)
Picture Differences: ಈ ಮೇಲಿನ ಚಿತ್ರಗಳನ್ನು ನೋಡಿ... ಇದೊಂದು ಸುಲಭವಾದ ಒಗಟು ಎಂದು ಮೊದಲಿಗೆ ನೀವು ಹೇಳಬಹುದು. ಆದರೆ ಇದು ನಿಜಕ್ಕೂ ತುಂಬಾ ಜಟಿಲವಾಗಿದೆ. ಇದು ನಿಮ್ಮ ಕಣ್ಣಿನ ದೃಷ್ಟಿ ಮತ್ತು ಏಕಾಗ್ರತೆಗೆ ಕೆಲಸ ಕೊಡುತ್ತದೆ. ಈ ಚಿತ್ರಗಳಲ್ಲಿ ಇರುವ ವ್ಯತಾಸಗಳನ್ನು ಕೆಲವರು ಬೇಗನೇ ಗುರುತಿಸುತ್ತಾರೆ. ಆದರೆ ಇನ್ನೂ ಕೆಲವರು ಈ ವ್ಯತ್ಯಾಸಗಳನ್ನ ಗುರುತಿಸಲು ಸಮಯ ತೆಗೆದುಕೊಳ್ಳುತ್ತಾರೆ. ಈ ಚಿತ್ರಗಳ ನಡುವೆ 3 ಸಣ್ಣ ವ್ಯತ್ಯಾಸಗಳಿವೆ. ನೀವು ಅವುಗಳನ್ನು ಕಂಡು ಹಿಡಿಯಲು ಎಷ್ಟು ಸಮಯ ತೆಗೆದುಕೊಳ್ಳುತ್ತಿರಾ? ಈ ಚಿತ್ರದಲ್ಲಿರುವ ವ್ಯತ್ಯಾಸಗಳನ್ನ ಬೇಗನೆ ಕಂಡುಹಿಡಿದರೆ ನಿಮ್ಮ ಕಣ್ಣು ತುಂಬಾ ಶಾರ್ಪ್ ಇದೆ ಎಂದರ್ಥ...
ಹೌದು, ಮೊದಲ ಪ್ರಯತ್ನದಲ್ಲೇ ನೀವು ಈ ಚಿತ್ರದಲ್ಲಿರುವ ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾದರೆ, ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ. ಈ ರೀತಿಯ ವ್ಯತ್ಯಾಸ ಕಂಡುಹಿಡಿಯುವ ಒಗಟುಗಳು ಕೇವಲ ಮೋಜಿನ ಸಂಗತಿಯಲ್ಲದೆ ಮಾನಸಿಕವಾಗಿ ನಿಮ್ಮ ಮೆದುಳನ್ನು ಚುರುಕಾಗಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆದ್ದರಿಂದ ಈ ರೀತಿಯ ವ್ಯತ್ಯಾಸ ಕಂಡುಹಿಡಿಯುವ ಒಗಟಿನ ಆಟಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿರುತ್ತವೆ. ಈ ಮನರಂಜನೆಯ ಆಟವನ್ನು 'ಸ್ಪಾಟ್ ದಿ ಡಿಫರೆನ್ಸ್' ಒಗಟು ಎಂದು ಕರೆಯುತ್ತಾರೆ. ಈ ಕೋಳಿಗಳ ಚಿತ್ರದಲ್ಲಿ ಕೂದಲೆಳೆಯ ಅಂತರದಲ್ಲಿ ವ್ಯತ್ಯಾಸಗಳಿವೆ.
ಬಹುತೇಕ ಒಂದೇ ರೀತಿ ಕಾಣುವ ಈ ಚಿತ್ರಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದೇ ನಿಮಗಿರುವ ನಿಜವಾದ ಸವಾಲು. ಚಿತ್ರವನ್ನು ಮೊದಲಿಗೆ ಗಮನಿಸಿದಾಗ ಒಂದೇ ರೀತಿ ಕಾಣುವ ಎರಡು ಕೋಳಿಗಳು, ಹಿಂದೆ ಹಸಿರು ಪೊದೆಗಳು, ಸೂರ್ಯ ಮತ್ತು ಕಲ್ಲುಗಳು ಇರುವುದನ್ನು ಗಮನಿಸಬಹುದು. ಆದರೆ ಇವೆರೆಡರ ನಡುವಿನ ವ್ಯತ್ಯಾಸ ಕಂಡುಹಿಡಿಯಲು ನೀವು ಸೂಕ್ಷವಾಗಿ ಈ ಚಿತ್ರಗಳನ್ನು ಗಮನಿಸಬೇಕು. ಆವಾಗ ಮಾತ್ರ ನೀವು ಮಿಸ್ ಆದ ಅಂಶಗಳನ್ನು ಕಂಡುಹಿಡಿಯಲು ಸಾಧ್ಯ.
ನೀವೂ ಈ ಕೋಳಿಗಳ ಈ ಚಿತ್ರಗಳನ್ನ ಸೂಕ್ಷ್ಮವಾಗಿ ಗಮನಿಸಿ. ಚಿತ್ರದಲ್ಲಿರುವ ವ್ಯತ್ಯಾಸಗಳನ್ನ ಕಂಡುಹಿಡಿಯಲು ಪಯತ್ನಿಸಿ ನೋಡಿ. ಕೇವಲ ಹತ್ತು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ವ್ಯತ್ಯಾಸಗಳನ್ನ ನೀವು ಗುರುತಿಸಿದರೆ ನೀವು ವಿನ್ ಆದಂತೆ. ನಿಮ್ಮ ಕಣ್ಣು ತುಂಬಾ ಶಾರ್ಪ್ ಇದೆ ಎಂದರ್ಥ. ಟ್ರೈ ಮಾಡಿ ನೋಡಿ.. ನಿಮ್ಮ ಕಣ್ಣು ಎಷ್ಟು ಶಾರ್ಪ್ ಇವೆ ಅನ್ನೋದನ್ನ ಕಂಡುಹಿಡಿಯಲು ನಿಮ್ಮ ಮೆದುಳಿಗೆ ಕೊಂಚ ಕೆಲಸ ನೀಡಿ...