Viarl video : ಮದುವೆ ನಡೆಯುತ್ತಿದ್ದಂತೆಯೇ ಹಾರ ಎಸೆದು ಮಂಟಪದಿಂದ ಕೆಳಗಿಳಿದ ವಧು ..!
Bride Groom Video: ಮದುವೆ ಎನ್ನುವುದು ಜೀವನದ ಬಹು ಮುಖ್ಯ ಘಟ್ಟ. ಮದುವೆ ಎಂದರೆ ಅದೊಂದು ಬಹು ದೊಡ್ಡ ಪ್ರಕ್ರಿಯೆ ಎಂದೇ ಹೇಳಬಹುದು. ಹೆಣ್ಣು ಗಂಡನ್ನು ನೋಡುವ ಶಾಸ್ತ್ರದಿಂದ ಹಿಡಿದು ಅನೇಕ ವಿಧಿಗಳನ್ನು ಪೂರೈಸಬೇಕಾಗುತ್ತದೆ.
ಬೆಂಗಳೂರು : Bride Groom Video: ಮದುವೆ ಎನ್ನುವುದು ಜೀವನದ ಬಹು ಮುಖ್ಯ ಘಟ್ಟ. ಮದುವೆ ಎಂದರೆ ಅದೊಂದು ಬಹು ದೊಡ್ಡ ಪ್ರಕ್ರಿಯೆ ಎಂದೇ ಹೇಳಬಹುದು. ಹೆಣ್ಣು ಗಂಡನ್ನು ನೋಡುವ ಶಾಸ್ತ್ರದಿಂದ ಹಿಡಿದು ಅನೇಕ ವಿಧಿಗಳನ್ನು ಪೂರೈಸಬೇಕಾಗುತ್ತದೆ. ಇಷ್ಟಾಗುವ ಹೊತ್ತಿಗೆ ಮನೆ ಮಂದಿಗೆ ಸುಸ್ತೋ ಸುಸ್ತೋ. ಇಷ್ಟಾದರೂ ಕೆಲವೊಮ್ಮೆ ಮಾಡುವೆ ಮಂಟಪದವರೆಗೆ ಬಂದಿರುವ ಸಂಬಂಧ ಕೂಡಾ ಮುರಿದು ಬೀಳುತ್ತದೆ. ಇದಕ್ಕೆ ಕಾರಣ ಅನೇಕ ಇರಬಹುದು. ಕೆಲವೊಮ್ಮೆ ಇಷ್ಟೊಂದು ಸಣ್ಣ ಕಾರಣಕ್ಕೆ ಮಾಡುವೆ ಮುರಿಯುವುದೇ ಎಂಬ ಭಾವನೆ ಬಂದರೆ ಇನ್ನು ಕೆಲವೊಮ್ಮೆ ಈ ನಿರ್ಧಾರ ಸರಿಯಾಗಿಯೇ ಇತ್ತು ಅನ್ನಿಸುತ್ತದೆ.
ಇಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ವಧು ಎದ್ದು ತನಗೆ ಮಾಡುವೆ ಬೇಡ ಎಂದು ಕ್ಯಾತೆ ತೆಗೆದಿದ್ದಾಳೆ. ತನ್ನ ಹೆಗಲ ಮೇಲಿರುವ ಹಾರವನ್ನು ಕಿತ್ತೆಸೆಯುತ್ತಾಳೆ. ತಾನು ಈ ಮಾಡುವೆ ಮಾಡಿಕೊಳ್ಳಲು ಸಾಧ್ಯವೆ ಇಲ್ಲ ಎಂದು ಮಂಟಪ ಬಿಟ್ಟು ಕೆಳಗೆ ಇಳಿಯುತ್ತಾಳೆ. ವಧುವಿನ ಈ ನಿರ್ಧಾರ ನೋಡಿ ಒಂದು ಕ್ಷಣ ಅಲ್ಲಿ ನೆರೆದಿದ್ದವರು ಕಕ್ಕಾಬಿಕ್ಕಿಯಾಗಿದ್ದಾರೆ. ವಧು ಯಾವ ಕಾರಣಕ್ಕಾಗಿ ಈ ನಿರ್ಧಾರ ಎನ್ನುವುದೇ ಅಲ್ಲಿ ನೆರೆದಿದ್ದವರ ಪ್ರಶ್ನೆ ..
ಇದನ್ನೂ ಓದಿ : Viral Video: ನೀವು ಹಿಂದೆಂದೂ ನೋಡಿರದ ಕೊರೊನಾ ಟೆಸ್ಟ್ ನ ಭಯಾನಕ ದೃಶ್ಯಗಳು ಇಲ್ಲಿವೆ!
ವಧು ತಾನು ಯಾಕೆ ಮದುವೆಗೆ ನಿರಾಕರಿಸುತ್ತಿದ್ದೇನೆ ಎನ್ನುವುದನ್ನು ವಿವರಿಸುವುದನ್ನು ಕೂಡಾ ಈ ವಿಡಿಯೋದಲ್ಲಿ ಕಾಣಬಹುದು. ತಾನು ಬಿಎಡ್ ಕೂಡಾ ಮಾಡುತ್ತಿರುವುದಾಗಿ ವಧು ಇಲ್ಲಿ ಹೇಳುತ್ತಾಳೆ. ಆದರೆ ವರ ಅವಿದ್ಯಾವಂತ . ಶಾಲೆ, ಶಿಕ್ಷಣ ಅಂದರೆ ಏನು ಎನ್ನುವುದೇ ಈ ವರನಿಗೆ ಗೊತ್ತಿಲ್ಲ. ಎರಡು ಶಬ್ದ ಇಂಗ್ಲೀಷ್ ಮಾತನಾಡುವುದು ಈ ಮನುಷ್ಯನಿಗೆ ಸಾಧ್ಯವಿಲ್ಲ, ಹಾಗಿರುವಾಗ ಈತನೊಂದಿಗೆ ಬಾಳ್ವೆ ನಡೆಸುವುದು ಹೇಗೆ ಎನ್ನುವುದು ಈ ವಧುವಿನ ಪ್ರಶ್ನೆ.. ಈ ಹೆಬ್ಬೆಟ್ಟು ರಾಜನನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಹೇಳಿ ಮತಾಪ ಬಿಟ್ಟು ಕೆಳಗಿಳಿದಿದ್ದಾಳೆ ವಧು.
ಮಂಟಪದಲ್ಲಿ ವಿದ್ಯಾಭ್ಯಾಸ ಮಾಡಿದ ಹುಡುಗನಿಗೆ ಮದುವೆಗೆ ಬೇಡಿಕೆ ಇಟ್ಟ ವಧುವಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನೆಟ್ಟಿಗರು ಕೂಡಾ ಇ ವಧುವನ್ನು ಭಾರೀ ಹೊಗಳುತ್ತಿದ್ದಾರೆ. ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ memes.bks ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಇದನ್ನೂ ಓದಿ : Snake Viral Video : ಮಾನವ ಹತ್ತಿರ ಬರುತ್ತಿದ್ದಂತೆಯೇ ಸತ್ತು ಬಿದ್ದಂತೆ ನಟಿಸುವ ನಟ ಭಯಂಕರ ಹಾವು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.