Viral Video: ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ವಜ್ರದ ಕಿವಿಯೋಲೆ ಪತ್ತೆಯಾಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ವೈರಲ್ ವಿಡಿಯೋ ಹಿಂದಿನ ಕಥೆ ತಿಳಿದರೆ ನಿಮಗೆ ಶಾಕ್ ಆಗದೆ ಇರಲು ಸಾಧ್ಯವೇ ಇಲ್ಲ.
ಫೆಬ್ರವರಿ 26ರಂದು ಕಳ್ಳನೊಬ್ಬ ಸ್ಥಳೀಯ ಆಭರಣದ ಅಂಗಡಿಯಲ್ಲಿ ಬರೋಬ್ಬರಿ 6 ಕೋಟಿ ರೂ. ಮೌಲ್ಯದ ವಜ್ರದ ಕಿವಿಯೋಲೆಗಳನ್ನು ಕದ್ದು ಓಡಿಹೋಗಿದ್ದ. ಈ ಬಗ್ಗೆ ಆಭರಣದ ಅಂಗಡಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳನನ್ನು ಪತ್ತೆ ಹಚ್ಚಿದ್ದರು.
ಮುಂದೆ ನಡೆದಿದ್ದೆ ಬಲು ರೋಚಕ.
ಇದನ್ನೂ ಓದಿ- ಮದುವೆ ಮೆರವಣಿಗೆಯಲ್ಲಿ ಭಯಾನಕ ಘಟನೆ.. ಕುದುರೆ ಮೇಲೆ ಶವವಾಗಿ ಬದಲಾದ ವರ.. ಆಘಾತಕಾರಿ ವಿಡಿಯೋ ವೈರಲ್!
ವಾಸ್ತವವಾಗಿ, ಎರಡು ಕಿವಿಯೋಲೆಗಳನ್ನು ಕದ್ದಿದ್ದ ಕಳ್ಳ ಮೊದಲೇ 1.3 ಕೋಟಿ ರೂಗೆ ಒಂದು ವಜ್ರದ ಕೋವಿಯೋಲೆಯನ್ನು ಮಾರಾಟ ಮಾಡಿದ್ದನು. ಆತ ಎರಡನೇ ವಜ್ರದ ಓಲೆಯನ್ನು ಮಾರಾಟ ಮಾಡಲು ಕೈಯಲ್ಲಿ ಓಲೆ ಹಿಡಿದಿದ್ದ ಸಂದರ್ಭದಲ್ಲೇ ಪೊಲೀಸರು ಅಂಗಡಿ ಪ್ರವೇಶಿಸಿದ್ದರು. ಇದರಿಂದ ಭಯಭೀತನಾದ ಕಳ್ಳ ಅದನ್ನು ನುಂಗಿ ನೀರು ಕುಡಿದಿದ್ದ. ಕಳ್ಳನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರಿ ಕಾದಿತ್ತು ಶಾಕ್.
ಕಳ್ಳ ತಾನು ಕದ್ದಿದ್ದ ವಜ್ರದ ಓಲೆಯನ್ನು ಎಲ್ಲಿಟ್ಟಿದ್ದಾನೆ ಎಂದು ಬಾಯಿ ಬಿಡಿಸಲು ನಾನಾ ಕಸರತ್ತು ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ ಕಳ್ಳ, ನೀವು ನನ್ನ ಹೊಟ್ಟೆಯಲ್ಲಿ ಏನಿದೆಯೋ ಅದರ ಮೇಲೂ ಕೇಸ್ ಹಾಕ್ತಿರಾ ಎಂದು ಪರೋಕ್ಷವಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಕಳ್ಳನ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಸ್ಕ್ಯಾನಿಂಗ್ ಮಾಡಿಸಿದಾಗ ಆತನ ಹೊಟ್ಟೆಯಲ್ಲಿ ವಜ್ರದ ಕಿವಿಯೋಲೆ ಇರುವುದಾಗಿ ತಿಳಿದುಬಂದಿದೆ. ನಂತರ ಈತನಿಗೆ ಆಪರೇಷನ್ ಮಾಡಿಸಿ ಹೊರತೆಗೆದ ಆಭರಣವನ್ನು ಅಂಗಡಿ ಮಾಲೀಕರಿಗೆ ಹಸ್ತಾಂತರಿಸುವುದುದಾಗಿ ಪೊಲೀಸರು ಹೇಳಿದ್ದಾರೆ.
ಕಳ್ಳ ವಜ್ರದ ಓಲೆಗಳನ್ನು ಕದ್ದು ಓಡುತ್ತಿರುವ ಹಾಗೂ ಅದರ ಕೆಳಗೆ ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಆತನ ಹೊಟ್ಟೆಯೊಳಗೆ ವಜ್ರವಿರುವ ದೃಶ್ಯ ಸದ್ಯ ಸಖತ್ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...
NEW: Man accused of eating $700K worth of Tiffany jewelry during heist in Orlando
Jaythan Lawrence Gilder, 33, from Texas, claimed to represent an Orlando Magic player
Gilder was eventually taken to a VIP room where he was shown several pieces of jewelry totaling nearly $1.4… pic.twitter.com/Bau8tAI3Om
— Unlimited L's (@unlimited_ls) March 5, 2025
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.