Viral Video: ಮಂಗನಿಗೆ ಶರೇ ಕುಡಿಸಿದ್ರೆ ಏನಾಗಬಹುದು? ಎಣ್ಣೆ ಹೊಡಿದ ಕೋತಿ ಮಾಡಿದ ಕಿತಾಪತಿ ನೀವೇ ನೋಡಿ
Monkey Viral Video : ಈ ವೈರಲ್ ವಿಡಿಯೋದಲ್ಲಿ ಕೋತಿಗಳ ಕೈಗೆ ಮದ್ಯದ ಬಾಟಲಿ ಒಂದು ಸಿಗುತ್ತದೆ ಮತ್ತು ಅವು ಮರದ ಮೇಲೆ ಕುಳಿತು ಕುಡಿಯುತ್ತವೆ. ಸ್ವಲ್ಪ ಸಮಯದ ನಂತರ, ಅವರು ಏನು ಮಾಡಬಹುದು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ.
Monkey Viral Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಕೆಲವು ದೃಶ್ಯಗಳು ಊಹಿಸಲು ಸಹ ಕಷ್ಟ ಎಂಬಂತಿರುತ್ತವೆ. ಕೆಲವು ಕೋತಿಗಳಿಗೆ ಸಂಬಂಧಿಸಿದ ವಿಡಿಯೋಗಳಂತೂ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಮಂಗನಿಗೆ ಶರೇ ಕುಡಿಸಿದಂತೆ ಎಂಬ ಗಾದೆ ಮಾತನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಹೇಗೇಗೋ ವಿಚಿತ್ರವಾಗಿ ವರ್ತಿಸುವವರಿಗೆ ಸಾಮಾನ್ಯವಾಗಿ ಈ ಗಾದೆಯನ್ನು ಬಳಸಲಾಗುತ್ತದೆ. ಕೋತಿ ಮದ್ಯ ಸೇವಿಸುವ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: Viral Video: ಮರಿಗಾಗಿ 10 ಸೆಕೆಂಡ್‌ಗಳಲ್ಲಿ ನಾಗರಹಾವನ್ನೇ ಸೋಲಿಸಿದ ಇಲಿ
ಈ ವೈರಲ್ ವಿಡಿಯೋದಲ್ಲಿ ಕೋತಿಗಳ ಕೈಗೆ ಮದ್ಯದ ಬಾಟಲಿ ಒಂದು ಸಿಗುತ್ತದೆ ಮತ್ತು ಅವು ಮರದ ಮೇಲೆ ಕುಳಿತು ಕುಡಿಯುತ್ತವೆ. ಸ್ವಲ್ಪ ಸಮಯದ ನಂತರ, ಅವರು ಏನು ಮಾಡಬಹುದು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಮಂಗಗಳು ಮದ್ಯ ಸೇವಿಸಿ ಮಾಡುವ ಕಿತಾಪತಿಯನ್ನು ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ಆದರೆ, ಈ ವಿಡಿಯೋ ನೋಡಿದರೆ ಇದನ್ನು ಉದ್ದೇಶಪೂರ್ವಕವಾಗಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ವೈನ್ ಕುಡಿದ ಕೋತಿಗಳು :
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಂಗಗಳು ಮರಗಳನ್ನು ಹತ್ತಿ ಹೇಗೆ ಮದ್ಯ ಸೇವಿಸುತ್ತವೆ ಎಂಬುದನ್ನು ನೋಡಬಹುದಾಗಿದೆ. ಸ್ವಲ್ಪ ಸಮಯದ ನಂತರ, ನಶೆಯಲ್ಲಿ ಅವು ತೇಲಾಡಲು ಆರಂಭಿಸುತ್ತವೆ. ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಧ್ವಂಸಗೊಳಿಸುತ್ತವೆ ಎಂದು ತೋರಿಸಲಾಗಿದೆ. ಈ ವಿಡಿಯೋ ನೋಡಿದ್ರೆ, ಹಲವು ವಿಡಿಯೋಗಳನ್ನು ಮಿಕ್ಸ್ ಮಾಡಿ ಎಡಿಟ್ ಮಾಡಿ ಮನರಂಜನೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಈ ವಿಡಿಯೋದಲ್ಲಿ ಕೋತಿಗಳು ಗಲಾಟೆ ಸೃಷ್ಟಿಸುತ್ತಿರುವ ರೀತಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ. bhutni_ke_memes ಹೆಸರಿನ Instagram ಖಾತೆಯಲ್ಲಿ ಈ ಫನ್ನಿ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ನೆಟಿಜನ್‌ಗಳಿಂದ ಸಾಕಷ್ಟು ಪ್ರತಿಕ್ರಿಯೆಗಳೂ ಬರುತ್ತಿವೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದರೂ, ಈ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಖಚಿತಪಡಿಸುವುದಿಲ್ಲ.
ಇದನ್ನೂ ಓದಿ: Viral Video : ಸಣ್ಣ ತಮಾಷೆಯಿಂದ ನೆತ್ತಿಗೇರಿತು ವರನ ಕೋಪ .! ಮದುವೆ ಮನೆಯಲ್ಲಿಯೇ ರಂಪಾಟ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.