Surya tilak on Rama's forehead: ಪ್ರಪಂಚದಾದ್ಯಂತ ಇಂದು ರಾಮ ನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.. ಇದೇ ವೇಳೆ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನಡೆದ ಪವಾಡದ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..

Sri Rama Janmabhoomi Temple: ರಾಮನ ಜನ್ಮಸ್ಥಳವೆಂದು ಪ್ರಸಿದ್ಧವಾದ ಅಯೋಧ್ಯೆಯಲ್ಲಿ ಒಂದು ಪವಾಡದ ಘಟನೆ ನಡೆಯಿತು. ಅಯೋಧ್ಯೆಯಲ್ಲಿ ಭಕ್ತರ ದೊಡ್ಡ ಗುಂಪೇ ನೆರೆದಿರುವ ಸಂದರ್ಭದಲ್ಲಿ ಶ್ರೀ ರಾಮನ ದೇವಾಲಯದಲ್ಲಿ ನಡೆದ ಅಸಾಧಾರಣ ದೃಶ್ಯವನ್ನು ಕಂಡು ಭಕ್ತರು ಪುಳಕಿತರಾದರು. ಶ್ರೀ ರಾಮ ನವಮಿಯ ದಿನ ಎಂದರೇ ಇಂದು ಮಧ್ಯಾಹ್ನ ಸರಿಯಾಗಿ 12 ಗಂಟೆಗೆ, ಸೂರ್ಯನ ತಿಲಕವು ಬಾಲ ರಾಮನ ಹಣೆಯ ಮೇಲೆ ಬಿದ್ದಿದೆ. ಈ ಅಭೂತಪೂರ್ವ ದೃಶ್ಯವು ನಿಜವಾಗಿಯೂ ಜೀವನ ಸಾರ್ಥಕವೆನಿಸುವಂತಿದೆ ಎಂದರೇ ಅತಿಶಯೋಕ್ತಿಯಲ್ಲ.. ಮಧ್ಯಾಹ್ನ 12 ಗಂಟೆಗೆ, ಭಕ್ತರು ಸುಮಾರು 4 ನಿಮಿಷಗಳ ಕಾಲ ಬಾಲ ರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಬೆಳಗುವುದನ್ನು ನೋಡಿದ್ದಾರೆ..
ಹಲವು ವರ್ಷಗಳ ಹೋರಾಟದ ನಂತರ, ಅಯೋಧ್ಯಾ ದೇವಾಲಯವನ್ನು ಬಹಳ ಮಹತ್ವಾಕಾಂಕ್ಷೆಯೊಂದಿಗೆ ನಿರ್ಮಿಸಲಾಯಿತು. ಪ್ರತಿ ಶ್ರೀ ರಾಮ ನವಮಿಯ ದಿನದಂದು, ಸೂರ್ಯನ ಕಿರಣಗಳು ಬಲರಾಮನ ಹಣೆಯ ಮೇಲೆ ತಿಲಕವಾಗಿ ನೇರವಾಗಿ ಬೀಳುವಂತೆ ಇಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ದೇವಾಲಯದಲ್ಲಿ ಕನ್ನಡಿಗಳು ಮತ್ತು ಮಸೂರಗಳನ್ನು ಒಳಗೊಂಡಿರುವ ವಿಶೇಷ ತಾಂತ್ರಿಕ ವ್ಯವಸ್ಥೆಯನ್ನು ಬಳಸಲಾಯಿತು. ಇದರ ಮೂಲಕ, ಗರ್ಭಗುಡಿಯಲ್ಲಿರುವ ವಿಗ್ರಹದ ಮೇಲೆ ಸೂರ್ಯನ ಬೆಳಕು ಪರಿಪೂರ್ಣವಾಗಿ ಬೆಳಗಿತು. ಈ ಸಂಪ್ರದಾಯವು ರಾಮನ ಜನನದ ಸಮಯವನ್ನು ಗುರುತಿಸುವ ಮಧ್ಯಾಹ್ನ 12 ಗಂಟೆಗೆ ನಡೆಯಿತು. ಇದು ಇಕ್ಷ್ವಾಕು ವಂಶದ ಕುಲದೇವತೆಯಾದ ಸೂರ್ಯ ದೇವರೊಂದಿಗಿನ ರಾಮನ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಭಕ್ತರು ನಂಬುತ್ತಾರೆ.
#WATCH | ‘Surya Tilak’ illuminates Ram Lalla’s forehead at the Ram Janmabhoomi Temple in Ayodhya, on the occasion of Ram Navami
'Surya Tilak' occurs exactly at 12 noon on Ram Navami when a beam of sunlight is precisely directed onto the forehead of the idol of Ram Lalla, forming… pic.twitter.com/gtI3Pbe2g1
— ANI (@ANI) April 6, 2025
ಇನ್ನು ಪ್ರಪಂಚದಾದ್ಯಂತದ ಶ್ರೀರಾಮನ ಭಕ್ತರು ದೇವಾಲಯದಲ್ಲಿ ನಡೆದ ಪವಾಡವನ್ನು ವೀಕ್ಷಿಸಲು ದೇವಾಲಯ ಟ್ರಸ್ಟ್ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಎಂದರೇ ಈ ಪವಾಡದ ಘಟನೆಯನ್ನು ವೀಕ್ಷಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೇರ ಪ್ರಸಾರವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮ ಭಕ್ತರನ್ನು ಮತ್ತಷ್ಟು ಆಕರ್ಷಿಸಿತು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.