Viral Video: ಹೀರೋ ರೀತಿ ಬಂದು ʼಈಲ್‌ʼ ಮೀನು ಮುಟ್ಟಿದ ಮುತ್ಯಾಗೆ ‌ಕರೆಂಟ್‌ ಶಾಕ್!! ವಿಡಿಯೋ ವೈರಲ್

‌ಎಲೆಕ್ಟ್ರಿಕ್ ಈಲ್ ಎಂದೂ ಕರೆಯಲ್ಪಡುವ ಈಲ್ ಮೀನು ತನ್ನ ದೇಹದಲ್ಲಿ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಮೀನು ತುಂಬಾ ಅಪಾಯಕಾರಿ.

Written by - Puttaraj K Alur | Last Updated : Apr 13, 2025, 03:39 PM IST
  • ಈಲ್ ಮೀನು ಮುಟ್ಟಿದ ವೃದ್ಧನಿಗೆ ಕರೆಂಟ್‌ ಶಾಕ್‌
  • ಈಲ್ ಶಾಕ್‌ಗೆ ಕೆಲಕಾಲ ಪ್ರಜ್ಞೆ ತಪ್ಪಿ ನೀರಿನಲ್ಲೇ ಬಿದ್ದ ವೃದ್ಧ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್‌
Viral Video: ಹೀರೋ ರೀತಿ ಬಂದು ʼಈಲ್‌ʼ ಮೀನು ಮುಟ್ಟಿದ ಮುತ್ಯಾಗೆ ‌ಕರೆಂಟ್‌ ಶಾಕ್!! ವಿಡಿಯೋ ವೈರಲ್

Viral Video: ನೀರಿನಲ್ಲಿ ಹಲವು ಬಗೆಯ ಮೀನುಗಳಿರುತ್ತವೆ. ಕೆಲವು ನೋಡಲು ಮುದ್ದಾಗಿದ್ದರೆ, ಇನ್ನೂ ಕೆಲವು ತುಂಬಾ ಡೇಂಜರ್‌ ಆಗಿರುತ್ತವೆ. ಈ ಪೈಕಿ ಈಲ್ ಮೀನು ಕೂಡ ಅಪಾಯಕಾರಿ ಮೀನುಗಳಲ್ಲಿ ಒಂದಾಗಿದೆ. ಇದನ್ನು ಕರೆಂಟ್ ಮೀನು ಎಂತಲೂ ಕರೆಯಲಾಗುತ್ತದೆ. ನೀವು ಈ ಮೀನು ಮುಟ್ಟಿದ ತಕ್ಷಣವೇ ನಿಮ್ಮ ಇಡೀ ದೇಹದಲ್ಲಿ ವಿದ್ಯುತ್ ಪ್ರವಾಹವಾಗುತ್ತದೆ. ಇತ್ತೀಚೆಗೆ ಈ ಮೀನಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟಿಜನ್ಸ್‌ ಬಾಯ್‌ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈಲ್ ಮೀನು ಮುಟ್ಟಿದ ವೃದ್ಧನೊಬ್ಬನಿಗೆ ಅದು ಕರೆಂಟ್‌ ಶಾಕ್‌ ಕೊಟ್ಟಿದೆ. ಪರಿಣಾಮ ಆತ ನೀರಿನಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.    

Add Zee News as a Preferred Source

ಕರೆಂಟ್‌ ಶಾಕ್‌ ನೀಡಿದ ಈಲ್!!

ವೈರಲ್ ಆಗಿರುವ ವಿಡಿಯೋದಲ್ಲಿ ಬಲೆಯಲ್ಲಿ ಸಿಕ್ಕಿಬಿದ್ದ ಈಲ್ ಮೀನಿನೊಂದಿಗೆ ಒಬ್ಬ ವ್ಯಕ್ತಿ ನಿಂತಿರುವುದನ್ನು ನೀವು ಕಾಣಬಹುದು. ಆತನಿಗೆ ಆ ಮೀನು ಮುಟ್ಟುವ ಧೈರ್ಯ ಬಂದಿರಲಿಲ್ಲ. ಹೀಗಾಗಿ ಆತ ನದಿಯ ದಡದಲ್ಲಿಯೇ ಬಲೆಗೆ ಸಿಕ್ಕಿಬಿದ್ದ ಈಲ್‌ ಅನ್ನ ಹಿಡಿದು ನಿಂತುಕೊಂಡಿದ್ದ. ಈ ವೇಳೆ ವೃದ್ಧನೊಬ್ಬ ಆತನಿಗೆ ಬೈಯುತ್ತಾ, ʼಒಂದು ಮೀನು ಹೀಡಿಯಲು ನೀನು ಎಷ್ಟು ಹೆದರಿದ್ದಿಯಾ? ನೋಡು ನಾನು ಈಗ ಅದನ್ನ ಹೇಗೆ ಹಿಡಿಯುತ್ತೇನೆʼ ಅಂತಾ ಮುಂದೆ ಬಂದಿದ್ದಾನೆ. ಹೀರೋ ರೀತಿ ಬಂದ ಆತ ಈಲ್‌ ಮೀನು ಹಿಡಿದಿದ್ದಾನೆ. ತಕ್ಷಣವೇ ಆತನಿಗೆ ಕರೆಟ್‌ ಶಾಕ್‌ ಹೊಡೆದಿದೆ. ಪರಿಣಾಮ ಕರೆಂಟ್‌ ಹೊಡೆದ ಕಾಗೆಯಂತಾದ ವೃದ್ಧ ಪ್ರಜ್ಞೆ ತಪ್ಪಿ ನೀರಿನಲ್ಲಿ ಬಿದ್ದಿದ್ದಾನೆ. ಕೆಲ ಸಮಯ ಮೂರ್ಛೆ ಹೋದ ಆ ವೃದ್ಧನನ್ನ ಕೂಡಲೇ ಅಲ್ಲಿದ್ದ ಯುವಕ ಎಬ್ಬಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ಇದನ್ನೂ ಓದಿ: ನಿರ್ದೇಶಕರಲ್ಲ.. ಸ್ಟಾರ್‌ ನಟನೊಂದಿಗೆ ಸಮಂತಾ ಡೇಟಿಂಗ್! ಮತ್ತೊಂದು ದೊಡ್ಡ ಕುಟುಂಬದ ಸೊಸೆಯಾಗಲಿದ್ದಾರಾ ಸ್ಯಾಮ್..‌

ವಿದ್ಯುತ್ ಉತ್ಪಾದಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿರುವ ಈಲ್!

‌ಎಲೆಕ್ಟ್ರಿಕ್ ಈಲ್ ಎಂದೂ ಕರೆಯಲ್ಪಡುವ ಈಲ್ ಮೀನು ತನ್ನ ದೇಹದಲ್ಲಿ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಮೀನು ತುಂಬಾ ಅಪಾಯಕಾರಿ. ಈ ಮೀನು ತನ್ನ ಸುತ್ತಮುತ್ತ ಸಣ್ಣದೊಂದು ಅಪಾಯವನ್ನು ಗ್ರಹಿಸಿದರೂ ಸಹ, ಅದು 600 ರಿಂದ 860 ವೋಲ್ಟ್‌ಗಳಷ್ಟು ವಿದ್ಯುತ್‌ ಪ್ರವಾಹವನ್ನು ನೀರಿಗೆ ಬಿಡುಗಡೆ ಮಾಡುತ್ತದೆ. ಯಾವುದೇ ಒಬ್ಬ ವ್ಯಕ್ತಿಯನ್ನು ಪ್ರಜ್ಞಾಹೀನನನ್ನಾಗಿ ಮಾಡಲು ಇದು ಸಾಕು. ವಿಜ್ಞಾನಿಗಳ ಪ್ರಕಾರ, ಈಲ್ ಮೀನು ತನ್ನ ದೇಹದಲ್ಲಿರುವ ವಿಶೇಷ ಕೋಶಗಳ ಮೂಲಕ ದೇಹದಿಂದ ವಿದ್ಯುತ್ ಉತ್ಪಾದಿಸುತ್ತದೆ. ಈ ಜೀವಕೋಶಗಳನ್ನು ಎಲೆಕ್ಟ್ರೋಸೈಟ್ಗಳು ಎಂದು ಕರೆಯಲಾಗುತ್ತದೆ. ಈ ವಿದ್ಯುತ್‌ಅನ್ನ ಅದು ಬೇಟೆ ಹಿಡಿಯಲು ಅಥವಾ ತನ್ನ ಶತ್ರುಗಳಿಂದ ರಕ್ಷಿಸಿಕೊಳ್ಳಲು ಬಳಸುತ್ತದಂತೆ. 

ಈ ವೈರಲ್ ವಿಡಿಯೋದಲ್ಲಿಯೂ ಅದೇ ಆಗುವುದನ್ನು ನೀವು ನೋಡಬಹುದು. ಆ ವ್ಯಕ್ತಿ ಮೀನನ್ನು ಮುಟ್ಟಲು ಪ್ರಯತ್ನಿಸಿದಾಗ, ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ತಕ್ಷಣವೇ ಕರೆಂಟ್‌ ಅನ್ನ ಬಿಡುಗಡೆ ಮಾಡಿತು. ಈ ವಿಡಿಯೋವನ್ನು @science_questions_in_hindi ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬಹುತೇಕರು ಈಲ್‌ ಕರೆಂಟ್‌ ಶಾಕ್‌ಗೆ ಆಘಾತ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಚಿತ್ರ ಸದ್ಯದಲ್ಲೇ ತೆರೆಗೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News