)
Viral News: ಪ್ರೀತಿ ಎಲ್ಲಿ ಯಾವಾಗ ಯಾರ ಮೇಲಾಗುತ್ತೆ ಗೊತ್ತಾಗಲ್ಲ. ಕೆಲವರು ಮೊದಲ ನೋಟದಲ್ಲಿಯೇ ಕ್ರಷ್ ಆಗಿ ಮದುವೆಯಾಗುತ್ತಾರೆ. ಇನ್ನೂ ಕೆಲವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿ ನಂತರ ಮದುವೆಯಾಗುತ್ತಾರೆ. ಇಂದು ಅನೇಕರು ಲಿವ್ ಇನ್ ರಿಲೇಶನ್ಶಿಪ್ನಲ್ಲಿರಲು ಇಷ್ಟಪಡುತ್ತಾರೆ. ಹೀಗಾಗಿ ಮದುವೆ ಅನ್ನೋ ಕಾನ್ಸೆಪ್ಟ್ ದಿನದಿಂದ ದಿನಕ್ಕೆ ಅರ್ಥ ಕಳೆದುಕೊಳ್ಳುತ್ತಿದೆ.
ಇಂದು ಯುವಕರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. ದುಡ್ಡಿದ್ದವರು, ಐಷಾರಾಮಿಯಾಗಿ ಜೀವನ ನಡೆಸುವವರು ಹೇಗೋ ತಮಗೆ ತಕ್ಕುದಾದ ವರ-ವಧುವನ್ನು ಹುಡುಕಿ ಮದುವೆಯಾಗುತ್ತಾರೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಮಕ್ಕಳಿಗೆ ಇಂದು ಹೆಣ್ಣುಗಳೇ ಸಿಗುತ್ತಿಲ್ಲ. ಹೆಣ್ಣು ನೋಡಲು ಹೋದಾಗ ಸರ್ಕಾರಿ ನೌಕರಿ ಇದ್ದರೆ ಮಾತ್ರ ಹೆಣ್ಣು ಕೊಡುತ್ತೇವೆ... ಇಲ್ಲವೇ ಸಾಕಷ್ಟು ಹಣ-ಆಸ್ತಿ ಇದ್ದರೆ ಮಾತ್ರ ಹೆಣ್ಣು ಕೊಡುವ ಸಂಪ್ರದಾಯ ಇಂದು ಚಾಲ್ತಿಯಲ್ಲಿದೆ.
Unomusore asanzwe aba?? I kigali willy akaba yarakoze ibukwe nuyo munyokuru jeanine_KAMARAZI
Nikuki turiko twisanga aha hantu? pic.twitter.com/CXytl1k6N3
— Uwusobanutse ? (@uwusobanutse) June 17, 2025
ಹೀಗಾಗಿ ಇಂದು ಅನೇಕ ಯುವಕರು ವಯಸ್ಸಿಗೂ ಬಂದರೂ ಮದುವೆಯಾಗದೆ ಸಿಂಗಲ್ ಆಗಿಯೇ ಉಳಿಯುವಂತಾಗಿದೆ. ಇದೆಲ್ಲದರ ನಡುವೆ ಕೆಲವು ಮದುವೆಗಳು ಸಮಾಜದ ಗಮನ ಸೆಳೆಯುತ್ತವೆ. ಕೆಲವರು ವಯಸ್ಸಾದವರನ್ನೇ ಮದುವೆಯಾಗಿ ಸುದ್ದಿಯಾಗುತ್ತಾರೆ. ಕೆಲ ಹುಡುಗಿಯರು ಅಂಕಲ್ಗಳನ್ನ, ತಾತನ ವಯಸ್ಸಿನ ವ್ಯಕ್ತಿಗಳನ್ನ ಮದುವೆಯಾಗಿ ಗಮನ ಸೆಳದರೆ, ಇನ್ನೂ ಕೆಲವು ಯುವಕರು ಆಂಟಿಗಳನ್ನ ಮತ್ತು ವಯಸ್ಸಾದವರನ್ನ ಮದುವೆಯಾಗಿ ಗಮನ ಸೆಳೆದು ಸುದ್ದಿಯಾಗುತ್ತಾರೆ.
ಇದಕ್ಕೆ ಮತ್ತೊಂದು ನಿದರ್ಶನವೇ 85 ವರ್ಷದ ಮುದುಕಿಯನ್ನ 26 ವರ್ಷದ ಯುವಕನೊಬ್ಬ ಮದುವೆಯಾಗಿರುವ ಘಟನೆ. ಹೌದು, ಇದು ಅಚ್ಚರಿಯಾದರೂ ನಿಜ. ಈ ಘಟನೆ ನಡದಿರುವುದು ಆಫ್ರಿಕಾದ ರವಾಂಡ ದೇಶದಲ್ಲಿ. ಕಿಗಾಲಿಯ ವಿಲ್ಲಿಯಲ್ಲಿ ವಾಸಿಸುವ ಯುವಕನೊಬ್ಬ ಅಜ್ಜಿಯನ್ನ ವಿವಾಹವಾಗಿದ್ದಾನೆ. ಸಕ್ಕರೆ ತರಲು ಹೋದಾಗ ಅಜ್ಜಿಯ ಮೇಲೆ ಈ ಯುವಕನಿಗೆ ʼLove at First Sightʼ ಆಗಿತ್ತಂತೆ. ಆತ ತಡಮಾಡದೇ ಅಜ್ಜಿಗೆ ಲವ್ ಪ್ರಪೋಸ್ ಮಾಡಿ ಅದ್ದೂರಿಯಾಗಿ ಮದುವೆಯಾಗಿದ್ದಾನೆ.
ಯುವಕ ಅಜ್ಜಿಯನ್ನ ಮದುವೆಯಾಗಿರೋ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅನೇಕರು ಈ ಸುದ್ದಿ ಕೇಳಿ ಹೌಹಾರಿದ್ದಾರೆ. ಇನ್ನೂ ಮದುವೆಯಾಗಲು ಕಾಯುತ್ತಿರುವ ಸಿಂಗಲ್ಸ್ಗಳ ಕಥೆ ಹೇಳುವುದೇ ಬೇಡ... ಅನೇಕರು ಈ ಜೋಡಿಯ ಫೋಟೋಗಳನ್ನ ನೋಡಿ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ʼ2025ರಲ್ಲಿ ಏನೇನೋ ನೋಡಿದಿರಂತೆ ಇದೊಂದು ಬಾಕಿ ಇತ್ತು ನೋಡಿ..ʼ ಅಂತಾ ಒಬ್ಬರು ಕಾಮೆಂಟ್ ಮಾಡಿದರೆ, ʼಅಭಿನಂದನೆಗಳು ಗೆಳೆಯ... ನಿಮ್ಮ ದಾಂಪತ್ಯ ನೂರು ವರ್ಷ ಸುಖವಾಗಿರಲಿʼ ಅಂತಾ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ