Viral Video: ಗರಿಬಿಚ್ಚಿ ಕುಣಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ... ಮುಂದೇನಾಯ್ತು! ವಿಡಿಯೋ ನೋಡಿ

Tiger Peacock Viral Video: ಈ ವೀಡಿಯೊದಲ್ಲಿ, ನವಿಲು ಕಾಡಿನಲ್ಲಿ ಆರಾಮವಾಗಿ ಗರಿಬಿಚ್ಚಿ ನಲಿಯುತ್ತಿರುವುದನ್ನು ಕಾಣಬಹುದು. ಆದರೆ ಇದ್ದಕ್ಕಿದ್ದಂತೆ, ಒಂದು ಹುಲಿ ಆ ನವಿಲನ್ನು ಹಿಡಿಯಲೆಂದು ಹೊಂಚು ಹಾಕುತ್ತಾ ನವಿಲಿನ ಕಡೆಗೆ ಬರುತ್ತದೆ. ನವಿಲಿಗೆ ಅಪಾಯದ ಅರಿವಾದ ತಕ್ಷಣ, ಅದು ಆತಂಕಗೊಂಡು ಬೇಗನೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ.

Written by - Bhavishya Shetty | Last Updated : Mar 6, 2025, 09:26 PM IST
    • ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವೀಡಿಯೊಗಳು
    • ಹುಲಿ ಮತ್ತು ನವಿಲಿನ ನಡುವಿನ ರೋಮಾಂಚಕಾರಿ ದೃಶ್ಯ
    • ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ
Viral Video: ಗರಿಬಿಚ್ಚಿ ಕುಣಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ... ಮುಂದೇನಾಯ್ತು! ವಿಡಿಯೋ ನೋಡಿ
Tiger Peacock Viral Video

Tiger Peacock Viral Video: ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವೀಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಲ್ಲಿ ಅವುಗಳ ವಿಶಿಷ್ಟ ಕ್ರಿಯೆಗಳು ಮತ್ತು ರೋಮಾಂಚಕಾರಿ ದೃಶ್ಯಗಳನ್ನು ಕಾಣಬಹುದು. ಇತ್ತೀಚೆಗೆ, ಇದೇ ರೀತಿಯ ವೀಡಿಯೊವೊಂದು ಕಾಣಿಸಿಕೊಂಡಿದ್ದು, ಇದರಲ್ಲಿ ಹುಲಿ ಮತ್ತು ನವಿಲಿನ ನಡುವಿನ ರೋಮಾಂಚಕಾರಿ ದೃಶ್ಯವನ್ನು ಸೆರೆಹಿಡಿಯಲಾಗಿದೆ.

Add Zee News as a Preferred Source

ಇದನ್ನೂ ಓದಿ: ಒಂದು ವರ್ಷದವರೆಗೆ ಈ ರಾಶಿಯವರಿಗೆ ಗುರುದೆಸೆ !ಮೂರು ಪಟ್ಟು ವೇಗದಲ್ಲಿ ಕರುಣಿಸುತ್ತಾನೆ ಧನ ಸಂಪತ್ತು ! ತೆರೆದುಕೊಳ್ಳುವುದು ಮನೆ, ಭೂಮಿ ಮತ್ತು ಕಾರು ಖರೀದಿ ಯೋಗ !

ಈ ವೀಡಿಯೊದಲ್ಲಿ, ನವಿಲು ಕಾಡಿನಲ್ಲಿ ಆರಾಮವಾಗಿ ಗರಿಬಿಚ್ಚಿ ನಲಿಯುತ್ತಿರುವುದನ್ನು ಕಾಣಬಹುದು. ಆದರೆ ಇದ್ದಕ್ಕಿದ್ದಂತೆ, ಒಂದು ಹುಲಿ ಆ ನವಿಲನ್ನು ಹಿಡಿಯಲೆಂದು ಹೊಂಚು ಹಾಕುತ್ತಾ ನವಿಲಿನ ಕಡೆಗೆ ಬರುತ್ತದೆ. ನವಿಲಿಗೆ ಅಪಾಯದ ಅರಿವಾದ ತಕ್ಷಣ, ಅದು ಆತಂಕಗೊಂಡು ಬೇಗನೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಹುಲಿ ನವಿಲಿನ ಹತ್ತಿರ ಬಂದ ತಕ್ಷಣ, ನವಿಲು ತಕ್ಷಣವೇ ಎಚ್ಚರಗೊಂಡು ವೇಗವಾಗಿ ಓಡಲು ಪ್ರಾರಂಭಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ನವಿಲಿನ ವೇಗ ಎಷ್ಟು ಹೆಚ್ಚಾಗಿತ್ತೆಂದರೆ ಹುಲಿಗೆ ಹಿಡಿಯಲು ಸಾಧ್ಯವಾಗುವುದಿಲ್ಲ. ನವಿಲು ತನ್ನ ಚುರುಕುತನವನ್ನು ತೋರಿಸಿ ಹತ್ತಿರದ ಮರದ ಕಡೆಗೆ ಓಡಿ ಹೋಗಿ ಅದರ ಎತ್ತರದ ಕೊಂಬೆಯ ಮೇಲೆ ಕುಳಿತುಕೊಳ್ಳುತ್ತದೆ. ಈ ಬುದ್ಧಿವಂತಿಕೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ನವಿಲು. ಹುಲಿ ಸ್ವಲ್ಪ ಸಮಯದವರೆಗೆ ನಿರಾಶೆಯಿಂದ ನವಿಲನ್ನು ನೋಡುತ್ತಲೇ ಇರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಆದರೆ ಏನೂ ಮಾಡಲು ಸಾಧ್ಯವಾಗದೆ ಅಲ್ಲಿಂದ ಹೊರಟು ಹೋಗುತ್ತದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ನವಿಲಿನ ಬುದ್ಧಿವಂತಿಕೆ ಮತ್ತು ಚುರುಕುತನ ಎಲ್ಲರನ್ನೂ ಅಚ್ಚರಿಗೊಳಿಸಿದ್ದು, ಹುಲಿಯ ಪರಭಕ್ಷಕ ಪ್ರವೃತ್ತಿ ಈ ವೀಡಿಯೊವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ. ಇನ್ನು ಹುಲಿಯ ಅಪಾಯದಿಂದ ಪಾರಾದ ನವಿಲು ಮರದ ಎತ್ತರದ ಕೊಂಬೆಯ ಮೇಲೆ ಸುರಕ್ಷಿತವಾಗಿ ಕುಳಿತ ತಕ್ಷಣ, ನೃತ್ಯ ಮಾಡುವ ಮೂಲಕ ತನ್ನ ಸಂತೋಷ ಮತ್ತು ಸಮಾಧಾನವನ್ನು ವ್ಯಕ್ತಪಡಿಸಿದೆ.

 

 

ಇದನ್ನೂ ಓದಿ: ಒಂದು ಚಿತ್ರಕ್ಕೆ 15 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟಿಗೆ ಇಂದು ಒಂದು ಅವಕಾಶಕ್ಕಾಗಿ ಪರೆದಾಡುವ ಸ್ಥಿತಿ! ಬಾಲಿವುಡ್‌ ಆಳಿದ ಫೇಮಸ್‌ ನಟಿ ಈಕೆ.. ಗೆಸ್‌ ಮಾಡಿ

ಈ ಆಸಕ್ತಿದಾಯಕ ವೀಡಿಯೊವನ್ನು @the_leader_hindi ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಇದು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News