ಮದುವೆ ಫೋಟೋಶೂಟ್ ವೇಳೆ ಎಡವಟ್ಟು.. ನಡೆದಿದ್ದು ಮಾತ್ರ ಊಹೆಗೂ ನಿಲುಕದ್ದು! ಅಸಲಿಗೆ ಆಗಿದ್ದೇನು? ವಿಡಿಯೋ ನೋಡಿ!

Pre Wedding Photoshoot: ಕೆನಡಾದಲ್ಲಿ ವಾಸಿಸುವ ಭಾರತ ಮೂಲದ ಈ ಜೋಡಿಯ ಮದುವೆ ಬೆಂಗಳೂರಿನಲ್ಲಿ ನಿಶ್ಚಯವಾಗಿತ್ತು. ಈ ಜೋಡಿಯ ಫೋಟೋಶೂಟ್ ವೇಳೆ ದೊಡ್ಡ ಎಡವಟ್ಟಾಗಿದ್ದು, ಯಾರ ಊಹೆಗೂ ನಿಲುಕದ ಘಟನೆ ನಡೆದುಹೋಗಿದೆ.

Written by - Puttaraj K Alur | Last Updated : Mar 22, 2025, 07:25 PM IST
  • ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ವೇಳೆ ನಡೆಯಿತು ದೊಡ್ಡ ಎಡವಟ್ಟು
  • ಕಲರ್‌ ಬಾಂಬ್‌ ಸ್ಫೋಟಗೊಂಡು ಆಸ್ಪತ್ರೆ ಸೇರಿದ ವಧು
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಿದೆ ವಿಡಿಯೋ
ಮದುವೆ ಫೋಟೋಶೂಟ್ ವೇಳೆ ಎಡವಟ್ಟು.. ನಡೆದಿದ್ದು ಮಾತ್ರ ಊಹೆಗೂ ನಿಲುಕದ್ದು! ಅಸಲಿಗೆ ಆಗಿದ್ದೇನು? ವಿಡಿಯೋ ನೋಡಿ!
ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಎಡವಟ್ಟು!!

Pre Wedding Photoshoot Viral Video: ಇಂದು ಮದುವೆ ಫೋಟೋಶೂಟ್‌ ಸಖತ್‌ ಟ್ರೆಂಡ್‌... ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಸಂಗಾತಿಗಳು ವಿವಿಧ ರೀತಿಯಲ್ಲಿ ಪ್ರಿ ವೆಡ್ಡಿಂಗ್‌  ಫೋಟೋಶೂಟ್‌ ಮತ್ತು ವಿಡಿಯೋ ಶೂಟ್‌ ಮಾಡಿಸುವುದು ಕಾಮನ್.‌ ಅನೇಕರು ಅಪಾಯಕಾರಿ ರೀತಿಯಲ್ಲಿ ಫೋಟೋಶೂಟ್‌ ಮಾಡಿಸುತ್ತಾರೆ. ಫೋಟೋಶೂಟ್‌ ಮಾಡಿಸಲು ಹೋಗಿ ಅನೇಕರು ದುರಂತ ಅಂತ್ಯ ಕಂಡವರು ಇದ್ದಾರೆ. ಅದಕ್ಕೆ ಮತ್ತೊಂದು ನಿದರ್ಶನವೇ ಈ ಜೋಡಿಯ ಫೋಟೋಶೂಟ್‌...

Add Zee News as a Preferred Source

ಕೆನಡಾದಲ್ಲಿ ವಾಸಿಸುವ ಭಾರತ ಮೂಲದ ಈ ಜೋಡಿಯ ಮದುವೆ ಬೆಂಗಳೂರಿನಲ್ಲಿ ನಿಶ್ಚಯವಾಗಿತ್ತು. ಈ ಜೋಡಿಯ ಫೋಟೋಶೂಟ್ ವೇಳೆ ದೊಡ್ಡ ಎಡವಟ್ಟಾಗಿದ್ದು, ಯಾರ ಊಹೆಗೂ ನಿಲುಕದ ಘಟನೆ ನಡೆದುಹೋಗಿದೆ. ಹೌದು, ಫೋಟೋಶೂಟ್‌ ವೇಳೆ ಕಲರ್ ಬಾಂಬ್ ಸ್ಫೋಟಗೊಂಡು ವಧು ಗಾಯಗೊಂಡಿದ್ದಾಳೆ. ಈ ಕಲರ್ ಬಾಂಬ್ ಎನ್ನುವುದು ಅಲಂಕಾರಿಕ ಪೈರೋಟೆಕ್ನಿಕ್ ಅಥವಾ ಹೊಗೆ ಸಾಧನವಾಗಿದೆ. ಇದು ಬಣ್ಣದ ಪುಡಿ ಅಥವಾ ಹೊಗೆಯನ್ನು ಬಿಡುಗಡೆ ಮಾಡುತ್ತದೆ. ಇದನ್ನು ಹೆಚ್ಚಾಗಿ ಸಂಭ್ರಾಚರಣೆ, ಫೋಟೋಶೂಟ್‌ಗಳು ಮತ್ತು ಕಾರ್ಯಕ್ರಮಗಳಲ್ಲಿ ದೃಶ್ಯ ಪರಿಣಾಮಗಳಿಗಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: ಹೈಕೋರ್ಟ್‌ ನ್ಯಾಯಾಧೀಶರ ತಿಂಗಳ ಸಂಬಳ ಎಷ್ಟಿರುತ್ತೆ ಗೊತ್ತೆ..? ಉತ್ತರ ನಿಮ್ಮ ಊಹೆಗೂ ಮೀರಿದ್ದು..!

ತಮ್ಮ ಮದುವೆಯ ಫೋಟೋಶೂಟ್‌ ಕಲರ್‌ಫುಲ್‌ ಆಗಿರಲಿ ಎಂದು ಈ ಜೋಡಿ ಕಲರ್‌ ಬಾಂಬ್‌ ಬಳಸಲು ನಿರ್ಧರಿಸಿದೆ. ಆದರೆ ಆ ಕಲರ್‌ ಬಾಂಬ್‌ನಿಂದ ಎಡವಟ್ಟಾಗಿದ್ದು, ವಧು ಆಸ್ಪತ್ರೆ ಸೇರುವಂತಾಗಿದೆ. ವೈರಲ್‌ ಸದ್ಯ ವೈರಲ್‌ ಆಗಿರೋ ವಿಡಿಯೋವನ್ನ ನೀವು ನೋಡಿದ್ರೆ ಈ ರೀತಿಯ ಫೋಟೋಶೂಟ್‌ ಹುಚ್ಚಾಟ ಯಾರಿಗೆ ಬೇಕು ಅಂತೀರಾ?! ಈ ವಿಡಿಯೋದಲ್ಲಿ ವರ ವಿಕ್ಕಿ ಎಂಬಾತ ವಧು ಪಿಯಾಳನ್ನು ಎತ್ತಿಕೊಂಡಿರುತ್ತಾನೆ. ಹಿಂದಿನಿಂದ ಕಲರ್‌ ಬಾಂಬ್‌ ಸ್ಫೋಟಿಸಲಾಗುತ್ತದೆ. ಆದರೆ ಆ ಕಲರ್‌ ಬಾಂಬ್‌ ಸ್ಫೋಟಕ್ಕೆ ಪಿಯಾಳ ಕೂದಲು ಸುಟ್ಟುಹೋಗಿವೆ, ಆಕೆಯ ಕೈ ಮತ್ತು ಸೊಂಟ ಮತ್ತಿತರ ದೇಹದ ಭಾಗಕ್ಕೆ ಸುಟ್ಟಗಾಯಗಳಾಗಿವೆ.

ಖುಷಿಯಲ್ಲಿದ್ದ ಈ ಜೋಡಿಯ ಮೊಗದಲ್ಲಿ ಕ್ಷಣಮಾತ್ರದಲ್ಲಿ ನಗು ಮಾಯವಾಗಿ ದುಃಖ ಆವರಿಸಿಕೊಂಡಿದೆ. viaparadise ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ʼನಾವು ಖುಷಿಯಿಂದ ಫೋಟೋಶೂಟ್‌ನಲ್ಲಿ ಪಾಲ್ಗೊಂಡಿದ್ದೇವು. ಕಲರ್‌ ಬಾಂಬ್‌ನಿಂದ ಫೋಟೋಶೂಟ್‌ ಮತ್ತಷ್ಟು ಕಲರ್‌ಫುಲ್‌ ಆಗುತ್ತದೆ ಅಂದುಕೊಂಡಿದ್ದೇವು. ಆದರೆ ಅದು ಸ್ಫೋಟಗೊಂಡು ನಮ್ಮ ಮೇಲೆ ಬಿದ್ದು ಗಾಯಗಳನ್ನು ಮಾಡಿತು. ಇದು ದುರದೃಷ್ಟಕರ ಸಂಗತಿ. ಒಮ್ಮೊಮ್ಮೆ ನಾವು ಅಂದುಕೊಂಡಂತೆ ಆಗುವುದಿಲ್ಲ ಅನ್ನೋದಕ್ಕೆ ಇದು ಸ್ಪಷ್ಟ ನಿದರ್ಶನʼವೆಂದು ಜೋಡಿ ಹೇಳಿದೆ.

ಇದನ್ನೂ ಓದಿ: 50ರ ಅಂಕಲ್‌ ಜೊತೆ 20ರ ಯುವತಿ ರೊಮ್ಯಾನ್ಸ್‌, ನಡು ಬೀದಿಯಲ್ಲೇ ಮುದ್ದಾಟ..! ವಿಡಿಯೋ ಲೀಕ್‌

ಇನ್ನೂ ಇದೇ ವಿಡಿಯೋದಲ್ಲಿ ವಧು ಪಿಯಾ ಆಸ್ಪತ್ರೆಗೆ ದಾಖಲಾಗಿರುವುದನ್ನು ತೋರಿಸಲಾಗಿದೆ. ಸ್ಫೋಟದ ಪರಿಣಾಮ ಆಕೆಯ ಮೈ-ಕೈ ಮತ್ತು ಬೆನ್ನಿನ ಮೇಲೆ ಸುಟ್ಟ ಗಾಯಗಳಾಗಿರುವುದನ್ನು ನೀವು ಕಾಣಬಹುದು. ವೈರಲ್ ಆಗಿರೋ ಈ ವಿಡಿಯೋ 64 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ʼಸಿಂಪಲ್‌ ಆಗಿ ಫೋಟೋಶೂಟ್‌ ಮಾಡಿಸಿದರೆ ಉತ್ತಮ, ಈ ರೀತಿಯ ಹುಚ್ಚಾಟ ಮಾಡಲು ಹೋದರೆ ಖಂಡಿತ ಎಡವಟ್ಟು ಆಗುತ್ತದೆʼ ಅಂತಾ ಅನೇಕರು ಕಾಮೆಂಟ್‌ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News