)
Emotional Video: ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಒಂದಿಷ್ಟು ಹೊಟ್ಟೆ ಹುಣ್ಣಾಗುವಂತೆ ನಗು ತರಿಸಿದರೆ, ಮತ್ತೊಂದಿಷ್ಟು ವಾಸ್ತವತೆಗೆ ಪ್ರತಿಬಿಂಬದಂತಿರುತ್ತವೆ. ಇವೆಲ್ಲದಕ್ಕೂ ಮೀರಿ ಮನಸ್ಸನ್ನು ಕಾಡುವ ದೃಶ್ಯಗಳು ಕೂಡ ವೈರಲ್ ಆಗುತ್ತವೆ.
ತಾಯಿಗಿಂತ ಮೀರಿದ ಬಂಧುವಿಲ್ಲ ಅನ್ನೋದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ತನ್ನ ಕಂದನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಕರುಣಾಮಯಿ ಆಕೆ. ಇಂದು ನಾವು ತಾಯಿ ಮಗ ಸಂಬಂಧದ ಒಂದು ವಿಡಿಯೋದ ಬಗ್ಗೆ ನಿಮಗೆ ಹೇಳಲಿದ್ದೇವೆ.
ಈ ಜಗತ್ತಲ್ಲಿ ಯಾರಿರಲಿ, ಇಲ್ಲದಿರಲಿ. ತಾಯಿಯೇ ಕಂದನ ಮೊದಲ ಗುರು. ಆಕೆಯ ಪ್ರೀತಿ, ಆಶೀರ್ವಾದ, ಪ್ರೋತ್ಸಾಹವೇ ಕಂದನಿಗೆ ಪ್ರಪಂಚವನ್ನೇ ಗೆಲ್ಲುವ ಶಕ್ತಿ ತುಂಬಿಸೋದು. ಅನೇಕರಿಗೆ ಆ ಪ್ರೀತಿಯೂ ಸಿಗುವುದಿಲ್ಲ. ಕಣ್ಣು ತೆರೆಯುವ ಮುನ್ನವೇ ತಾಯಿಯನ್ನು ಕಳೆದುಕೊಂಡ ಅದೆಷ್ಟೋ ಜೀವಗಳು ನಮ್ಮೆಲ್ಲರ ನಡುವೆಯೇ ಬದುಕುತ್ತಿರುತ್ತಾರೆ. ಅವರೆಲ್ಲರೂ ಅಮ್ಮನ ಮಮತೆಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ತಾಯಿಯ ಮಮತೆಗೆ ಬೆಲೆಕೊಡದೆ, ಅವರನ್ನು ಆಶ್ರಮಗಳಲ್ಲಿಯೋ, ಬೀದಿ ಬದಿಯಲ್ಲಿಯೇ ಬಿಟ್ಟು ಕರುಣೆ ಇಲ್ಲದ ಕಟುಕರಂತೆ ಬಿಟ್ಟುಹೋಗುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕಾಣಿಸುವಂತೆ, ಇಲ್ಲಿ ಬಾಲಕನೊಬ್ಬ ತನ್ನ ತಾಯಿಯ ಸಮಾಧಿ ಬಳಿ ಬಂದು ಶಾಲೆಯಲ್ಲಿ ನಡೆದಿರುವ ಎಲ್ಲಾ ವಿಚಾರಗಳನ್ನು ಅಮ್ಮನ ಬಳಿ ಹೇಳುತ್ತಿರುವಂತೆ ಕಾಣುತ್ತದೆ. ಸಮಾಧಿ ಮುಂದೆ ಕುಳಿತುಕೊಂಡು ಒಂದಿಷ್ಟು ಹೊತ್ತು ಮಾತನಾಡಿ, ಬಳಿಕ ಆತನ ಬ್ಯಾಗ್ನಿಂದ ಪುಸ್ತಕ ತೆಗೆದು ಆಕೆಗೆ ತೋರಿಸುತ್ತಿದ್ದಾನೆ. ಅಲ್ಲೇ ಕಣ್ಣೀರು ಒರೆಸುತ್ತಾ ಆ ಸಮಾಧಿಯ ಬಳಿಯೇ ಬಾಲಕ ಮಲಗುತ್ತಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ್ರೆ ಎಂಥಾ ಕಟುಕನ ಮನವೂ ಕರಗಿ ನೀರಾಗುವುದು ಖಂಡಿತ.