Snake viral Video: ಹಾವುಗಳಿಗೆ ಸಂಬಂಧ ಪಟ್ಟ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದನ್ನು ನೀವು ನೋಡಿರಬಹುದು. ಆದರೆ ನಾವು ಇಂದು ನಿಮಗೆ ತೋರಿಸಲು ಹೊರಟಿರುವ ಇಂತಹ ಹಾವನ್ನು ನಿಮ್ಮ ಜೀವನಮಾನದಲ್ಲೆ ಎಂದಿಗೂ ನೀವು ನೋಡಿರಲು ಸಾಧ್ಯವೇ ಇಲ್ಲ.

Snake viral Video: ಹಾವುಗಳು ಎಂದರೆ ಯಾರಿಗೆ ತಾನೆ ಭಯ ಇರುವುದಿಲ್ಲ ಹೇಳಿ, ಸಾಮಾನ್ಯವಾಗಿ ನಾವು ಹಾವುಗಳನ್ನು ದೂರದಿಂದ ನೋಡಿದರೇನೆ ನಮ್ಮ ಕೈ ಕಾಲು ನಡುಗಲು ಆರಂಭಿಸುತ್ತೆ. ಇನ್ನೂ ಹತ್ತಿರದಿಂದ ನೋಡುವುದೆಂದರೆ ಕೇಳಬೇಕಾ? ನಾವು ನಮ್ಮ ಜೀವನದಲ್ಲಿ ಅಬ್ಬಬ್ಬಾ ಅಂದ್ರೆ ನಾಗರಹಾವು, ಕಪ್ಪಾವು, ಬಿಳಿ ಹಾವು ಕಡೆ ಪಕ್ಷ ಕೆಂಪು ಹಾವನ್ನು ಕೂಡ ನೋಡಿರುತ್ತೇವೆ, ಆದರೆ ಯಾವುದಾದರೂ ಹಣ್ಣಿಗೆ ಹೋಲುವ ಹಾವನ್ನು ನೀವು ಎಂದಾದರೂ ನೋಡಿದ್ದೀರಾ?
ಹೌದು, ಹಣ್ಣಿಗೆ ಹೋಲುವ ಒಂದು ಹಾವಿದೆ. ಅದು ಥೇಟ್ ಬಾಳೆ ಹಣ್ಣಿಗೆ ಹೋಲುತ್ತದೆ, ಇದನ್ನು ಬಾಳೆಹಣ್ಣಿನ ಜೊತೆಗೆ ಇಟ್ಟರೆ ಬಾಳೆ ಹಣ್ಣು ಯಾವುದು, ಹಾವು ಯಾವುದು ಅಂತಾ ಕಂಡುಹಿಡಿಯಲು ನಿಮಗೂ ಕೂಡ ಕಷ್ಟವಾಗಿಬಿಡಬಹುದು. ಇಂತಹ ಅಪರೂಪದ ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಾಳೆ ಹಣ್ಣಿನ ಜೊತೆ ಈ ಹಾವನ್ನು ಬಿಡಲಾಗಿದೆ, ಇವೆರಡನ್ನು ಜೊತೆಗೆ ಇಟ್ಟಿರುವುದರಿಂದ ಇದರಲ್ಲಿ ಹಣ್ಣು ಯಾವುದು ಎಂದು ಕಂಡುಹಿಡಿಯಲು ಸಹ ಕಷ್ಟವಾಗುತ್ತಿದೆ. ಇಂತಹ ಅಪರೂಪದ ಹಾವನ್ನು ನೋಡಿದ ನಂತರ ನೆಟ್ಟಿಗರು, ಅರ್ರೇ ಇಂತಹ ಹಾವುಗಳು ಕೂಡ ಅಸ್ತಿತ್ವದಲ್ಲಿ ಇವೆಯಾ ಎಂದು ಬಾಯಿ ಮೇಲೆ ಬೆರಳಿಟ್ಟು ನೋಡುತ್ತಿದ್ದಾರೆ.
ಈ ವಿಡಿಯೋ ನೋಡಿದ ನಂತರ ನಿಮಗೆ ನಿಮ್ಮ ಕಣ್ಣನ್ನು ನಂಬಲು ಸಾಧ್ಯವಾಗುವುದಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಈ ವಿಡಿಯೋವನ್ನು ಇಲ್ಲಿಯವರೆಗೂ ಲಕ್ಷಗಟ್ಟಲೇ ಜನ ವೀಕ್ಷಿಸಿದ್ದ 12 ಸಾವಿರಕ್ಕು ಹೆಚ್ಚು ಮಂದಿ ಇದಕ್ಕೆ ಕಾಮೆಂಟ್ ಹಾಕುತ್ತಿದ್ದಾರೆ. ಈ ವಿಡಿಯೋ ನೋಡಿ ತಾವೂ ಕನ್ಫ್ಯೂಸ್ ಆಗುವುದರ ಜೊತೆಗೆ ತಮ್ಮ ಆಪ್ತರೊಂದಿಗೆ ಶೇರ್ ಮಾಡಿಕೊಂಡು ಅವರನ್ನೂ ಕೂಡ ಕನ್ಫ್ಯೂಸ್ ಮಾಡುತ್ತಿದ್ದಾರೆ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ