ನವದೆಹಲಿ: ಮದುವೆಯ ಲಡ್ಡು ತಿಂದವರು ಪಶ್ಚಾತ್ತಾಪ ಪಡುತ್ತಾರೆ ಮತ್ತು ತಿನ್ನದವರೂ ಪಶ್ಚಾತ್ತಾಪ ಪಡುತ್ತಾರೆ ಎಂಬ ಪ್ರಸಿದ್ಧ ಗಾದೆ ಮಾತಿದೆ. ಪುರುಷ ಅಥವಾ ಮಹಿಳೆ ಪ್ರತಿಯೊಬ್ಬರೂ ಮದುವೆಯಾಗಲು ಇಷ್ಟಪಡುತ್ತಾರೆ. ಮದುವೆಗಳು ಸ್ವರ್ಗದಲ್ಲಿ ಮಾಡಲ್ಪಡುತ್ತವೆ ಮತ್ತು ಭೂಮಿಯ ಮೇಲೆ ನೆರವೇರುತ್ತವೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬ ಗಂಡಿಗೂ ಒಂದು ಹೆಣ್ಣನ್ನು ದೇವರು ಸೃಷ್ಟಿಮಾಡಿರುತ್ತಾನೆ ಅನ್ನೋ ನಂಬಿಕೆಯೂ ಇದೆ. ಅದೇ ರೀತಿ ವಿಶೇಷ ಮದುವೆಗೆ ಉತ್ತರಪ್ರದೇಶ ಸಾಕ್ಷಿಯಾಗಿದೆ.    


COMMERCIAL BREAK
SCROLL TO CONTINUE READING

ಹೌದು, ಉತ್ತರ ಪ್ರದೇಶದ ಶಾಮ್ಲಿಯ ಕೈರಾನಾದ ನಿವಾಸಿ 2.5 ಅಡಿ ಎತ್ತರದ ಅಜೀಂ ಮನ್ಸೂರಿ ಕೊನೆಗೂ ವಿವಾಹವಾಗಿದ್ದಾರೆ. ಹಾಪುರ್‌ ನಿವಾಸಿ 3 ಅಡಿ ಎತ್ತರದ ಬುಶ್ರಾಳನ್ನು ಅಜೀಂ ಮದುವೆಯಾಗಿದ್ದಾನೆ. ವೈವಾಹಿಕ ಸಂಬಂಧಕ್ಕಾಗಿ ಬಹಳ ವರ್ಷಗಳಿಂದ ಹುಡುಗಿಗಾಗಿ ಹುಡುಕಾಟ ನಡೆಸಿ ನಡೆಸಿ ಅಜೀಂ ಸುಸ್ತಾಗಿ ಹೋಗಿದ್ದ. ಕುಬ್ಜ ವ್ಯಕ್ತಿಯಾಗಿದ್ದ ಕಾರಣ ಆತನಿಗೆ ಹೆಣ್ಣುಗಳೇ ಸಿಗುತ್ತಿರಲಿಲ್ಲ.


ಇದನ್ನೂ ಓದಿ: Snake Dog Fight : ಸ್ನೇಹಿತನನ್ನು ಉಳಿಸಲು ಹಾವಿನೊಂದಿಗೆ ನಾಯಿಯ ಹೋರಾಟ!


32 ವರ್ಷವಾದರೂ ಮದುವೆಯಾಗದ ಕಾರಣ ಅಜೀಂ ತುಂಬಾ ನೊಂದುಕೊಂಡಿದ್ದ. ತನ್ನ ಕನಸಿನ ರಾಣಿ ಎಲ್ಲಿ ಇರುವಳೋ ಅಂತಾ ಊರೂರು ಅಲೆದಾಡಿ ಅಜೀಂ ಸುಸ್ತಾಗಿ ಹೋಗಿದ್ದ. ಅಜೀಂ ಎತ್ತರಕ್ಕೆ ತಕ್ಕಂತೆ ವಧುವನ್ನು ಹುಡುಕುವುದು ದೊಡ್ಡ ಕಷ್ಟವಾಗಿತ್ತು. ಎಷ್ಟು ಹುಡುಕಿದರೂ ನನಗೆ ಕನ್ಯಯೇ ಸಿಗುತ್ತಿಲ್ಲ, ನೀವಾದರೂ ಸಹಾಯ ಮಾಡಿ ಅಂತಾ ರಾಜಕಾರಣಿಗಳ ಬಳಿ ಅಜೀಂ  ಮನವಿ ಮಾಡಿಕೊಂಡಿದ್ದ. ಹೀಗಾಗಿಯೇ ಸುದ್ದಿ ಮಾಧ್ಯಮಗಳಲ್ಲಿ ಅಜೀಂ ಮದುವೆ ಸುದ್ದಿ ದೊಡ್ಡದಾಗಿ ಪ್ರಕಟವಾಗಿತ್ತು.


Funny Video: ಈ ಮಂಗಣ್ಣ ಸೋಪ್‌ ಹಚ್ಚಿ, ಬ್ರಷ್‌ನಿಂದ ಉಜ್ಜಿ ಥೇಟ್‌ ಮನುಷ್ಯರಂತೇ ಬಟ್ಟೆ ಒಗೆಯುತ್ತೆ! 


2021ರ ಏಪ್ರಿಲ್‍ನಲ್ಲಿ ನಿಶ್ಚಿತಾರ್ಥ


ಮದುವೆ ಸಮಾರಂಭವನ್ನು ಅದ್ದೂರಿಯಾಗಿ ಮಾಡಲಾಗಿದ್ದು, ಭರ್ಜರಿ ಮೆರವಣಿಗೆ ಮಾಡಲಾಗಿದೆ. ಸಾವಿರಾರು ಜನರು ಇವರ ಮದುವೆ ವೀಕ್ಷಿಸಿದ್ದು, ಜೋಡಿಗೆ ಶುಭ ಹಾರೈಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.