King cobra nagamani : ಮಧ್ಯರಾತ್ರಿ ಘಟಸರ್ಪಹೊಂದು ಫಳಫಳ ಹೊಳೆಯುವ ನಾಗಮಣಿಯನ್ನು ಧರಿಸಿ ನೃತ್ಯ ಮಾಡಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಶಾಕ್ ಆಗುತ್ತಿದ್ದಾರೆ. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ...? ಬನ್ನಿ ನೋಡೋಣ..

Nagamani viral video : ಸೃಷ್ಟಿಯಲ್ಲಿ ಆಗಾಗ ಹಲವಾರ ವಿಸ್ಮಯಕಾರಿ ಘಟನೆಗಳು ನಡೆಯುತ್ತಲೇ ಇರುತ್ತವೆ. ವಿಶೇಷ ಪ್ರಾಣಿ ಪಕ್ಷಿಗಳು ಕಾಣಿಸಿಕೊಂಡು ಮನುಷ್ಯರನ್ನು ಅಚ್ಚರಿಗೊಳಿಸುತ್ತವೆ. ಅಲ್ಲದೆ, ನಮ್ಮ ಸುತ್ತಮುತ್ತಲಿರುವ ಹಲವಾರು ಪ್ರಾಣಿಗಳ ವರ್ತನೆ ನಮ್ಮನ್ನು ಆಘಾತಕ್ಕೊಳಗಾಗಿಸುತ್ತೆ.. ಈ ಪೈಕಿ ನಾಗರಹಾವು ಸಹ ಒಂದು..
ಹೌದು.. ನಾಗರಹಾವಿಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನಮಾನ ಇದೆ. ಇದನ್ನು ದೇವರು ಎಂದು ಪರಿಗಣಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ನಾಗಹಾವಿನ ಬಗ್ಗೆ ಪುರಾಣಗಳಲ್ಲಿ ಹಲವಾರು ನಂಬಿಕೆಗಳು ಇವೆ. ಈ ಪೈಕಿ ನಾಗಮಣಿಯ ಕುರಿತು ಇರುವ ಕಥೆ.
ಹಿರಿಯರು ಹೇಳುವಂತೆ ಈ ನಾಗಮಣಿ ನಾಗರಹಾವಿನ ತಲೆಮೇಲೆ ಕಂಡು ಬರುತ್ತೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ಮಣಿಗೆ ವಿಶೇಷ ಶಕ್ತಿ ಇದೆ ಅಂತಲೂ ನಂಬಿಕೆ ಇದೆ. ಈ ಕುರಿತು ಹಲವಾರು ವಿಡಿಯೋಗಳು ಸಹ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡುತ್ತಿವೆ..
ಈ ಪೈಕಿ ಪ್ರಸ್ತುತ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ನಡುರಾತ್ರಿ ನಾಗರಹಾವು ತನ್ನ ತಲೆ ಮೇಲೆ ನಾಗಮಣಿ ಇಟ್ಟುಕೊಂಡು ಬುಸುಗುಡುವ ದೃಶ್ಯ ವಿಡಿಯೋದಲ್ಲಿದೆ. ಇನ್ನು ಈ ವಿಡಿಯೋ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದು, ಇದು ಸುಳ್ಳು AI ರಚಿತ ವಿಡಿಯೋ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಮಾತ್ರ ಜನರ ಗಮನಸೆಳೆಯುತ್ತಿದೆ.