನ್ನ ಬೇಟೆಯನ್ನು ಸಂಪೂರ್ಣವಾಗಿ ನುಂಗುತ್ತದೆ. ಈ ಕಾರಣಕ್ಕಾಗಿಯೇ ಹೆಬ್ಬಾವುಗಳನ್ನು ಅತ್ಯಂತ ಅಪಾಯಕಾರಿ ಜೀವಿಗಳು ಎಂದು ಪರಿಗಣಿಸಲಾಗುತ್ತದೆ. ಈ ನಡುವೆ ಒಂದು ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗೆ ಇದು ಕೈಗನ್ನಡಿಯಂತಿದೆ.
ಒಂದು ಬೃಹತ್ ಹೆಬ್ಬಾವು ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್ ಆಯಿತು. ಈ ವಿಡಿಯೋದಲ್ಲಿ ಹೆಬ್ಬಾವು ಸ್ವಲ್ಪ ದೂರದವರೆಗೆ ಗಾಳಿಯಲ್ಲಿ ಹಾರುತ್ತಿರುವಂತೆ ತೋರುತ್ತಿತ್ತು. ಇಲ್ಲಿ ಹಾವೊಂದು ಸ್ಟಂಟ್ ಮಾಡಿದ್ದು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಹಾವು ಗಾಳಿಯಲ್ಲಿ ಹಾರುತ್ತಿದೆ ಎಂದು ತೋರುತ್ತದೆ. ನೋಡಲು ಇದು ನಿಜವಾದ ಹೆಬ್ಬಾವಿ ನಂತೆ ಕಾಣುತ್ತದೆ. ನೆಟಿಜನ್ ಗಳು ಇದನ್ನು ನಕಲಿ ವಿಡಿಯೋ ಎಂದೇ ಭಾವಿಸುತ್ತಿದ್ದಾರೆ. ಹೌದು ಇದೊಂದು AI ರಚಿತ ವೀಡಿಯೊ ಆಗಿದೆ.
ವಾಸ್ತವದಲ್ಲಿ ಹೆಬ್ಬಾವುಗಳು ಅತ್ಯಂತ ಭಾರವಾದ ಜೀವಿಗಳು. ಸ್ವಲ್ಪ ದೂರ ತೆವಳಲು ಅವುಗಳಿಗೆ ಸಾಕಷ್ಟು ಸಮಯ ಮತ್ತು ಶ್ರಮ ಬೇಕಾಗುತ್ತದೆ. ಈ ಸಂಗತಿಯನ್ನು ಗಮನಿಸಿದರೆ ಅಂತಹ ಬೃಹದಾಕಾರದ ಜೀವಿ ಗಾಳಿಯಲ್ಲಿ ಹಾರಲು ದೈಹಿಕವಾಗಿ ಅಸಾಧ್ಯವೆಂದು ನೆಟಿಜನ್ಗಳು ವಾದಿಸುತ್ತಾರೆ. ಈ ವಿಡಿಯೋ ನಿಸ್ಸಂದೇಹವಾಗಿ AI-ರಚಿತ ವಿಡಿಯೋ ಆಗಿದೆ.
ವಿಡಿಯೋ ನೋಡಿದ ಜನರು ಕೂಡ ಅಚ್ಚರಿಗೊಂಡಿದ್ದಾರೆ. ಆದರೆ, ಈ ವಿಡಿಯೋ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಿಂದ ಇರಬಹುದು ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೋವನ್ನು ಒಂದು ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವಿಡಿಯೋ ನೋಡಿ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇಂಟರ್ನೆಟ್ ಜಗತ್ತಿನಲ್ಲಿ ಸದ್ಯ ಈ ಹಾರುವ ಹಾವಿನ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
(ಸೂಚನೆ: ಇದೊಂದು AI ರಚಿತ ವಿಡಿಯೋ ಆಗಿದೆ. ಇದನ್ನು ಸೋಷಿಯಲ್ ಮೀಡಿಯಾದ ಟ್ರೆಂಡಿಂಗ್ನಿಂದ ಆಯ್ಕೆ ಮಾಡಲಾಗಿದೆ. ಈ ವಿಡಿಯೋ ಆಗಲಿ, ಮಾಹಿಯನ್ನಾಗಲಿ zee kannada news ದೃಢಪಡಿಸುವುದಿಲ್ಲ. ಇದೊಂದು Viral video ಮಾತ್ರ.)