)
Waterfall boy viral video : ಮಳೆಗಾಲ ಆರಂಭವಾಗಿದ್ದು, ಹೊಳೆ- ತೊರೆಗಳು ಮತ್ತು ನದಿಗಳು ತುಂಬಿ ಹರಿಯುತ್ತಿವೆ.. ಅಲ್ಲದೆ, ಜಲಪಾತಗಳೂ ಸಹ ಮೈತುಂಬಿ ಭೋರ್ಗರೆಯುತ್ತಿವೆ. ಜಲಪಾತಗಳಿಂದ ಬರುವ ನೀರಿನ ಸಿಂಚನ ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಲು ಸಾಕಷ್ಟು ಜನರು ಜಲಪಾತಗಳಿಗೆ ಭೇಟಿ ನೀಡುತ್ತಾರೆ.
ಪ್ರಸ್ತುತ ಮಳೆಗಾಲವಾಗಿದ್ದರಿಂದ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ವಿಶೇಷವಾಗಿ ಸಿಟಿ ಜನರು ತಮ್ಮ ಒತ್ತಡವನ್ನು ತೊಡೆದುಹಾಕಲು ಈ ಸ್ಥಳಗಳಿಗೆ ಹೆಚ್ಚು ಭೇಟಿ ನೀಡುತ್ತಾರೆ. ಅಲ್ಲದೆ, ಕೆಲವು ಪ್ರವಾಸಿಗರು ಮದ್ಯ ಸೇವನೆ ಮಾಡಿ ಜಲಪಾತಗಳಲ್ಲಿ ದುರ್ವತನೆ ತೋರುತ್ತಿದ್ದಾರೆ. ಈ ಪೈಕಿ ಇಬ್ಬರು ಯುವಕರ ವಿಡಿಯೋ ಒಂದು ಸಂಚಲನ ಸೃಷ್ಟಿಸುತ್ತಿದೆ.
ಇದನ್ನೂ ಓದಿ:ಹಿಮದಲ್ಲಿ ಮರೆಯಾದ 'ಹಿಮವದ್ ಗೋಪಾಲಸ್ವಾಮಿ'
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಇಬ್ಬರು ಯುವಕರು, ತುಂಬಿ ಹರಿಯುವ ಜಲಪಾತದ ನೀರಿನಲ್ಲಿ ಪರಸ್ಪರ ಅಪ್ಪಿಕೊಂಡು ಮಲಗಿರುವುದುನ್ನು ಕಾಣಬಹುದು. ಈ ವಿಡಿಯೋವನ್ನು 'ನರ್ಮದಪುರಂ.ನಾಗ್ರಿ' ಎಂಬ ಇನ್ಸ್ಟಾಗ್ರಾಮ್ ಖಾತೆ ಹಂಚಿಕೊಳ್ಳಲಾಗಿದೆ. ಯುವಕರ ಅಸಭ್ಯ ವರ್ತನೆಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಜಲಪಾತಗಳಲ್ಲಿ ಮಿಂಚು ಆನಂದಿಸುತ್ತಿದ್ದಾರೆ. ಆದರೆ, ಈಗ ವೈರಲ್ ಆಗುತ್ತಿರುವ ವೀಡಿಯೊಗೆ ಅನೇಕ ಜನರು ಕಾಮೆಂಟ್ ಮಾಡುತ್ತಿದ್ದು, ಈ ರೀತಿಯ ವರ್ತನೆ ಸರಿಯಲ್ಲ, ಇವರ ಮೇಲೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ.