Donald Trump Viral Video: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಸಖತ್ ಸೌಂಡ್ ಮಾಡುತ್ತಿದ್ದಾರೆ. ತಮ್ಮ ಟ್ಯಾರಿಫ್ ನೀತಿಯಿಂದ ಇಡೀ ಜಗತ್ತಿಗೆ ತಲ್ಲಣವನ್ನುಂಟು ಮಾಡಿರುವ ಟ್ರಂಪ್ ಭಾರತಕ್ಕೂ ದೊಡ್ಡ ತಲೆನೋವಾಗಿದ್ದಾರೆ. ಇತ್ತೀಚೆಗಷ್ಟೇ ತಾನೇ ಮಧ್ಯಸ್ಥಿಕೆ ವಹಿಸಿ ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸುವಂತೆ ಮಾಡಿದೆ ಎಂದು ಹೇಳಿದ್ದ ಟ್ರಂಪ್, ನಂತರ ಉಲ್ಟಾ ಹೊಡೆದಿದ್ದರು. ತಮ್ಮ ಟ್ಯಾರಿಫ್ ನೀತಿಯಿಂದ ಅಮೆರಿಕ, ಭಾರತ ಸೇರಿದಂತೆ ಜಗತ್ತಿನ ಎಲ್ಲಾ ಷೇರು ಮಾರುಕಟ್ಟೆಯನ್ನೇ ಶೇಕ್ ಶೇಕ್ ಮಾಡಿದ್ದ ಟ್ರಂಪ್ ವಿಶ್ವಕ್ಕೆ ತಾನೇ ದೊಡ್ಡಣ್ಣ ಆಗಬೇಕೆಂಬ ಹಪಹಪಿಗೆ ಬಿದ್ದಿದ್ದಾರೆ.
ಭಾರತ ತಮಗೆ 0 ಟ್ಯಾಕ್ಸ್ ವಿಧಿಸಲು ಒಪ್ಪಿದೆ ಎಂದು ಹೇಳಿರುವ ಟ್ರಂಪ್ ಎಲ್ಲಾ ದೇಶಗಳ ಮೇಲೆ ತೆರಿಗೆ ಸಮರ ಸಾರಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರ ನಡೆಯಿಂದ ಭಾರತವೂ ಸೇರಿದಂತೆ ಜಗತ್ತಿನಲ್ಲಿ ಏನಾಗಲಿದೆ ಅನ್ನೋ ಕುತೂಹಲ ಮೂಡಿದೆ. ಇದೆಲ್ಲದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಟ್ರಂಪ್ ಕುಲ್ಫಿ ಮಾರುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ಪಾಕಿಸ್ತಾನದಲ್ಲಿ ಟ್ರಂಪ್ರನ್ನೇ ಹೋಲುವ ವ್ಯಕ್ತಿಯೊಬ್ಬ ಕುಲ್ಫಿ ಮಾರಾಟ ಮಾಡುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.
ಇದನ್ನೂ ಓದಿ: ನಿಜವಾಗುತ್ತಿದೆ ಪಾಕಿಸ್ತಾನದ ಬಗ್ಗೆ ಬಾಬಾ ವಂಗಾ ನುಡಿದಿದ್ದ ಆಘಾತಕಾರಿ ಭವಿಷ್ಯ..!
शेयर मार्केट में सारे पैसे डुबाने के बाद डॉनल्ड ट्रंप#stockmarketcrash #Nifty #Sensex pic.twitter.com/zJdZFrkgcy
— Raja Babu (@GaurangBhardwa1) April 7, 2025
@GaurangBhardwa1 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಟ್ರಂಪ್ರಂತೆ ಕಾಣುವ ವ್ಯಕ್ತಿಯೊಬ್ಬರು ಪಾಕಿಸ್ತಾನದ ರಸ್ತೆಯಲ್ಲಿ ಕುಲ್ಫಿ ಮಾರುತ್ತಿರುವುದನ್ನ ಕಾಣಬಹುದು. ಅದ್ಭುತವಾಗಿ ಹಾಡು ಹಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆ ವ್ಯಕ್ತಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ. ಇದು ಅನೇಕ ಜನರ ಗಮನ ಸೆಳೆದಿದೆ. ಈ ವಿಡಿಯೋವನ್ನು ಇದುವರೆಗೆ ಒಂದು ಮಿಲಿಯನ್ ಜನರು ವೀಕ್ಷಿಸಿದ್ದು, ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಇದೀಗ ಪಾಕಿಸ್ತಾನದಲ್ಲಿ ತುಂಬಾ ಫೇಮಸ್ ಆಗಿದ್ದಾನೆ.
ಅದ್ಭುತವಾಗಿ ಹಾಡು ಹಾಡುವ ಮೂಲಕ ಕುಲ್ಫಿ ಮಾರಾಟ ಮಾಡುತ್ತಿರುವ ನಕಲಿ ಟ್ರಂಪ್ ವಿಡಿಯೋ ಜನರ ಗಮನ ಸೆಳೆದಿದೆ. ಅನೇಕರು ಇದೇನಿದು ಟ್ಯಾರಿಫ್ ಮೂಲಕ ಇಡೀ ಜಗತ್ತನ್ನೇ ನಡುಗಿಸಿದ್ದ ಟ್ರಂಪ್ ಕುಲ್ಫಿ ಮಾರಾಟಕ್ಕೆ ನಿಂತ್ರಾ? ಅಂತಾ ಕೆಲವರು ಪ್ರಶ್ನಿಸಿದ್ರೆ, ಇನ್ನೂ ಕೆಲವರು ಈಗಾಗಲೇ ಹಳ್ಳ ಹಿಡಿದಿರುವ ಪಾಕಿಸ್ತಾನದಲ್ಲಿ ಟ್ರಂಪ್ ಕುಲ್ಫಿ ವ್ಯಾಪಾರ ಮಾಡಿ ಎಷ್ಟು ಲಾಭ ಮಾಡ್ತಾರೆ ಅಂತಾ ಹಾಸ್ಯಚಟಾಕಿ ಹಾರಿಸಿದ್ದಾರೆ.
ಇದನ್ನೂ ಓದಿ: ಮದುವೆಯೂ ಮುನ್ನ ವಧುವಿನ ಚಿಕ್ಕಮ್ಮನ ಜೊತೆ ವರನ ಫಸ್ಟ್ ನೈಟ್..! ಇಂದಿಗೂ ಚಾಲ್ತಿಯಲ್ಲಿದೆ ವಿಚಿತ್ರ ಸಂಪ್ರದಾಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ