ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಬಿಲ್ಗ್ರಾಮ್‌ನ ಸಿಎನ್‌ಜಿ ಇಂಧನ ಕೇಂದ್ರದಲ್ಲಿ ಭಾನುವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಸುರಕ್ಷತಾ ನಿಯಮಗಳ ಕುರಿತು ಉಂಟಾದ ವಾಗ್ವಾದದ ನಂತರ ಓರ್ವ ಮಹಿಳೆ ಇಂಧನ ಕೇಂದ್ರದ ಉದ್ಯೋಗಿಯ ಮೇಲೆ ಲೈಸೆನ್ಸ್‌ಡ್ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ್ದಾಳೆ.ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಬಿಲ್ಗ್ರಾಮ್ ಸಿಎನ್‌ಜಿ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ರಜನೀಶ್ ಕುಮಾರ್, ಸುರಕ್ಷತಾ ಕಾರಣಗಳಿಂದ ಇಂಧನ ತುಂಬುವ ಮುನ್ನ ಚಾಲಕ ಎಹಸಾನ್ ಖಾನ್ ಮತ್ತು ಅವರ ಕುಟುಂಬದವರನ್ನು ವಾಹನದಿಂದ ಇಳಿಯುವಂತೆ ಕೇಳಿದ್ದರು. ಆದರೆ, ಈ ಕೋರಿಕೆ ವಾಗ್ವಾದಕ್ಕೆ ತಿರುಗಿ, ರಜನೀಶ್ ಕುಮಾರ್ ಮತ್ತು ಎಹಸಾನ್ ಖಾನ್ ನಡುವೆ ದೈಹಿಕ ಘರ್ಷಣೆಯಾಗಿದೆ. ಈ ವೇಳೆ ಎಹಸಾನ್ ಖಾನ್‌ರ ಮಗಳು ಆರಿಬಾ ಖಾನ್ (ಅಲಿಯಾಸ್ ಸುರೇಶ್) ಮಧ್ಯಪ್ರವೇಶಿಸಿ, ಕಾರಿನಿಂದ .32 ಬೋರ್‌ನ ಲೈಸೆನ್ಸ್‌ಡ್ ರಿವಾಲ್ವರ್ ತೆಗೆದುಕೊಂಡು ರಜನೀಶ್ ಕುಮಾರ್‌ಗೆ ತೋರಿಸಿ ಬೆದರಿಕೆ ಹಾಕಿದ್ದಾಳೆ.
The lady with the gun is Ariba Khan. She threatened a salesman with a revolver because he asked her to step out of the car during CNG refueling (As per rule).
Yet the ecosystem keeps propagating that Muslims are living under threat in India. What more freedom do they want? pic.twitter.com/ioL01pIZc8
— Mr Sinha (@MrSinha_) June 16, 2025
ಸಿಸಿಟಿವಿ ದೃಶ್ಯಾವಳಿಯಲ್ಲಿ ಆರಿಬಾ, ಪಿಸ್ತೋಲ್ ಹಿಡಿದು ಧಮ್ಮಿಕಿ ಹಾಕಿದ್ದಾರೆ. ಆದರೂ, ರಜನೀಶ್ ಕುಮಾರ್ ಧೈರ್ಯದಿಂದ ವಾದ ಮುಂದುವರಿಸಿದ್ದಾರೆ. ಆರಿಬಾರ ತಾಯಿ ಹುಸ್ನಾಬಾನೋ ಅವರನ್ನು ಹಿಂದಕ್ಕೆ ಎಳೆದು ಕಾರಿಗೆ ಕರೆದೊಯ್ದಿದ್ದಾರೆ.
ಈ ಘಟನೆಯ ಬಳಿಕ ರಜನೀಶ್ ಕುಮಾರ್, ಬಿಲ್ಗ್ರಾಮ್ ಪೊಲೀಸ್ ಠಾಣೆಯಲ್ಲಿ ಎಹಸಾನ್ ಖಾನ್, ಆರಿಬಾ ಖಾನ್ ಮತ್ತು ಹುಸ್ನಾಬಾನೋ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 115(2), 352, 351(3) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಎಹಸಾನ್ ಖಾನ್‌ಗೆ ಸೇರಿದ ಲೈಸೆನ್ಸ್‌ಡ್ ರಿವಾಲ್ವರ್ ಜೊತೆಗೆ 25 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತ ಕುಟುಂಬಕ್ಕೆ ಕಾನೂನು ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









