)
Three-headed Cobra Video: ಇದು ಸೋಷಿಯಲ್ ಮೀಡಿಯಾದ ಜಮಾನ. ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರೂ ಇಂದು ೨೪ ಗಂಟೆಯೂ ಮೊಬೈಲ್ನಲ್ಲಿಯೇ ಮುಳುಗಿರುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಬಹುತೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೋಗಳನ್ನ ನೋಡಲು ಇಷ್ಟಪಡುತ್ತಾರೆ. ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಅದರಲ್ಲೂ ಹಾವುಗಳ ವಿಡಿಯೋಗಳನ್ನು ಜನರು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಾರೆ. ಪ್ರತಿದಿನವೂ ವಿವಿಧ ರೀತಿಯ ಹಾವುಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪಾಯಕಾರಿ ಹಾವುಗಳ ವಿಡಿಯೋಗಳನ್ನು ಅನೇಕ ಜನರು ಆಸಕ್ತಿಯಿಂದ ವೀಕ್ಷಿಸುತ್ತಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಅನೇಕ ಹಾವು ಹಿಡಿಯುವವರು ಮತ್ತು ಸಾಮಾನ್ಯ ಜನರು ಹಾವುಗಳ ವಿಡಿಯೋಗಳನ್ನು ಹೆಚ್ಚಾಗಿ ಪೋಸ್ಟ್ ಮಾಡುತ್ತಿದ್ದಾರೆ. ಅಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಾವಿನ ಇತ್ತೀಚಿನ ವಿಡಿಯೋ ಇದೀಗ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಸಾಮಾನ್ಯವಾಗಿ ನಾವು ಒಂದು ತಲೆ ಮತ್ತು ಎರಡು ತಲೆಗಳನ್ನು ಹೊಂದಿರುವ ಹಾವುಗಳನ್ನು ನೋಡಿರುತ್ತೇವೆ. ಆದರೆ ಈಗ ವೈರಲ್ ಆಗುತ್ತಿರುವ ವಿಡಿಯೋ ಇವುಗಳಿಗಿಂತ ಭಿನ್ನವಾಗಿವೆ.
ನೀವು ಎಂದಾದರೂ ಮೂರು ತಲೆಯ ನಾಗರಹಾವನ್ನು ನೋಡಿದ್ದೀರಾ? ನೋಡಿಲ್ಲದಿದ್ದರೆ ಈ ವೀಡಿಯೊದಲ್ಲಿ ನೀವು ಅದನ್ನು ಖಂಡಿತ ನೋಡಬಹುದು. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಾವಿಗೆ ಮೂರು ತಲೆಗಳಿವೆ. ವೈರಲ್ ಆಗಿರೋ ಈ ವಿಡಿಯೋದಲ್ಲಿ, ನೀವು ರಸ್ತೆ ಬದಿ ಮೂರು ತಲೆಯ ಹಾವು ಇರುವುದನ್ನು ಕಾಣಬಹುದು. ರಸ್ತೆಯಲ್ಲಿ ಹಾದುಹೋಗುವ ಪ್ರತಿಯೊಬ್ಬರೂ ಈ ಹಾವನ್ನು ಕುತೂಹಲದಿಂದಲೇ ವೀಕ್ಷಿಸುವುದನ್ನೂ ಕಾಣಬಹುದು. ಇದಲ್ಲದೆ ಕೆಲವರು ಈ ಹಾವನ್ನು ದೂರದಿಂದ ನೋಡಿ ಹೊರಟು ಹೋಗುವುದನ್ನು ನೀವು ನೋಡಬಹುದು.
ಕೆಲವರು ಇಂತಹ ಹಾವುಗಳು ಬಹಳ ಅಪರೂಪ ಎಂದು ಹೇಳುತ್ತಾರೆ. ಆದರೆ ಈ ವಿಡಿಯೋ ನೋಡಿದ ಅನೇಕರು ಇದು ನಿಜವಾದ ಮೂರು ತಲೆಯ ಹಾವಲ್ಲ, AIದಿಂದ ರೂಪಿಸಿರುವ ಹಾವು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹಾವುಗಳು ಕೆಲವು ಬಾರಿ ಎರಡು ತಲೆಗಳೊಂದಿಗೆ ಜನಿಸಿರುತ್ತವೆ. ಇದಲ್ಲದೆ ಕೆಲವು ಸಂಶೋಧಕರ ಪ್ರಕಾರ, ಕೆಲವು ಆನುವಂಶಿಕ ದೋಷಗಳಿಂದ ಮೂರರಿಂದ ನಾಲ್ಕು ತಲೆಗಳೊಂದಿಗೆ ಹಾವುಗಳು ಜನಿಸುವ ಸಾಧ್ಯತೆಗಳಿವೆ ಅಂತಾ ಅಭಿಪ್ರಾಯಪಡುತ್ತಾರೆ. ಆದರೆ ಈ ವಿಡಿಯೋದಲ್ಲಿ ಒಂದೇ ಹಾವನ್ನ ಮೂರು ತಲೆಯ ಹಾವಿನಂತೆ ರೂಪಿಸಲಾಗಿದೆ ಎಂದು ಅನೇಕರು ತಿಳಿಸಿದ್ದಾರೆ. ಈ ವೈರಲ್ ವಿಡಿಯೋವನ್ನ ಆಶಿಶ್ ರಾಜ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ