)
Viral Video: ಇಂದು ಭಾರತದಲ್ಲಿ ಡಿಜಿಟಲ್ ಪಾವತಿಯ ಬಳಕೆ ತುಂಬಾ ಸಾಮಾನ್ಯವಾಗಿದೆ. ಮೊದಲು ಜನರು ಅಂಗಡಿಗಳಿಗೆ ಹೋಗಲು ತಮ್ಮ ಜೇಬಿನಿಂದ ಪರ್ಸ್ ತೆಗೆಯುತ್ತಿದ್ದರು, ಆದರೆ ಈಗ ಅವರು ಡಿಜಿಟಲ್ ಪಾವತಿಗಳನ್ನು ಮಾಡಲು ತಮ್ಮ ಜೇಬಿನಿಂದ ಫೋನ್ ತೆಗೆದು QR ಕೋಡ್ಗಳನ್ನು ಸ್ಕ್ಯಾನ್ ಮಾಡುತ್ತಾರೆ. ನೀವು ಕೂಡ ಈ ರೀತಿಯೇ ಆನ್ಲೈನ್ ಪಾವತಿಗಳನ್ನು ಮಾಡುತ್ತಿರಬೇಕು. ಇಂದು ಡಿಜಿಟಲ್ ಪಾವತಿಯು ಜನರ ಜೀವನವನ್ನು ಸುಲಭಗೊಳಿಸಿದೆ. ಏಕೆಂದರೆ ಈಗ ನಗದು ರೂಪದಲ್ಲಿ ಹಣ ಇಟ್ಟುಕೊಳ್ಳುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆದರೆ ಈಗ ನಾವು ತೋರಿಸುತ್ತಿರುವ ಈ ವಿಡಿಯೋವನ್ನ ನೋಡಿದ್ರೆ ದೇಶ ಈ ಮಟ್ಟಿಗೆ ಡಿಜಿಟಲ್ ಆಗುತ್ತೆ ಅಂತಾ ನೀವು ಸಹ ಊಹಿಸಿಕೊಂಡಿರಲ್ಲ.
ಹೌದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಲಕ್ಷಾಂತರ ಜನರು ಗಮನ ಸೆಳೆಯುತ್ತಿದೆ. ಅಂದಹಾಗೆ ಈ ವೈರಲ್ ವಿಡಿಯೋದಲ್ಲಿ ಮದುವೆ ಮೆರವಣಿಗೆಯೊಂದು ನಡೆಯುತ್ತಿದೆ. ವಾದ್ಯ ನುಡಿಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ಫೋನ್ ಹಿಡಿದಿದ್ದಾರೆ. ಅದರಲ್ಲಿ QR ಕೋಡ್ ಗೋಚರಿಸುತ್ತದೆ. ಮದುವೆಯ ಪಾರ್ಟಿಯಲ್ಲಿ ಭಾಗವಹಿಸುವ ಮತ್ತೊಬ್ಬ ವ್ಯಕ್ತಿಯು ಕೋಡ್ ಸ್ಕ್ಯಾನ್ ಮಾಡಿ ನಂತರ ಅದನ್ನು ವರನ ತಲೆಯ ಮೇಲೆ ತಿರುಗಿಸುತ್ತಾನೆ. ಜನರು ಮಾಡುವಂತೆಯೇ ಆತನೂ ಮಾಡುತ್ತಾನೆ. ಫೋನ್ ತಿರುಗಿಸಿದ ನಂತರ ಆತ ಅದರಲ್ಲಿ ಮೊತ್ತವನ್ನು ದಾಖಲಿಸಿ ನಂತರ ಪಾಸ್ವರ್ಡ್ ನಮೂದಿಸಿ ಬ್ಯಾಂಡ್ ಸದಸ್ಯರಿಗೆ ಪಾವತಿಸುತ್ತಾನೆ. ಇದು ಡಿಜಿಟಲ್ ಪಾವತಿಯ ವಿಶಿಷ್ಟ ಬಳಕೆಯಾಗಿದ್ದು, ಅದಕ್ಕಾಗಿಯೇ ಈ ವೀಡಿಯೊ ವೈರಲ್ ಆಗುತ್ತಿದೆ.
Indian day by day ? pic.twitter.com/dnuIhXpWt4
— Bhoomika Maheshwari (@sankii_memer) May 27, 2025
ಇಂದು ಪ್ರತಿಯೊಂದಕ್ಕೆ ಡಿಜಿಟಲ್ ಪಾವತಿ ವ್ಯವಸ್ಥೆ ಸೌಲಭ್ಯವನ್ನ ಬಳಸಿಕೊಳ್ಳಲಾಗುತ್ತಿದೆ. ನೀವು ಯಾವುದೇ ದೇವಸ್ಥಾನಕ್ಕೆ ಹೋದರೆ ಅಲ್ಲಿಯೂ ನೀವು ಇ-ಹುಂಡಿಗಳನ್ನು ಕಾಣಬಹುದು. ಅಲ್ಲಿ ನೀವು QR ಕೋಡ್ ಸ್ಕ್ಯಾನ್ ಮಾಡಿ ದೇಣಿಗೆ ಪಾವತಿಸಬಹುದು. ಎಲ್ಲಾ ಕಡೆಯೂ ಡಿಜಿಟಲ್ ಪಾವತಿ ಇಂದು ಕಾಮನ್ ಆಗಿದೆ. ಅದೇ ರೀತಿ ಮದುವೆ ಸಮಾರಂಭದಲ್ಲಿಯೂ ಡಿಜಿಟಲ್ ಪಾವತಿ ಸೌಲಭ್ಯಗಳನ್ನ ಬಳಸಿಕೊಳ್ಳಲಾಗುತ್ತಿದೆ. ವಧು-ವರನಿಗೂ ಇಂದು ಡಿಜಿಟಲ್ ಪಾವತಿಯ ಮೂಲಕ ಕಾಣಿಕೆ ನೀಡಲಾಗುತ್ತಿದೆ. ಅದೇ ರೀತಿ ಪ್ರತಿಯೊಂದು ಮದುವೆ ಖರ್ಚಿಗೂ ಡಿಜಿಟಲ್ ಪಾವತಿ ಬಳಕೆಯಾಗುತ್ತಿದೆ.
ನೀವು ವೀಕ್ಷಿಸಿದ ಈ ವಿಡಿಯೋವನ್ನು @sankii_memer ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ 'ಭಾರತ ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದೆ' ಅಂತಾ ಕ್ಯಾಪ್ಶನ್ ನೀಡಲಾಗುತ್ತಿದೆ. ಅನೇಕರು ʼಡಿಜಿಟಲ್ ಇಂಡಿಯಾʼ ಅಂತಾ ಹೇಳಿದರೆ, ಇನ್ನೂ ಕೆಲವರು ʼನನ್ನ ದೇಶ ಬದಲಾಗುತ್ತಿದೆ, ಪ್ರಗತಿ ಸಾಧಿಸುತ್ತಿದೆʼ ಅಂತಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ