)
Kota Viral Video: ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದೆ. ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತನೊಬ್ಬ 25 ವರ್ಷದ ಯುವತಿಯನ್ನ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಈ ಆರೋಪದ ಮೇಲೆ ಯುವತಿಯ ಕುಟುಂಬಸ್ಥರು ಅಪ್ರಾಪ್ತನಿಗೆ ಕಠಿಣ ಶಿಕ್ಷೆಯನ್ನ ನೀಡಿದೆ.
ಮಾಹಿತಿ ಪ್ರಕಾರ, ಯುವತಿಯ ಕುಟುಂಬವು ಆಕೆಯ ಅಪ್ರಾಪ್ತ ಗೆಳೆಯನನ್ನ 8 ದಿನಗಳ ಕಾಲ ಒತ್ತೆಯಾಳಾಗಿಟ್ಟುಕೊಂಡಿದ್ದರಂತೆ. ಆತನ ಕೈಗಳನ್ನ ಹಗ್ಗದಿಂದ ಕಟ್ಟಿ ಹಾಕಿ ಬೆಲ್ಟ್ನಿಂದ ಹೊಡೆದಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಜನವರಿ 19ರಂದು ಮಧ್ಯಪ್ರದೇಶದ ಡಾಟಿಯಾ(Datia)ದ ಬಾಲಕನೊಬ್ಬ ಕೋಟಾ ಜಿಲ್ಲೆಯ ಹಿರಾಯಖೇಡಿ ಗ್ರಾಮದ ತನಗಿಂತ ದೊಡ್ಡವಳಾದ ಯುವತಿಯನ್ನ ಕರೆದುಕೊಂಡು ಹೋಗಿದ್ದನಂತೆ. ಆದರೆ ಆ ಯುವತಿ ತನ್ನ ಸ್ವಂತ ಇಚ್ಛೆಯಂತೆ ಹೋಗಿದ್ದಾಳೆಂದು ತಿಳಿದುಬಂದಿದೆ. ಕುಟುಂಬಸ್ಥರ ದೂರಿನ ಮೇರೆಗೆ ಡಾಟಿಯಾದಿಂದ ಆ ಯುವತಿಯನ್ನ ಪೊಲೀಸರು ಕರೆತಂದಿದ್ದಾರೆ.
"8 दिन तक बनाया बंधक युवती के प्रेमी को, और परिवार संग निर्दयता से लटका कर पीटते रहे नाबालिग को।"
आपके संज्ञान के लिए @KanoongoPriyank ji #Rajasthan #Jhalawar @NCPCR_ @JhalawarPolice @PoliceRajasthan pic.twitter.com/Vn1blAMFNq— Sujeet Swami️ (@shibbu87) February 19, 2025
ವಿಚಾರಣೆಯ ವೇಳೆ ಆ ಯುವತಿ ತನ್ನ ಸ್ವಂತ ಇಚ್ಛೆಯಿಂದ ಹುಡುಗನೊಂದಿಗೆ ಹೋಗಿರುವುದಾಗಿ ಹೇಳಿದ್ದಾಳೆ. ಅಲ್ಲದೇ ನನ್ನ ಮೇಲೆ ಯಾವುದೇ ರೀತಿಯ ಘಟನೆ ನಡೆದಿಲ್ಲ. ನಾನೇ ಸ್ವತಃ ಸ್ನೇಹಿತನೊಂದಿಗೆ ಮನೆಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾಳೆ. ಇದಾದ ನಂತರ ಪೊಲೀಸರು ಹುಡುಗಿಯನ್ನು ಆಕೆಯ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಎರಡನೇ ಹೆಂಡತಿಗೆ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ?
ಇದರ ನಂತರ ಯುವತಿಯ ಕುಟುಂಬಸ್ಥರು ಆಕೆಯ ಅಪ್ರಾಪ್ತ ಸ್ನೇಹಿತನನ್ನ ತಮ್ಮ ಮನೆಗೆ ಕರೆತಂದಿದ್ದಾರೆ. ಬಳಿಕ ಆತನನ್ನ ಒತ್ತೆಯಳಾಗಿ ಇರಿಸಿಕೊಂಡು ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆತನ ಎರಡು ಕೈಗಳನ್ನ ಕಟ್ಟಿಹಾಕಿ ಜೋತು ಬೀಳಿಸಲಾಗಿದೆ. ಬೆಲ್ಟ್ನಿಂದ ಆತನ ಮೇಲೆ ಮನಬಂದಂತೆ ಥಳಿಸಲಾಗಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ಬಳಿಕ ಕೋಟಾ ಜಿಲ್ಲೆಯಲ್ಲಿ ಕೋಲಾಹಲವೇ ಉಂಟಾಗಿದೆ. ವಿಡಿಯೋ ಆಧರಿಸಿ ಜಿಲ್ಲಾ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೋಟಾ ಜಿಲ್ಲಾ ಗ್ರಾಮೀಣ ಎಸ್ಪಿ ಸುಜಿತ್ ಶಂಕರ್, ʼಈ ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿʼ ಹೇಳಿದ್ದಾರೆ.