King Kobra drinking Water Viral Video: ಕಾಳಿಂಗ ಸರ್ಪಗಳು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಅವುಗಳನ್ನು ಅತ್ಯಂತ ಅಪಾಯಕಾರಿ ವಿಷಪೂರಿತ ಹಾವುಗಳು ಎಂದು ಹೇಳಲಾಗುತ್ತದೆ. ಇವುಗಳು ಅತ್ಯಂತ ಶಕ್ತಿಶಾಲಿ ನರವಿಷಕಾರಿಯನ್ನು ಹೊಂದಿರುತ್ತವೆ. ಅದು ದಾಳಿ ಮಾಡಿದಾಗ, ಅದು ಮಾನವ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಪಿಂಚಣಿ, ತೆರಿಗೆಗೆ ಸಂಬಂಧಿಸಿದಂತೆ ಪ್ರಮುಖ ವಿನಾಯಿತಿ ಘೋಷಿಸಿದ ಸರ್ಕಾರ: ಹಿರಿಯ ನಾಗರೀಕರಿಗೆ ನೇರ ಲಾಭ
ಅನೇಕ ಜನರು ಕಾಳಿಂಗ ಸರ್ಪ ಅಂತಲ್ಲ, ಯಾವುದೇ ಹಾವುಗಳನ್ನು ಕಂಡರೂ ಭಯದಿಂದ ಓಡಿಹೋಗುತ್ತಾರೆ. ಆದರೆ, ಇನ್ನೂ ಕೆಲವರು ಅಂತಹ ಹಾವುಗಳನ್ನು ಮನೆಯಲ್ಲಿಯೇ ಸಾಕುತ್ತಾರೆ. ಅವು ತುಂಬಾ ಅಪಾಯಕಾರಿ ಎಂದು ತಿಳಿದಿದ್ದರೂ ಸಹ ಅವುಗಳನ್ನು ಸಾಕುತ್ತಾರೆ.
ಕಳೆದ ಕೆಲವು ತಿಂಗಳುಗಳಿಂದ, ಹಾವುಗಳಿಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಅನೇಕ ಜನರು ಕಾಳಿಂಗ ಸರ್ಪಗಳ ಬಗ್ಗೆ ವೀಡಿಯೊಗಳನ್ನು ವೀಕ್ಷಿಸಲು ಬಯಸುತ್ತಾರೆ. ಬೇಸಿಗೆ ಸಮೀಪಿಸುತ್ತಿದ್ದಂತೆ, ಕಾಳಿಂಗ ಸರ್ಪಗಳು ಈಗ ಕಾಡನ್ನು ತೊರೆದು ಮಾನವ ವಸತಿ ಪ್ರದೇಶಗಳಿಗೆ ವಲಸೆ ಬರುತ್ತಿವೆ. ಕೆಲವು ಹಾವುಗಳು ನೇರವಾಗಿ ಮನೆಗಳಿಗೆ ಬಂದು ನೀರು ಕುಡಿಯುತ್ತಿವೆ. ಇದಕ್ಕೆ ಸಂಬಂಧಿಸಿದ ಇತ್ತೀಚಿನ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇಲ್ಲಿರುವ ವೀಡಿಯೊದಲ್ಲಿ, ಭಯಾನಕ ಕಾಳಿಂಗ ಸರ್ಪವೊಂದಕ್ಕೆ ವ್ಯಕ್ತಿಯೊಬ್ಬ ನೀರು ಕುಡಿಸುತ್ತಿರುವುದನ್ನು ಕಾಣಬಹುದು. ಕೆಲವು ಸ್ಥಳೀಯರು ಈ ಹಾವು ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವುದನ್ನು ಮೊದಲೇ ಗುರುತಿಸಿ, ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಆ ವ್ಯಕ್ತಿ ಸ್ಥಳಕ್ಕೆ ಆಗಮಿಸಿ, ಹಾವನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಅದೇ ಸಮಯದಲ್ಲಿ, ಹಾವು ಬಾಯಾರಿಕೆಯಾಗಿರುವುದನ್ನು ಗಮನಿಸಿ ಬಾಟಲಿ ಮೂಲಕ ಹಾವಿಗೆ ನೀರು ಕೊಟ್ಟಿದ್ದಾನೆ. ಇದನ್ನು ನೋಡಿದ ಅಲ್ಲಿನ ಜನ ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ನಿರೀಕ್ಷೆಗೆ ಬಿತ್ತು ತೆರೆ !ವೇತನ ಹೆಚ್ಚಳದ ಬಗ್ಗೆ ಹೊರ ಬಂತು ಸ್ಪಷ್ಟ ಮಾಹಿತಿ! ಈ ಆಧಾರದಲ್ಲಿ ಸಿಗಲಿದೆ ಹೈಕ್
ಕಾಳಿಂಗ ಸರ್ಪಗಳು ಸಾಮಾನ್ಯವಾಗಿ ತುಂಬಾ ಆಕ್ರಮಣಕಾರಿ. ಆದರೆ ಆ ವ್ಯಕ್ತಿ ನೀರು ಕೊಟ್ಟ ಸಮಯದಲ್ಲೇ, ಹಾವನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಈಗ ಇದಕ್ಕೆ ಸಂಬಂಧಿಸಿದ ವಿಡಿಯೋ ತೀವ್ರ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.