ಇದೇ ವಿಚಾರಕ್ಕೆ ಗುರು.. ಗಂಡಸರು ಬಹಳ ದಿನ ಬದಕಲ್ಲ..! ವಿಡಿಯೋ ನೋಡಿ ನಿಮ್ಗೆ ಗೊತ್ತಾಗುತ್ತೆ..

ಆ ಇಬ್ಬರು ಯುವಕರು ಸ್ಕೂಟರ್‌ ಮೇಲೆ ಸರ್ಕಸ್‌ ಮಾಡುತ್ತಾ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Written by - Puttaraj K Alur | Last Updated : May 1, 2025, 05:53 PM IST
  • ನಡುರಸ್ತೆಯಲ್ಲಿಯೇ ಸ್ಕೂಟರ್‌ ಮೇಲೆ ಇಬ್ಬರು ಯುವಕರ ಸಾಹಸ ಪ್ರದರ್ಶನ
  • ಸ್ಕೂಟರ್‌ ಮೇಲೆ ಸ್ಟಂಟ್‌ ಮಾಡುತ್ತಾ ಸರ್ಕಸ್‌ ಮಾಡಿರುವ ಯುವಕರು
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ ವಿಡಿಯೋ
ಇದೇ ವಿಚಾರಕ್ಕೆ ಗುರು.. ಗಂಡಸರು ಬಹಳ ದಿನ ಬದಕಲ್ಲ..! ವಿಡಿಯೋ ನೋಡಿ ನಿಮ್ಗೆ ಗೊತ್ತಾಗುತ್ತೆ..

Viral Video: ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿದಿನವೂ ನೂರಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಕೆಲವು ಜನರ ಗಮನ ಸೆಳೆದರೆ, ಇನ್ನೂ ಕೆಲವು ವಿಡಿಯೋಗಳನ್ನ ನೋಡಿದ್ರೆ ಹೊಟ್ಟೆ ಹುಣ್ಣಾಗುವಂತೆ ನಗಬೇಕಾಗುತ್ತದೆ. ದೇಶಿ ಜುಗಾಡ್‌ನ ವಿಡಿಯೋಗಳು ಸಹ ಗಮನ ಸೆಳೆಯುತ್ತವೆ. ಏನಾದರೂ ಕ್ರಿಯೇಟಿವ್‌ ಆಗಿ ಯೋಚಿಸಿ ಮಾಡುವ ಇಂತಹ ವಿಡಿಯೋಗಳು ಜನರಲ್ಲಿ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂತಹದ್ದೇ ಮತ್ತೊಂದು ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Add Zee News as a Preferred Source

ಈ ಜಗತ್ತಿನಲ್ಲಿ ವಿಚಿತ್ರ ಕೆಲಸಗಳನ್ನು ಮಾಡುವ ಜನರಿಗೇನೂ ಕೊರತೆಯಿಲ್ಲ. ಕೆಲವರು ಮೆಟ್ರೋ ಒಳಗೆ ವಿಚಿತ್ರವಾದ ಕೆಲಸಗಳನ್ನು ಮಾಡಿದರೆ, ಇನ್ನು ಕೆಲವರು ರಸ್ತೆಯಲ್ಲಿ ಏನಾದರೂ ಮಾಡಿ ನೋಡುಗರನ್ನು ದಿಗ್ಭ್ರಮೆಗೊಳಿಸುತ್ತಾರೆ. ಈ ವಿಡಿಯೋ ನೋಡಿದ್ರೆ ನೀವು ಖಂಡಿತ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಾ... ಈ ಯುವಕರ ಕ್ರಿಯೇಟಿವಿಟಿಗೆ ನೀವು ಸಲಾಂ ಹೇಳುತ್ತೀರಾ... ಸದ್ಯ ವೈರಲ್‌ ಆಗಿರೋ ಈ ವಿಡಿಯೋ ನೋಡಿದ ಬಹುತೇಕರು, ʼಗಂಡಸರು ಯಾಕೆ ಬಹಳ ದಿನ ಬದುಕಲ್ಲ, ಅಂದ್ರೆ ಇದೇ ವಿಚಾರಕ್ಕೆ ನೋಡಿʼ ಅಂತಾ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: Explainer: ಜನಗಣತಿ ಇತಿಹಾಸ: ಭಾರತದಲ್ಲಿ ಇದುವರೆಗೆ ನಡೆದು ಬಂದ ಹಾದಿ

ವೈರಲ್‌ ವಿಡಿಯೋದಲ್ಲಿ ಏನಿದೆ? 

ಇದೀಗ ವೈರಲ್‌ ಆಗಿರೋ ವಿಡಿಯೋದಲ್ಲಿ ಯುವಕನೊಬ್ಬ ಸ್ಕೂಟರ್‌ನಲ್ಲಿ ತಮ್ಮ ಪ್ರಾಣಿಗಳಿಗೆ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದಾನೆ. ಮುಂದೆ ಕುಳಿತುಕೊಂಡಿರುವ ಆತ ತನ್ನ ಹಿಂದೆ ಎರಡು ಹುಲ್ಲಿನ ಚೀಲಗಳನ್ನು ಇಟ್ಟುಕೊಂಡು ಸ್ಕೂಟರ್‌ ರೈಡ್‌ ಮಾಡುತ್ತಿರುತ್ತಾನೆ. ಹಿಂದೆ ಮತ್ತೊಬ್ಬರು ಕುಳಿತುಕೊಳ್ಳಲು ಸ್ವಲ್ಪವೂ ಜಾಗವಿಲ್ಲ. ಆದರೆ ಯುವಕನೊಬ್ಬ ಆ ಹುಲ್ಲಿನ ಚೀಲಗಳ ಮೇಲೆ ಮಲಗಿ ಸ್ಕೂಟರ್‌ ರೈಡ್‌ ಮಾಡುತ್ತಿರುವವನ ಭುಜವನ್ನು ಹಿಡಿದುಕೊಂಡು ಬ್ಯಾಲೆನ್ಸ್‌ ಮಾಡುತ್ತಾ ಹೋಗಿದ್ದಾನೆ. ಈ ರೀತಿ ಸ್ಕೂಟರ್‌ ಮೇಲೆ ಪ್ರಯಾಣಿಸುತ್ತಿರುವಾಗ ಕೊಂಚ ಎಚ್ಚರ ತಪ್ಪಿದರೂ ಇಬ್ಬರು ನೆಲಕ್ಕೆ ಬೀಳತ್ತಾರೆ. 

ಆದರೆ ಆ ಇಬ್ಬರು ಯುವಕರು ಸ್ಕೂಟರ್‌ ಮೇಲೆ ಸರ್ಕಸ್‌ ಮಾಡುತ್ತಾ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ. @rareindianclips ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ‌ 13 ಸೆಕೆಂಡುಗಳ ವಿಡಿಯೋವನ್ನ 11 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ Chill guy? ಎಂದು ಕ್ಯಾಪ್ಶನ್‌ ನೀಡಲಾಗಿದೆ. ವಿಡಿಯೋ ನೋಡಿದ ಅನೇಕರು ಆಶ್ಚರ್ಯವ್ಯಕ್ತಪಡಿಸಿದ್ದು, ಈ ರೀತಿಯ ಹುಚ್ಚು ಸಾಹಸ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸೂತಕವಾಯ್ತು ಸಡಗರದಲ್ಲಿದ್ದ ಅಂಬಾನಿ ಮನೆ..! 24 ಗಂಟೆ ಜೊತೆಗಿರುತ್ತಿದ್ದ ಪ್ರೀತಿಯ ಸದ್ಯಸನನ್ನು ಕಳೆದುಕೊಂಡು ದುಃಖದಲ್ಲಿ ಮುಖೇಶ್‌ ಅಂಬಾನಿ ಕುಟುಂಬ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News