Viral Video: ನಡುರಸ್ತೆಯಲ್ಲೇ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಜೋಡಿಗೆ ಇದೇನಾಯ್ತು ನೋಡಿ!! ವಿಡಿಯೋ ಸಖತ್‌ ವೈರಲ್

Bike Stunt Video: ಖುಷಿ ಖುಷಿಯಿಂದಲೇ ಬೈಕ್‌ ಸ್ಟಂಟ್‌ ಮಾಡಿಕೊಂಡು ನಡುರಸ್ತೆಯಲ್ಲಿ ಎಂಜಾಯ್‌ ಮಾಡುತ್ತಿದ್ದ ಈ ಜೋಡಿಗೆ ಕ್ಷಣಮಾತ್ರದಲ್ಲಿ ಆಘಾತ ಉಂಟಾಗಿದೆ. ಏಕೆಂದರೆ ನೋಡನೋಡುತ್ತಲೇ ಯುವಕ ಹಿಡಿದ್ದ ಬೈಕ್‌ನ ಹ್ಯಾಂಡಲ್‌ ಬ್ಯಾಲೆನ್ಸ್ ತಪ್ಪಿದೆ. ಪರಿಣಾಮ ಹಿಂದೆ ಕುಳಿತಿದ್ದ ಯುವತಿ ದಡ್ಡನೇ ಕೆಳಗಡೆ ಬಿದ್ದಿದ್ದಾಳೆ.

Written by - Puttaraj K Alur | Last Updated : Mar 1, 2025, 04:45 PM IST
  • ನಡುರಸ್ತೆಯಲ್ಲಿ ಬೇಕಾಬಿಟ್ಟಿ ಬೈಕ್‌ ವ್ಹೀಲಿಂಗ್‌ ಮಾಡಲು ಹೋಗಿ ಯಡವಟ್ಟು
  • ಬೈಕ್‌ ವ್ಹೀಲಿಂಗ್‌ ವೇಳೆ ಹಿಂದೆ ಕುಳಿತಿದ್ದ ಯುವತಿಗೆ ಏನಾಯ್ತು ನೋಡಿ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
Viral Video: ನಡುರಸ್ತೆಯಲ್ಲೇ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಜೋಡಿಗೆ ಇದೇನಾಯ್ತು ನೋಡಿ!! ವಿಡಿಯೋ ಸಖತ್‌ ವೈರಲ್
ಬೈಕ್‌ ವ್ಹೀಲಿಂಗ್‌ ಯಡವಟ್ಟು!!

Bike Stunt Viral Video: ಇತ್ತೀಚಿಗೆ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವ್ಹೀಲಿಂಗ್‌, ಸ್ಟಂಟ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಲೈಕ್ಸ್‌ ಮತ್ತು ಕಾಮೆಂಟ್‌ಗೋಸ್ಕರ ನಡು ರಸ್ತೆಯಲ್ಲೇ ಸಾಹಸ ಪ್ರದರ್ಶನ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕ್ಯಾರೆ ಅನ್ನದ ಕೆಲವರು ಅಡ್ಡಾದಿಡ್ಡಿ ಬೈಕ್‌ ಚಲಾಯಿಸುವುದು, ವ್ಹಿಲೀಂಗ್‌ ಮತ್ತು ಅಪಾಯಕಾರಿ ಸ್ಟಂಟ್‌ ಮಾಡುತ್ತಿರುತ್ತಾರೆ. ಹೀಗೆ ಹುಚ್ಚಾಟ ಮಾಡಲು ಹೋಗಿ ಅನೇಕರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಈ ರೀತಿಯ ಪುಂಡರಿಗೆ ಏಷ್ಟೇ ಬದ್ಧಿ ಹೇಳಿದರೂ ಅವರ ಹುಚ್ಚಾಟ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದಕ್ಕೆ ನಿದರ್ಶನವೇ ಈಗ ವೈರಲ್‌ ಆಗುತ್ತಿರುವ ಈ ವಿಡಿಯೋ...

Add Zee News as a Preferred Source

ಹೌದು, ಈಗಾಗಲೇ ಬೈಕ್‌ ಮೂಲಕ ಸಾಹಸ ಪ್ರದರ್ಶನ ಮಾಡಲು ಹೋಗಿ ಅನೇಕರು ತಮ್ಮ ಮೂಳೆಗಳು ಮತ್ತು ಪಕ್ಕೆಲುಬುಗಳನ್ನು ಮುರಿದುಕೊಂಡಿದ್ದಾರೆ. ಹೀಗಿದ್ದರೂ ಈ ರೀತಿಯ ಸ್ಟಂಟ್‌ ಮಾಡುವ ಭೂಪರಿಗೆ ಇನ್ನು ಬುದ್ಧಿ ಬಂದಿಲ್ಲ. ಇತ್ತೀಚೆಗೆ ಇದೇ ರೀತಿಯ ಸ್ಟಂಟ್ ಮಡಲು ಹೋಗಿ ಯುವಕನೊಬ್ಬ ಯಡವಟ್ಟು ಮಾಡಿಕೊಂಡಿದ್ದಾನೆ. ಆತನ ಯಡವಟ್ಟು ಸ್ಟಂಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವೈರಲ್‌ ವಿಡಿಯೋದಲ್ಲಿ ಆ ಯುವಕ ತನ್ನ ಗೆಳತಿಯನ್ನ ಹಿಂದೆ ಕುರಿಸಿಕೊಂಡಿರುತ್ತಾನೆ. ಆಕೆಯೂ ಈತನ ವ್ಹೀಲಿಂಗ್‌ ರೈಡ್‌ಅನ್ನ ಎಂಜಾಯ್‌ ಮಾಡುತ್ತಿರುತ್ತಾಳೆ. 

ಇದನ್ನೂ ಓದಿ: ಭಾರಿ ನಿರೀಕ್ಷೆಯಲ್ಲಿದ್ದ ಪಿಎಫ್ ಖಾತೆದಾರರಿಗೆ ಶಾಕಿಂಗ್ ನ್ಯೂಸ್..! ಹುಸಿಯಾದ ಖಾತೆದಾರರ ನಿರೀಕ್ಷೆ..!

ಖುಷಿ ಖುಷಿಯಿಂದಲೇ ಬೈಕ್‌ ಸ್ಟಂಟ್‌ ಮಾಡಿಕೊಂಡು ನಡುರಸ್ತೆಯಲ್ಲಿ ಎಂಜಾಯ್‌ ಮಾಡುತ್ತಿದ್ದ ಈ ಜೋಡಿಗೆ ಕ್ಷಣಮಾತ್ರದಲ್ಲಿ ಆಘಾತ ಉಂಟಾಗಿದೆ. ಏಕೆಂದರೆ ನೋಡನೋಡುತ್ತಲೇ ಯುವಕ ಹಿಡಿದ್ದ ಬೈಕ್‌ನ ಹ್ಯಾಂಡಲ್‌ ಬ್ಯಾಲೆನ್ಸ್ ತಪ್ಪಿದೆ. ಪರಿಣಾಮ ಹಿಂದೆ ಕುಳಿತಿದ್ದ ಯುವತಿ ದಡ್ಡನೇ ಕೆಳಗಡೆ ಬಿದ್ದಿದ್ದಾಳೆ. ಈ ವೇಳೆ ಬೈಕ್‌ ರಭಸದಿಂದ ಮುಂದೆ ಚಲಿಸಿದ್ದರಿಂದ ಕಿಡಿ ಹಾರಿದೆ. ಘಟನೆಯಲ್ಲಿ ರಸ್ತೆಗೆ ಬಿದ್ದ ಯುವತಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅದ್ಹೇಗೋ ಯುವಕ ಅಪಾಯದಿಂದ ಪಾರಾಗಿದ್ದಾನೆ.

ಈ ವಿಡಿಯೋವನ್ನು @Human101Nature ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 3.36 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದು, ಸಾವಿರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ʼಇದರಲ್ಲಿ ಯಾರು ಹೆಚ್ಚು ಮೂರ್ಖರು, ಬೈಕ್ ಓಡಿಸುವ ಹುಡುಗನೋ ಅಥವಾ ಆತನ ಹಿಂದೆ ಕುಳಿತುಕೊಂಡಿರುವ ಯುವತಿಯೋ?ʼ ಎಂದು ಬಳಕೆದಾರನೊಬ್ಬ ಪ್ರಶ್ನಿಸಿದ್ದಾನೆ. ʼನಡುರಸ್ತೆಯಲ್ಲಿ ಈ ರೀತಿಯ ಹುಚ್ಚಾಟ ಮಾಡುವವರಿಗೆ ಇದೇ ರೀತಿ ಆಗಬೇಕುʼ ಅಂತಾ ಅನೇಕರು ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿWomen's Day: ವಂಡರ್ಲಾದಲ್ಲಿ ಮಹಿಳೆಯರಿಗೆ ವಿಶೇಷ ಬೈ 1, ಗೆಟ್ 1 ಟಿಕೆಟ್ ಆಫರ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News