)
Viral News: ಕುಟುಂಬದವರ ಮೇಲಿನ ಕೋಪ ಮತ್ತು ದ್ವೇಷಕ್ಕೆ ವ್ಯಕ್ತಿಯೊಬ್ಬ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನ ನುಂಗಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಹಾಪುರದ ಆಸ್ಪತ್ರೆಯಲ್ಲಿ 40 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 29 ಚಮಚ, 19 ಟೂತ್ ಬ್ರಶ್ ಹಾಗು 2 ಪೆನ್ನುಗಳನ್ನ ತೆಗೆದಿರುವ ವ್ಯೆದ್ಯರು ದಿಗ್ಬ್ರಮೆಗೊಂಡಿದ್ದಾರೆ.
ಬುಲಂದ್ಶಹರ್ ನಿವಾಸಿಯಾದ ಈ ವ್ಯಕ್ತಿಯನ್ನ ಗಾಜಿಯಾಬಾದ್ನ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಲಾಗಿತ್ತು. ತೀವ್ರ ಹೊಟ್ಟೆ ನೋವು ಕಂಡುಬಂದ ಹಿನ್ನಲೆ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಲಾಯಿತು. ಈ ಸ್ಕ್ಯಾನ್ನಿಂಗ್ನಲ್ಲಿ ವ್ಯಕ್ತಿಯ ಹೊಟ್ಟೆಯಲ್ಲಿ ಮೆಟಲ್ ವಸ್ತುಗಳು ಇರುವುದು ಗೊತ್ತಾಗಿತ್ತು.
ನಂತರ ಆತನಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಶಾಕ್ ಆಗಿದ್ದಾರೆ. ಏಕೆಂದರೆ ಆತನ ಹೊಟ್ಟೆಯಲ್ಲಿ 29 ಚಮಚ, 19 ಟೂತ್ ಬ್ರಶ್ ಹಾಗೂ 2 ಪೆನ್ನುಗಳನ್ನ ಪತ್ತೆ ಹಚ್ಚಿದ ವ್ಯೆದ್ಯರು ಹೊರತೆಗೆದಿದ್ದಾರೆ. ಗುರುವಾರ ಆಸ್ಪತ್ರೆಯಿಂದ ವ್ಯಕ್ತಿಯನ್ನ ಡಿಸ್ಚಾರ್ಜ್ ಕೂಡ ಮಾಡಲಾಗಿದೆ.
ಕುಟುಂಬದವರು ನನ್ನನ್ನ ವ್ಯಸನ ಮುಕ್ತ ಕೇಂದ್ರಕ್ಕೆ ತಂದು ಬಿಟ್ಟು ಹೋದರು. ಅಲ್ಲಿ ನನಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಹೀಗಾಗಿ ಕೋಪಗೊಂಡು ಕೈಗೆ ಸಿಕ್ಕ ವಸ್ತುಗಳನ್ನ ನುಂಗಿದ್ದೇನೆ ಅಂತಾ ಶಸ್ತ್ರ ಚಿಕಿತ್ಸೆಗೆ ಒಳಗಾದ ವ್ಯಕ್ತಿ ಹೇಳಿದ್ದಾರೆ. ಈ ವ್ಯಕ್ತಿಯ ವಿಚಿತ್ರ ಸ್ಟೋರಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ತಾಯ್ನಾಡು ತಲುಪಿದ ತಿಲಕಾನಂದ ಪೂಜಾರಿ ಪಾರ್ಥೀವ ಶರೀರ