)
Snake Viral Video: ಮಳೆಗಾಲದಲ್ಲಿ ಹಾವುಗಳು ಬರುವುದು ಸಾಮಾನ್ಯ. ಮನೆಯ ಅಂಗಳ ಅಥವಾ ಹಿತ್ತಲಿನಲ್ಲಿ ಹಾವುಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಯಾರೂ ಇಲ್ಲದಿದ್ದಾಗ ಮನೆಯೊಳಗೂ ಎಂಟ್ರಿ ಕೊಡುತ್ತವೆ. ಆದರೆ ಇಲ್ಲಿ ಹೋಟೆಲ್ನ ಎರಡನೇ ಮಹಡಿಯಲ್ಲಿರುವ ಟಾಯ್ಲೆಟ್ ಕಮೋಡ್ ಮೇಲೆ ಇದ್ದಕ್ಕಿದ್ದಂತೆಯೇ ಬ್ಲ್ಯಾಕ್ ಕೋಬ್ರಾವೊಂದು ಪ್ರತ್ಯಕ್ಷವಾಗಿದ್ದು, ಹೆಡೆ ಎತ್ತಿ ಬುಸ್... ಬುಸ್... ಎಂದಿದೆ. ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟಾಯ್ಲೆಟ್ ಕಮೋಡ್ನಲ್ಲಿ ಕಂಡ ಬಂದ ಈ ಕಪ್ಪು ನಾಗರಹಾವನ್ನ ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.
ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಈ ವೈರಲ್ ಕ್ಲಿಪ್ ಇಂಟರ್ನೆಟ್ ಬಳಕೆದಾರರನ್ನ ಬೆರಗುಗೊಳಿಸಿದೆ. ಪುಷ್ಕರ್ನ ಹೋಟೆಲ್ನ ಎರಡನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. 4 ರಿಂದ 5 ಅಡಿ ಉದ್ದದ ಕಪ್ಪು ನಾಗರಹಾವು ಕಮೋಡ್ನಲ್ಲಿ ಹೆಡೆ ಎತ್ತಿ ಬುಸುಗುಟ್ಟಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನ ಸೆರೆ ಹಿಡಿದಿದ್ದಾರೆ.
ಕಮೋಡ್ ಮೇಲೆ ಹಾವು ಕುಳಿತಿರುವ ಮಾಹಿತಿ ತಿಳಿದ ತಕ್ಷಣವೇ ರಾಜಸ್ಥಾನ ಕೋಬ್ರಾ ತಂಡವು ಸ್ಥಳಕ್ಕೆ ದೌಡಾಯಿಸಿತು. ಉಗರ ರಕ್ಷಕರು ಬ್ಲ್ಯಾಕ್ ಕೋಬ್ರಾವನ್ನ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ನಂತರ ಸ್ಥಳೀಯರು ನೆಮ್ಮದಿಯ ನಿಟ್ಟಿಸಿರುವ ಬಿಟ್ಟಿದ್ದಾರೆ. ಆದರೆ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಮಳೆಗಾಲದಲ್ಲಿ ಹಾವುಗಳು ಅಪಾರ್ಟ್ಮೆಂಟ್ಗಳಿಗೆ, ವಿಶೇಷವಾಗಿ ಹಳ್ಳಿಗಳಲ್ಲಿನ ಮನೆಗಳಿಗೆ ಪ್ರವೇಶಿಸುತ್ತವೆ. ಕೆಲವು ಬಾರಿ ಹಾವುಗಳು ಶೌಚಾಲಯದ ಕಮೋಡ್ಗೆ ಪ್ರವೇಶಿಸಿ ಆತಂಕ ಮೂಡಿಸುತ್ತವೆ. ಅನೇಕರು ಕಮೋಡ್ನಲ್ಲಿ ಹಾವು ಕಂಡು ಮೂತ್ರ ಮತ್ತು ಮಲ ವಿಸರ್ಜನೆಯೇ ಬಂದ್ ಆಗಿರುವ ಘಟನೆಯೂ ನಡೆದಿವೆ.
Pushker के एक Hotel कमोड से निकला 5 फीट लंबा Cobra | Ajmer | Cobra Snake | Viral |#Ajmer #Rajasthan #Cobra #CobraSnake #Snake pic.twitter.com/qTPLR6Ubzj
— भारत की बात (@Bharatkebat) September 20, 2025
ಟಾಯ್ಲೆಟ್ಗೆ ಅಂತಾ ಹೋದವರು ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷವಾದ ಹಾವುಗಳನ್ನ ಕಂಡು ಹೌಹಾರಿ ಹೋಗಿರುವ ನಿದರ್ಶನಗಳಿವೆ. ವೈರಲ್ ಆಗಿರುವ ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ವೀಕ್ಷಿಸಿದ್ದಾರೆ. ಈ ಘಟನೆ ನೆಟಿಜನ್ಗಳಲ್ಲಿ ಇನ್ನಿಲ್ಲದ ಭಯ ಮೂಡಿಸಿದೆ. ʼಬ್ಲ್ಯಾಕ್ ಕೋಬ್ರಾ ಹೇಗೆ ಒಳಗೆ ಬಂತು?ʼ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. 2 ಅಂತಸ್ತಿನ ಹೋಟೆಲ್ನಲ್ಲಿ ಈ ಹಾವು ಹೇಗೆ ಹೋಗಿರಬಹುದು? ಅಂತಾನೂ ಕೆಲವರು ಪ್ರಶ್ನಿಸಿದ್ದಾರೆ.