2 ಡಿವೋರ್ಸ್‌ ಆದ್ರೂ ಸುಮ್ಮನಿರದೆ.. 18ರ ಹರೆಯದ ಬಾಲಕನನ್ನೇ ಪ್ರೀತಿಸಿ ಮದುವೆಯಾದ 30 ವರ್ಷದ ಅಂಟಿ..! 

30 years marries 18 : 30 ವರ್ಷದ ಮಹಿಳೆ ಈಗಾಗಲೇ ಎರಡು ವಿವಾಹಗಳನ್ನು ಮಾಡಿಕೊಂಡು, ವಿಚ್ಛೇದನ ಪಡೆದಿದ್ದಾಳೆ.. ಇಷ್ಟಕ್ಕೆ ಸುಮ್ಮನಾಗಿ ತನ್ನ ಜೀವನವಾಯ್ತು.. ತಾನಾಯ್ತು.. ಅಂತ ಇರದೆ, 12ನೇ ತರಗತಿಯಲ್ಲಿ ಓದುತ್ತಿರುವ 18 ವರ್ಷದ ಶಾಲಾ ಬಾಲಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Apr 11, 2025, 05:39 PM IST
    • 30 ವರ್ಷದ ಮಹಿಳೆ ಈಗಾಗಲೇ ಎರಡು ವಿವಾಹಗಳನ್ನು ಮಾಡಿಕೊಂಡು, ವಿಚ್ಛೇದನ ಪಡೆದಿದ್ದಾಳೆ..
    • ಈ ಬಾರಿ 12ನೇ ತರಗತಿಯ ಶಾಲಾ ವಿದ್ಯಾರ್ಥಿನಿಯ ಕೈಹಿಡಿಯುವ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ..
    • ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವಾನಿ ಅಂತ ಹೆಸರನ್ನೂ ಸಹ ಬದಲಾಹಿಸಿಕೊಂಡಿದ್ದಾಳೆ.
2 ಡಿವೋರ್ಸ್‌ ಆದ್ರೂ ಸುಮ್ಮನಿರದೆ.. 18ರ ಹರೆಯದ ಬಾಲಕನನ್ನೇ ಪ್ರೀತಿಸಿ ಮದುವೆಯಾದ 30 ವರ್ಷದ ಅಂಟಿ..! 

UP Viral Marriage : ಉತ್ತರ ಪ್ರದೇಶದ ಮಹಿಳೆಯೊಬ್ಬರು ಎರಡು ಬಾರಿ ಮದುವೆಯಾಗಿ ಡಿವೋರ್ಸ್‌ ಪಡೆದು, ಇದೀಗ ಪ್ರೀತಿಸಿ ಮೂರನೇ ಬಾರಿಗೆ ವಿವಾಹವಾಗಿದ್ದಾಳೆ.. ಈ ಬಾರಿ 12ನೇ ತರಗತಿಯ ಶಾಲಾ ವಿದ್ಯಾರ್ಥಿನಿಯ ಕೈಹಿಡಿಯುವ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.. ಇದೀಗ ಈ ವಿಚಾರ ವಿವಾದಾತ್ಮಕ ತಿರುವುದು ಪಡೆದುಕೊಂಡಿದೆ..

Add Zee News as a Preferred Source

ಹೌದು.. ಶಬಾನಾ ಎಂಬ 30 ವರ್ಷದ ಮಹಿಳೆ ಉತ್ತರ ಪ್ರದೇಶದ ಅಮ್ರೋ ಜಿಲ್ಲೆಯಲ್ಲಿ ವಾಸವಾಗಿದ್ದಾಳೆ. ಈಗಾಗಲೇ ಈಕೆ ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾಳೆ. ಪ್ರಸ್ತುತ 12ನೇ ತರಗತಿಯ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪ್ರೀತಿಯ ಸಲುವಾಗಿ ಶಬಾನಾ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವಾನಿ ಅಂತ ಹೆಸರನ್ನೂ ಸಹ ಬದಲಾಹಿಸಿಕೊಂಡಿದ್ದಾಳೆ.

ಇದನ್ನೂ ಓದಿ:ಭಾರತದ ಟಾಪ್ 3 ಶ್ರೀಮಂತ ರಾಜ್ಯಗಳು ಇವು.. ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತೆ..?

30 ವರ್ಷದ ಮಹಿಳೆ 18 ವರ್ಷದ ಹುಡುಗನನ್ನು ಮದುವೆಯಾಗಿರುವ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿದ ಪೊಲೀಸರು, ಸಬಾನಾ ಬಗ್ಗೆ ಕೆಲವು ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಶಿವಾನಿ ಎಂದು ಹೆಸರು ಬದಲಾಯಿಸಿಕೊಂಡಿರುವ ಶಬಾನಾ ಒಬ್ಬ ನಿರ್ಗತಿಕ ಮಹಿಳೆಯಾಗಿದ್ದು, ಈಗಾಗಲೇ ಮದುವೆಯಾಗಿ ಈಕೆಗೆ ಮೂರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. 

ಶಿವಾನಿ ಮೊದಲು ಮೀರತ್‌ನ ವ್ಯಕ್ತಿಯನ್ನು ಮದುವೆಯಾಗಿ ಕೆಲ ವರ್ಷಕ್ಕೆ ಡಿವೊರ್ಸ್‌ ಪಡೆದರು.. ನಂತರ ಎರಡನೇ ಬಾರಿಗೆ ವಿವಾಹವಾದರು. ಆದರೆ, ಶಿವಾನಿಯ ಎರಡನೇ ಪತಿ ಅಪಘಾತದಲ್ಲಿ ಅಂಗವಿಕಲರಾದರು. ಈ ವೇಳೆ ಅಂದ್ರೆ, 2011 ರಲ್ಲಿ ಈಕೆಗೆ 12ನೇ ತರಗತಿ ವಿದ್ಯಾರ್ಥಿನಿ ಪರಿಚಯವಾಗುತ್ತದೆ. ಇದರಿಂದಾಗಿ ಎರಡನೇ ಪತಿಗೆ ವಿಚ್ಛೇದನ ನೀಡಿ, ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದಾಳೆ.

ಇದನ್ನೂ ಓದಿ:ಹಿಂದೂ ಪವಿತ್ರ "ತಿಲಕ"ಗಳನ್ನು "ಲೈಂಗಿಕ ಕ್ರಿಯೆ" ಭಂಗಿಗಳಿಗೆ ಹೋಲಿಸಿದ ಸಚಿವ..! ಭುಗಿಲೆದ್ದ ಆಕ್ರೋಶ..

ಶಿವಾನಿಯ 12ನೇ ತರಗತಿಯ ವಿದ್ಯಾರ್ಥಿನಿಯೊಂದಿಗಿನ ಪ್ರೇಮ ಮತ್ತು ವಿವಾಹದ ಸುದ್ದಿ ವೈರಲ್ ಆಗುತ್ತಿದ್ದಂತೆ, ಅನೇಕ ಜನರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶಾಲಾ ಬಾಲಕನ ಜೊತೆ ಮಹಿಳೆಯ ವಿವಾಹ ಕಾನೂನುಬದ್ಧ ಅಪರಾಧವಾಗಿದ್ದು, ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News