Snake Nagamani Original Full Video: ಹಿಂದೂ ಪುರಾಣಗಳಲ್ಲಿ ನಾಗಮಣಿಯನ್ನು ಎಷ್ಟು ಸಂಕ್ಷಿಪ್ತವಾಗಿ ವಿವರಿಸಲಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಮೇಲಾಗಿ ನಾಗಮಣಿಯನ್ನು ಪೌರಾಣಿಕ ಸಿನಿಮಾಗಳಲ್ಲಿ ಪದೇ ಪದೇ ನೋಡುತ್ತಿರುತ್ತೇವೆ. ಆದರೆ ನಾಗಮಣಿ ಕಲ್ಲನ್ನು ಕಾವಲು ಕಾಯುತ್ತಿರುವ ನಾಗರಹಾವನ್ನು ನಿಜವಾಗಿಯೂ ನೋಡಿದ್ದೀರಾ..?
ಇದನ್ನೂ ಓದಿ: ತಿರುಪತಿಯಲ್ಲಿ ದೇವರ ದರ್ಶನ ಪಡೆದು, ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಶಿವಣ್ಣ!!
ನಾಗಮಣಿ ಈ ತಲೆಮಾರಿನ ಅನೇಕರಿಗೆ ತಿಳಿದಿಲ್ಲ. ಇದು ರತ್ನದಂತೆ. ಆದರೆ ಹಾವುಗಳ ತಲೆಯಲ್ಲಿ ಅಪರೂಪಕ್ಕೆ ಕಂಡುಬರುತ್ತದೆ. ಅತ್ಯಂತ ಶಕ್ತಿಶಾಲಿ ಹಾವುಗಳು ತಮ್ಮ ತಲೆಯಲ್ಲಿ ನಾಗಮಣಿಯನ್ನು ಮರೆಮಾಡುತ್ತವೆ. ಆದರೆ ಅನೇಕರು ನಾಗಮಣಿ ಕಲ್ಲನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.
ಹಿಂದೂ ಸಂಪ್ರದಾಯ ಮತ್ತು ಪುರಾಣಗಳಲ್ಲಿ ನಾಗರಹಾವು ಮತ್ತು ನಾಗಮಣಿ ಕಲ್ಲುಗಳಿಗೆ ವಿಶೇಷ ಮಹತ್ವವಿದೆ. ಆದ್ದರಿಂದಲೇ ಪ್ರತಿ ವರ್ಷ ನಾಗರ ಪಂಚಮಿಯಂದು ನಾಗರ ಆರಾಧನೆ ಮಾಡುವುದು ವಾಡಿಕೆ. ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ಪುರಾತನ ದೇವಾಲಯಗಳನ್ನು ನಾಗರಹಾವುಗಳು ರಕ್ಷಿಸುತ್ತಿದ್ದವು ಎಂದು ವಿವಿಧ ಚಲನಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಮೇಲಾಗಿ ಅವುಗಳಲ್ಲಿನ ವಜ್ರಗಳು, ಪಚ್ಚೆಗಳು ಮತ್ತು ಆಭರಣಗಳನ್ನು ಹಾವುಗಳು ಕಾಪಾಡುತ್ತವೆ.
ಇಲ್ಲಿಯವರೆಗೆ ನಾವು ಸಿನಿಮಾ ಧಾರಾವಾಹಿಗಳಲ್ಲಿ ಹಾವು,ಗಳು ಅಂತಹ ವೈಢೂರ್ಯಗಳಿಗೆ ಕಾವಲಾಗಿರುವುದನ್ನು ಕಂಡಿದ್ದೇವೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋ ಎಲ್ಲಿಯದು ಎಂಬುದು ಗೊತ್ತಿಲ್ಲ. ಕೆಲವರು ಇದನ್ನು ಮಧ್ಯಪ್ರದೇಶದ್ದು ಎಂದು ಹೇಳುತ್ತಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಈ ಕಾಯಿಲೆ ಇರುವವರು ರಾತ್ರಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು...! ಇಲ್ಲದಿದ್ದರೆ ಈ ಅಪಾಯ ತಪ್ಪಿದ್ದಲ್ಲ..!
12 ಅಡಿಯ ನಾಗರ ಹಾವು ಹೊಳೆಯುತ್ತಿರುವ ನಾಗಮಣಿ ಕಲ್ಲಿಗೆ ಕಾವಲು ಕಾಯುತ್ತಿದೆ. ಮೇಲಾಗಿ ಈ ಹಾವು ಮಲಗಿಕೊಂಡು ಸಿಳ್ಳೆ ಹೊಡೆಯುತ್ತಿದೆ. 12 ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದು ನಕಲಿ ವಿಡಿಯೋ ಎಂದು ಹಲವರು ಹೇಳಿದ್ದಾರೆ. ಇದು ಮಾರ್ಫ್ ಮಾಡಿರುವ ಎಂದೂ ಸಹ ಹಲವರು ಹೇಳುತ್ತಿದ್ದಾರೆ. ಅದಕ್ಕೆ ತಕ್ಕ ಪುರಾವೆಗಳನ್ನು ಸಹ ಕೆಲವೊಂದು ಮಾಧ್ಯಮಗಳು ರಿಲೀಸ್ ಮಾಡಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ